ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅವರಿಗೆ ಗ್ರೀಸ್ ಅಧ್ಯಕ್ಷರಿಂದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಹಾನರ್ ಪ್ರಶಸ್ತಿ ಪ್ರದಾನ

Posted On: 25 AUG 2023 3:04PM by PIB Bengaluru

ಗ್ರೀಸ್ ಅಧ್ಯಕ್ಷೆ ಕ್ಯಾಟರಿನಾ ಸಕೆಲ್ಲರೊಪೌಲೌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಹಾನರ್ ಪ್ರಶಸ್ತಿ ಪ್ರದಾನ ಮಾಡಿದರು.

ಆರ್ಡರ್ ಆಫ್ ಹಾನರ್ ಅನ್ನು 1975 ರಲ್ಲಿ ಸ್ಥಾಪಿಸಲಾಯಿತು. ಅಥೇನಾ ದೇವಿಯ ತಲೆಯನ್ನು ನಕ್ಷತ್ರದ ಮುಂಭಾಗದಲ್ಲಿ ಚಿತ್ರಿಸಲಾಗಿದ್ದು, ಇದರಲ್ಲಿ  "ನೀತಿವಂತರನ್ನು ಮಾತ್ರ ಗೌರವಿಸಬೇಕು" ಎಂದು ಬರೆಯಲಾಗಿದೆ.

ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಹಾನರ್ ಅನ್ನು ಗ್ರೀಸ್ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಮತ್ತು ಗಣ್ಯ ವ್ಯಕ್ತಿಗಳಿಗೆ ತಮ್ಮ ವಿಶಿಷ್ಟ ಸ್ಥಾನದ ಕಾರಣದಿಂದಾಗಿ ಗ್ರೀಸ್ ನ ಘನತೆಯನ್ನು ಹೆಚ್ಚಿಸಲು ಕೊಡುಗೆ ನೀಡಿದಕ್ಕಾಗಿ ನೀಡಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿಯಲ್ಲಿ, ಭಾರತದ ಸ್ನೇಹಪರ ಜನರಿಗೆ ಗೌರವವನ್ನು ನೀಡಲಾಗುತ್ತದೆ" ಎಂದು ಶೀರ್ಷಿಕೆ ನೀಡಲಾಗಿದೆ.

"ಈ ಭೇಟಿಯ ಸಂದರ್ಭದಲ್ಲಿ, ಗ್ರೀಕ್ ರಾಜ್ಯವು ಭಾರತದ ಪ್ರಧಾನಿಯನ್ನು ಗೌರವಿಸುತ್ತದೆ, ಅವರು ತಮ್ಮ ದೇಶದ ಜಾಗತಿಕ ವ್ಯಾಪ್ತಿಯನ್ನು ದಣಿವರಿಯದೆ ಉತ್ತೇಜಿಸಿದ್ದಾರೆ ಮತ್ತು ಭಾರತದ ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಗಾಗಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತಾರೆ. ದಿಟ್ಟ ಸುಧಾರಣೆಗಳನ್ನು ತರುತ್ತಾರೆ. ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯನ್ನು ಅಂತರರಾಷ್ಟ್ರೀಯ ಚಟುವಟಿಕೆಯ ಉನ್ನತ ಆದ್ಯತೆಗಳಲ್ಲಿ ತಂದ ರಾಜನೀತಿಜ್ಞ.

ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಗ್ರೀಕ್-ಭಾರತೀಯ ಸ್ನೇಹದ ಕಾರ್ಯತಂತ್ರದ ಉತ್ತೇಜನಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನಿರ್ಣಾಯಕ ಕೊಡುಗೆಯನ್ನು ಸಹ ಗುರುತಿಸಲಾಗಿದೆ.

ಪ್ರಧಾನಮಂತ್ರಿ ಅವರು ಗ್ರೀಸ್ ಅಧ್ಯಕ್ಷೆ ಶ್ರೀಮತಿ ಕ್ಯಾಟರಿನಾ ಸಕೆಲ್ಲಾರೊಪೌಲೌ, ಗ್ರೀಸ್ ಸರ್ಕಾರ ಮತ್ತು ಜನರಿಗೆ ಧನ್ಯವಾದ ಅರ್ಪಿಸಿದರು ಮತ್ತು ಎಕ್ಸ್ ಖಾತೆಯಲ್ಲಿ ಈ ಕುರಿತು ಹಂಚಿಕೊಂಡಿದ್ದಾರೆ.
 

***



(Release ID: 1952113) Visitor Counter : 99