ಪ್ರಕಟಣಾ ದಿನಾಂಕ:
27 SEP 2023 10:39PM by PIB Bengaluru
ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಗುರ್ಜೋತ್ ಸಿಂಗ್ ಖಂಗುರಾ, ಅನಂತ್ಜೀತ್ ಸಿಂಗ್ ನರುಕಾ, ಅಂಗದ್ ವೀರ್ ಸಿಂಗ್ ಬಜ್ವಾ ಅವರ ಪುರುಷರ ಶೂಟಿಂಗ್ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ;
“ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಗುರ್ಜೋತ್ ಸಿಂಗ್ ಖಂಗುರಾ, ಅನಂತ್ಜೀತ್ ಸಿಂಗ್ ನರುಕಾ, ಅಂಗದ್ ವೀರ್ ಸಿಂಗ್ ಬಜ್ವಾ ಅವರನ್ನೊಳಗೊಂಡ ನಮ್ಮ ಸ್ಕೀಟ್ ಪುರುಷರ ಶೂಟಿಂಗ್ ತಂಡಕ್ಕೆ ಅಭಿನಂದನೆಗಳು. ಈ ಸಾಧನೆಯು ನಮ್ಮ ಕ್ರೀಡಾಪಟುಗಳಲ್ಲಿ ಶ್ರೇಷ್ಠತೆಯ ಮನೋಭಾವವನ್ನು ಮತ್ತಷ್ಟು ಬಲಪಡಿಸುತ್ತದೆ.”
***