ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಮಹಿಳಾ ರೋಲರ್ ಸ್ಕೇಟರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
प्रविष्टि तिथि:
02 OCT 2023 10:54AM by PIB Bengaluru
ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಸ್ಪೀಡ್ ಸ್ಕೇಟಿಂಗ್ 3,000 ಮೀ ರಿಲೆಯಲ್ಲಿ ಕಂಚಿನ ಪದಕ ಗೆದ್ದ ರೋಲರ್ ಸ್ಕೇಟರ್ ಕಾರ್ತಿಕಾ ಜಗದೀಶ್ವರನ್, ಹೀರಾಲ್ ಸಾಧು ಮತ್ತು ಆರತಿ ಕಸ್ತೂರಿ ರಾಜ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಕ್ರೀಡಾಪಟುಗಳ ಸ್ಥೈರ್ಯ ಮತ್ತು ತಂಡದಲ್ಲಿ ತೋರಿಸಿದ ಆಟದ ಶೈಲಿಗೆ ಶ್ಲಾಘಿಸಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು, "ಕಾರ್ತಿಕಾ ಜಗದೀಶ್ವರನ್, @heeral_sadhu ಮತ್ತು @aarathyskating ಅವರಿಗೆ ಅಭಿನಂದನೆಗಳು. ಮಹಿಳಾ ಸ್ಪೀಡ್ ಸ್ಕೇಟಿಂಗ್ ರಿಲೆ ತಂಡ ತೋರಿಸಿದ ಅಸಾಧಾರಣ ಪ್ರದರ್ಶನದಿಂದ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಸ್ಪೀಡ್ ಸ್ಕೇಟಿಂಗ್ 3000ಮೀ ರಿಲೆಯಲ್ಲಿ ಗಮನಾರ್ಹ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಅವರ ಅಚಲ ನಿರ್ಣಯ ಮತ್ತು ತಂಡದಲ್ಲಿ ತೋರಿಸಿರುವ ಪ್ರದರ್ಶನ ಹಲವರಿಗೆ ಸ್ಪೂರ್ತಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
(रिलीज़ आईडी: 1963282)
आगंतुक पटल : 138
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam