ಪ್ರಧಾನ ಮಂತ್ರಿಯವರ ಕಛೇರಿ
ಸೆಪ್ಟೆಂಬರ್ 22ರಂದು ಜಿ-20 ತಂಡದೊಂದಿಗೆ ಸಂವಾದ ನಡೆಸಲಿರುವ ಪ್ರಧಾನ ಮಂತ್ರಿ
प्रविष्टि तिथि:
21 SEP 2023 9:32PM by PIB Bengaluru
ಜಿ 20 ಶೃಂಗಸಭೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ದುಡಿದ ಸುಮಾರು 3000 ಜನರು ಸಂವಾದದಲ್ಲಿ ಭಾಗವಹಿಸಲಿದ್ದಾರೆ
ತಳಮಟ್ಟದಲ್ಲಿ ಕೆಲಸ ಮಾಡಿದ ಕಾರ್ಯಕರ್ತರನ್ನು ಸೇರಿಸಿ ಸಂವಾದ; ವಿವಿಧ ಸಚಿವಾಲಯಗಳ ಸಚಿವರು ಮತ್ತು ಅಧಿಕಾರಿಗಳು ಸಹ ಭಾಗವಹಿಸಲಿದ್ದಾರೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 22ರಂದು ಸಂಜೆ 6 ಗಂಟೆಗೆ ಭಾರತ ಮಂಟಪದಲ್ಲಿ ಜಿ-20 ತಂಡದೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಂವಾದದ ನಂತರ ಭೋಜನ ಕೂಟ ನಡೆಯಲಿದೆ.
ಜಿ 20 ಶೃಂಗಸಭೆಯ ಯಶಸ್ಸಿಗೆ ಕೊಡುಗೆ ನೀಡಿದ ಸುಮಾರು 3000 ಜನರು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಇದು ವಿಶೇಷವಾಗಿ, ಶೃಂಗಸಭೆಯ ಸುಗಮ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ತಳಮಟ್ಟದಲ್ಲಿ ಕೆಲಸ ಮಾಡಿದವರನ್ನು ಒಳಗೊಂಡಿರುತ್ತದೆ. ಇದರಲ್ಲಿ ಸ್ವಚ್ಛತಾ ಸಿಬ್ಬಂದಿ (ಕ್ಲೀನರ್ ಗಳು), ಚಾಲಕರು, ಪರಿಚಾರಕರು ಮತ್ತು ವಿವಿಧ ಸಚಿವಾಲಯಗಳ ಇತರ ಸಿಬ್ಬಂದಿಗಳು ಸೇರಿದ್ದಾರೆ. ಸಂವಾದದಲ್ಲಿ ಸಚಿವರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ
****
(रिलीज़ आईडी: 1959566)
आगंतुक पटल : 181
इस विज्ञप्ति को इन भाषाओं में पढ़ें:
Assamese
,
Bengali
,
English
,
Urdu
,
Marathi
,
हिन्दी
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam