ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಮುಖ ವೈಶಿಷ್ಟ್ಯಗಳು ಮತ್ತು ಮಾರ್ಗಸೂಚಿಗಳು

Posted On: 20 SEP 2023 5:42PM by PIB Bengaluru

ಪಿಎಂ ವಿಶ್ವಕರ್ಮ, ಕೇಂದ್ರ ಸರ್ಕಾರದ  ಯೋಜನೆಯಾಗಿದ್ದು, ಇದನ್ನು ತಮ್ಮ ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ  ಕರಕುಶಲಿಗರು ಮತ್ತು ಕುಶಲಕರ್ಮಿಗಳಿಗೆ ಸಂಪೂರ್ಣ ಬೆಂಬಲವನ್ನು ಒದಗಿಸಲು ಪ್ರಧಾನ ಮಂತ್ರಿಯವರು 17 ನೇ ಸೆಪ್ಟೆಂಬರ್, 2023 ರಂದು ಪ್ರಾರಂಭಿಸಿದರು. ಈ ಯೋಜನೆಯು 18 ರೀತಿಯ ವ್ಯಾಪಾರಗಳಲ್ಲಿ ತೊಡಗಿರುವ ಕರಕುಶಲಿಗರು ಮತ್ತು ಕುಶಲಕರ್ಮಿಗಳನ್ನು ಒಳಗೊಳ್ಳುತ್ತದೆ, ಅಂದರೆ (i) ಬಡಗಿ ; (ii) ದೋಣಿ ತಯಾರಕರು; (iii) ಶಸ್ತ್ರಾಸ್ತ್ರ ತಯಾರಿಸುವವರು (ಆರ್ಮರ್); (iv) ಕಮ್ಮಾರರು; (v) ಸುತ್ತಿಗೆ ಮತ್ತು ಟೂಲ್ ಕಿಟ್ ಮಾಡುವವರು; (vi)  ಬೀಗ ತಯಾರಿಸುವವರು; (vii) ಅಕ್ಕಸಾಲಿಗರು (viii) ಕುಂಬಾರರು; (ix) ಶಿಲ್ಪಿಗಳು, ಕಲ್ಲು ಒಡೆಯುವವರು; (x) ಚಮ್ಮಾರರು; (xi)  ಮೇಸ್ತ್ರಿ; (xii) ಬುಟ್ಟಿ/ಚಾಪೆ/ಪೊರಕೆ /ಸೆಣಬು ನೇಯುವವರು; (xiii) ಸಾಂಪ್ರದಾಯಿಕ ಗೊಂಬೆ ಮತ್ತು ಆಟಿಕೆ ತಯಾರಕರು; (xiv)  ಕ್ಷೌರಿಕರು; (xv) ಹೂಮಾಲೆ ತಯಾರಕರು; (xvi)  ಮಡಿವಾಳರು; (xvii) ಟೈಲರ್; ಮತ್ತು (xviii)  ಮೀನಿನ ಬಲೆಯ ತಯಾರಕರು.

ಈ ಯೋಜನೆಯು ಕುಶಲಕರ್ಮಿಗಳು ಮತ್ತು ಕರಕುಶಲಿಗರಿಗೆ ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುವುದನ್ನು ಕಲ್ಪಿಸುತ್ತದೆ:

(i) ಗುರುತಿಸುವಿಕೆ:  ಪಿ.ಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಐಡಿ ಕಾರ್ಡ್ ಮೂಲಕ ಕುಶಲಕರ್ಮಿಗಳು ಮತ್ತು ಕರಕುಶಲಿಗರನ್ನು ಗುರುತಿಸುವುದು.

(ii) ಕೌಶಲ ಉನ್ನತೀಕರಣ: 5-7 ದಿನಗಳ ಮೂಲಭೂತ ತರಬೇತಿ ಮತ್ತು 15 ದಿನಗಳ ಅಥವಾ ಅದಕ್ಕಿಂತ ಹೆಚ್ಚಿನ ಸುಧಾರಿತ ತರಬೇತಿ ಜೊತೆಗೆ ದಿನಕ್ಕೆ ರೂ. 500 ರ  ಶಿಷ್ಯವೇತನ;

(iii) ಟೂಲ್ಕಿಟ್ ಪ್ರೋತ್ಸಾಹ: ರೂ. 15,000 ವರೆಗಿನ ಟೂಲ್ಕಿಟ್ ಪ್ರೋತ್ಸಾಹ. ಮೂಲಭೂತ ಕೌಶಲ್ಯ ತರಬೇತಿಯ ಆರಂಭದಲ್ಲಿ ಇ-ವೋಚರ್ಗಳ ರೂಪದಲ್ಲಿ ಕೊಡಮಾಡಲಾಗುವುದು.

(iv) ಸಾಲದ ನೆರವು: ಭಾರತ ಸರ್ಕಾರದ 8% ರಷ್ಟು ಸಹಾಯಧನದೊಂದಿಗೆ, ಮೇಲಾಧಾರ ಉಚಿತ 'ಉದ್ಯಮ ಅಭಿವೃದ್ಧಿ ಸಾಲಗಳು' ರೂ. 3 ಲಕ್ಷದವರೆಗೆ ಎರಡು ಹಂತಗಳಲ್ಲಿ ರೂ. 1 ಲಕ್ಷ ಮತ್ತು ರೂ. 2 ಲಕ್ಷಕ್ಕೆ ಅನುಕ್ರಮವಾಗಿ 18 ತಿಂಗಳು ಮತ್ತು 30 ತಿಂಗಳುಗಳ ಅವಧಿಯೊಂದಿಗೆ, ರಿಯಾಯಿತಿ ದರದಲ್ಲಿ 5% ಗೆ ನಿಗದಿಪಡಿಸಲಾಗಿದೆ. ಮೂಲ ತರಬೇತಿಯನ್ನು ಪೂರ್ಣಗೊಳಿಸಿದ ಫಲಾನುಭವಿಗಳು ರೂ. 1 ಲಕ್ಷದವರೆಗಿನ ಮೊದಲ ಹಂತದ ಸಾಲದ ನೆರವನ್ನು ಪಡೆಯಲು ಅರ್ಹರಾಗಿರುತ್ತಾರೆ.. ಎರಡನೇ ಸಾಲದ ಭಾಗವು 1 ನೇ ಕಂತನ್ನು ಪಡೆದುಕೊಂಡ ಮತ್ತು ಪ್ರಮಾಣಿತ ಸಾಲದ ಖಾತೆಯನ್ನು ನಿರ್ವಹಿಸಿದ ಮತ್ತು ತಮ್ಮ ವ್ಯವಹಾರದಲ್ಲಿ ಡಿಜಿಟಲ್ ವಹಿವಾಟುಗಳನ್ನು ಅಳವಡಿಸಿಕೊಂಡ ಅಥವಾ ಸುಧಾರಿತ ತರಬೇತಿ ಪಡೆದ ಫಲಾನುಭವಿಗಳಿಗೆ ಲಭ್ಯವಿರುತ್ತದೆ.

(v) ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹ: ಒಂದು ಮೊತ್ತದ 1 ರೂಪಾಯಿಯನ್ನು  ಪ್ರತಿ ಡಿಜಿಟಲ್ ವಹಿವಾಟಿಗೆ ಗರಿಷ್ಠ 100 ವಹಿವಾಟುಗಳವರೆಗೆ ಮಾಸಿಕ ಪ್ರತಿ ಡಿಜಿಟಲ್ ಪೇ-ಔಟ್ ಅಥವಾ ರಸೀದಿಗಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡಲಾಗುತ್ತದೆ.

(vi) ಮಾರ್ಕೆಟಿಂಗ್ ಬೆಂಬಲ: ಗುಣಮಟ್ಟದ ಪ್ರಮಾಣೀಕರಣ, ಬ್ರ್ಯಾಂಡಿಂಗ್, ಇ-ಕಾಮರ್ಸ್ ವೇದಿಕೆಗಳಾದ  ಜಿಇಎಂ, ಜಾಹೀರಾತು, ಪ್ರಚಾರ ಮತ್ತು ಇತರ ಮಾರ್ಕೆಟಿಂಗ್ ಚಟುವಟಿಕೆಗಳಲ್ಲಿ ಮೌಲ್ಯ ಸರಪಳಿಗೆ ಸಂಪರ್ಕವನ್ನು ಸುಧಾರಿಸಲು ಕುಶಲಕರ್ಮಿಗಳು ಮತ್ತು ಕರಕುಶಲಿಗರಿಗೆ ಮಾರ್ಕೆಟಿಂಗ್ (ಮಾರುಕಟ್ಟೆಯ ಚಟುವಟಿಕೆ) ಬೆಂಬಲವನ್ನು ಒದಗಿಸಲಾಗುತ್ತದೆ.

 ಮೇಲೆ ತಿಳಿಸಿದ ಪ್ರಯೋಜನಗಳ ಜೊತೆಗೆ, ಔಪಚಾರಿಕ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವ್ಯವಸ್ಥೆಯಲ್ಲಿ 'ಉದ್ಯಮಿಗಳನ್ನಾಗಿ'  ʼಉದ್ಯಮ್ ಅಸಿಸ್ಟ್ ಪ್ಲಾಟ್ಫಾರಂʼನಲ್ಲಿ ಫಲಾನುಭವಿಗಳನ್ನು ಯೋಜನೆಯು  ಸೇರಿಸುತ್ತದೆ.

ಪಿಎಂ ವಿಶ್ವಕರ್ಮ ಪೋರ್ಟಲ್ ನಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಫಲಾನುಭವಿಗಳ ನೋಂದಣಿಯನ್ನು ಮಾಡಲಾಗುತ್ತದೆ. ಫಲಾನುಭವಿಗಳ ದಾಖಲಾತಿಯು ಮೂರು-ಹಂತದ ಪರಿಶೀಲನೆಯನ್ನು ಅನುಸರಿಸುತ್ತದೆ, ಇದರಲ್ಲಿ (i) ಗ್ರಾಮ ಪಂಚಾಯತ್/ಯುಎಲ್ಬಿ ಮಟ್ಟದಲ್ಲಿ ಪರಿಶೀಲನೆ, (ii) ಜಿಲ್ಲಾ ಅನುಷ್ಠಾನ ಸಮಿತಿಯ ಪರಿಶೀಲನೆ ಮತ್ತು ಶಿಫಾರಸು (iii) ಪರಿಶೀಲನಾ ಸಮಿತಿ (ಸ್ಕ್ರೀನಿಂಗ್ ಕಮಿಟಿ) ಯಿಂದ ಅನುಮೋದನೆ.

ಹೆಚ್ಚಿನ ಮಾಹಿತಿಗಾಗಿ, ಪಿಎಂ ವಿಶ್ವಕರ್ಮದ ಮಾರ್ಗಸೂಚಿಗಳನ್ನು pmvishwakarma.gov.in ನಲ್ಲಿ ಕಾಣಬಹುದು. ಯಾವುದೇ ಪ್ರಶ್ನೆಗಳಿಗೆ, ಕುಶಲಕರ್ಮಿಗಳು ಮತ್ತು ಕರಕುಶಲಿಗರು 18002677777 ಕ್ಕೆ ಕರೆ ಮಾಡಬಹುದು ಅಥವಾ http://pm-vishwakarma@dcmsme.gov.in  ಗೆ  ಇಮೇಲ್ ಮಾಡಬಹುದು.

*****



(Release ID: 1959194) Visitor Counter : 1520