ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗ್ರೀಕ್ ಶಿಕ್ಷಣ ತಜ್ಞರೊಂದಿಗೆ ಪ್ರಧಾನಮಂತ್ರಿ ಅವರ ಸಭೆ

Posted On: 25 AUG 2023 10:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಆಗಸ್ಟ್ 25ರಂದು ಅಥೆನ್ಸ್ ನಲ್ಲಿ ಅಥೆನ್ಸ್ ವಿಶ್ವವಿದ್ಯಾಲಯದ ಇಂಡಾಲಜಿಸ್ಟ್ ಮತ್ತು ಸಂಸ್ಕೃತ ಮತ್ತು ಹಿಂದಿ ಪ್ರಾಧ್ಯಾಪಕ ಪ್ರೊಫೆಸರ್ ಡಿಮಿಟ್ರಿಯಸ್ ವಾಸ್ಸಿಲಿಡಿಸ್ ಮತ್ತು ಅಥೆನ್ಸ್ ವಿಶ್ವವಿದ್ಯಾಲಯದ ಸಾಮಾಜಿಕ ದೇವತಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಪೊಸ್ಟೊಲೋಸ್ ಮಿಖೈಲಿಸ್ ಅವರನ್ನು ಭೇಟಿಯಾದರು.

ಭಾರತೀಯ ಧರ್ಮಗಳು, ತತ್ವಶಾಸ್ತ್ರ ಮತ್ತು ಸಂಸ್ಕೃತಿ ಕುರಿತ ತಮ್ಮ ಕಾರ್ಯಗಳ ಬಗ್ಗೆ ಅವರು ಪ್ರಧಾನಮಂತ್ರಿಯವರಿಗೆ ವಿವರಿಸಿದರು.

ಭಾರತೀಯ ಮತ್ತು ಗ್ರೀಸ್ ವಿಶ್ವವಿದ್ಯಾಲಯಗಳ ನಡುವೆ ಶೈಕ್ಷಣಿಕ ಸಹಯೋಗವನ್ನು ಆಳಗೊಳಿಸುವ ಸಾಮರ್ಥ್ಯ ಮತ್ತು ಭಾರತ-ಗ್ರೀಸ್ ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚೆಗಳು ಕೇಂದ್ರೀಕರಿಸಿದವು.

****


(Release ID: 1952837) Visitor Counter : 113