ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲೋಕಸಭೆಯಲ್ಲಿ ಸಂವಿಧಾನ (ನೂರಾ ಇಪ್ಪತ್ತೆಂಟನೇ ತಿದ್ದುಪಡಿ) ಮಸೂದೆ, 2023 ಅನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಅರ್ಥಪೂರ್ಣ ಚರ್ಚೆಗಾಗಿ ಎಲ್ಲಾ ಸದಸ್ಯರು, ಪಕ್ಷಗಳು ಮತ್ತು ಅವರ ನಾಯಕರಿಗೆ ಪ್ರಧಾನಮಂತ್ರಿ ಧನ್ಯವಾದ ಅರ್ಪಿಸಿದರು.


“ದೇಶದ ಸಂಸದೀಯ ಪಯಣದಲ್ಲಿ ಇದೊಂದು ಸುವರ್ಣ ಕ್ಷಣ"

 "ಇದು ಮಾತೃಶಕ್ತಿಯ ಮನಸ್ಥಿತಿಯನ್ನು ಬದಲಾಯಿಸುತ್ತದೆ ಮತ್ತು ಅದು ಸೃಷ್ಟಿಸುವ ಆತ್ಮವಿಶ್ವಾಸವು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಊಹಿಸಲಾಗದ ಶಕ್ತಿಯಾಗಿ ಹೊರಹೊಮ್ಮುತ್ತದೆ."

Posted On: 21 SEP 2023 12:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸಭಾನಾಯಕರು ಇಂದು ಲೋಕಸಭೆಯಲ್ಲಿ ಸಂವಿಧಾನ (ನೂರಾ ಇಪ್ಪತ್ತೆಂಟನೇ ತಿದ್ದುಪಡಿ) ಮಸೂದೆ, 2023 ರ ಬಗ್ಗೆ ತಮ್ಮ ಬೆಂಬಲ ಮತ್ತು ಅರ್ಥಪೂರ್ಣ ಚರ್ಚೆಗಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಧನ್ಯವಾದ ಅರ್ಪಿಸಿದರು. ಹೊಸ ಸಂಸತ್ ಭವನದಲ್ಲಿ ವ್ಯವಹಾರದ ಮೊದಲ ಪ್ರಮುಖ ವಿಷಯವಾದ ಮಸೂದೆಯನ್ನು ನಿನ್ನೆ ಲೋಕಸಭೆಯಲ್ಲಿ ಚರ್ಚಿಸಿ ಅಂಗೀಕರಿಸಲಾಯಿತು.

ಇಂದು ಕಲಾಪ ಆರಂಭವಾಗುತ್ತಿದ್ದಂತೆ ಎದ್ದು ನಿಂತ ಪ್ರಧಾನಮಂತ್ರಿಯವರು ನಿನ್ನೆಯ ‘ಭಾರತದ ಸಂಸದೀಯ ಪಯಣದ ಸುವರ್ಣ ಕ್ಷಣ’ವನ್ನು ಉಲ್ಲೇಖಿಸಿ ಎಲ್ಲಾ ಪಕ್ಷಗಳ ಸದಸ್ಯರು ಮತ್ತು ಅವರ ನಾಯಕರ ಸಾಧನೆಗೆ ಮನ್ನಣೆ ನೀಡಿದರು. ನಿನ್ನೆಯ ನಿರ್ಧಾರ ಮತ್ತು ರಾಜ್ಯಸಭೆಯಲ್ಲಿ ಮುಂಬರುವ ಪರಾಕಾಷ್ಠೆಯು ಮಾತೃಶಕ್ತಿಯ ಮನಸ್ಥಿತಿಯನ್ನು ಬದಲಾಯಿಸುತ್ತದೆ ಮತ್ತು ಅದು ಸೃಷ್ಟಿಸುವ ವಿಶ್ವಾಸವು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಅಧ್ಬುತ ಶಕ್ತಿಯಾಗಿ ಹೊರಹೊಮ್ಮುತ್ತದೆ ಎಂದು ಅವರು ಹೇಳಿದರು. "ಈ ಪವಿತ್ರ ಕಾರ್ಯವನ್ನು ಸಾಧಿಸಲು, ನಾನು, ಸಭಾನಾಯಕನಾಗಿ, ನಿಮ್ಮ ಕೊಡುಗೆ, ಬೆಂಬಲ ಮತ್ತು ಅರ್ಥಪೂರ್ಣ ಚರ್ಚೆಗಾಗಿ ನನ್ನ ಹೃದಯದಾ:ಳದಿಂದ ಅಂಗೀಕರಿಸಲು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ನಿಂತಿದ್ದೇನೆ" ಎಂದು ಪ್ರಧಾನಮಂತ್ರಿಯವರು ತಮ್ಮ ಮಾತನ್ನು  ಮುಕ್ತಾಯಗೊಳಿಸಿದರು.
 

***


(Release ID: 1959409) Visitor Counter : 100