ಸಂಪುಟ
azadi ka amrit mahotsav

ಔಷಧ ನಿಯಂತ್ರಣ ಕ್ಷೇತ್ರದಲ್ಲಿ ಭಾರತ ಮತ್ತು ಸುರಿನಾಮೆ ನಡುವಿನ ಸಹಿ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ

Posted On: 16 AUG 2023 4:24PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಭಾರತ ಮತ್ತು ಸುರಿನಾಮೆ ನಡುವಿನ ಔಷಧಗಳ ನಿಯಂತ್ರಣ ಸಹಿ ಹಾಕಿದ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿ ಬರುವ ಭಾರತೀಯ ಔಷಧ ಆಯೋಗ ಮತ್ತು ಸುರಿನಾಮೆ ಸರ್ಕಾರದ ಆರೋಗ್ಯ ಸಚಿವಾಲಯದ ನಡುವೆ 2023 ಜೂನ್ 4ರಂದು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಬಿದ್ದಿತ್ತು. ಸುರಿನಾಮೆಯಲ್ಲಿ ಭಾರತೀಯ ಔಷಧ ಆಯೋಗವನ್ನು ಗುರುತಿಸುವ ವಿಷಯದಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಭಾರತದ ರಾಷ್ಟ್ರಪತಿ ಅವರು ಸುರಿನಾಮೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

ಉಭಯ ರಾಷ್ಟ್ರಗಳು ತಮ್ಮ ಕಾನೂನುಗಳು ಮತ್ತು ನೀತಿ, ನಿಬಂಧನೆಗಳಿಗೆ ಅನುಸಾರವಾಗಿ ಔಷಧಗಳ ನಿಯಂತ್ರಣ ಕ್ಷೇತ್ರದಲ್ಲಿ ನಿಕಟ ಸಹಕಾರ ಮತ್ತು ಮಾಹಿತಿ ವಿನಿಮಯ ಅಭಿವೃದ್ಧಿಪಡಿಸುವ ಪ್ರಾಮುಖ್ಯತೆಯನ್ನು ಗುರುತಿಸಿವೆ. ಈ ಕೆಳಗಿನ ತಿಳವಳಿಕೆಗಳಿಗೆ ಒಪ್ಪಿಗೆ ಸೂಚಿಸಿವೆ.

  • ಸುರಿನಾಮೆಯಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಔಷಧಗಳ ಗುಣಮಟ್ಟ ಖಚಿತಪಡಿಸಿಕೊಳ್ಳಲು ಸುರಿನಾಮೆಯ ಔಷಧಗಳಿಗೆ ಪ್ರಮಾಣಿತ ಸಂಸ್ಥೆಯಾಗಿ ಭಾರತೀಯ ಔಷಧ ಆಯೋಗವನ್ನು ಅಲ್ಲಿನ ಸರ್ಕಾರ ಸ್ವೀಕರಿಸಲಿದೆ.
  • ಪ್ರತಿ ಭೌದ್ಧಿಕ ಆಸ್ತಿಗೆ ಭಾರತೀಯ ಔಷಧ ತಯಾರಕರು ನೀಡಿದ ವಿಶ್ಲೇಷಣಾ ಪ್ರಮಾಣಪತ್ರ ಸ್ವೀಕರಿಸಲು ಮತ್ತು ಸುರಿನಾಮೆಯಲ್ಲಿನ ಔಷಧಗಳ ನಕಲಿ ಪರೀಕ್ಷೆಯ ಅಗತ್ಯವನ್ನು ತೆಗೆದುಹಾಕಲು ಒಪ್ಪಿಗೆ ಮೂಡಿಕೊಂಡಿವೆ.
  • ನ್ಯಾಯೋಚಿತವಾದ ಕಡಿಮೆ ವೆಚ್ಚದಲ್ಲಿ ಐಪಿಸಿಯಿಂದ ಐಪಿಆರ್ ಎಸ್ ಮತ್ತು ಅಶುದ್ಧತೆಯ ಮಾನದಂಡಗಳನ್ನು ಪಡೆಯಲು ಗುಣಮಟ್ಟ ನಿಯಂತ್ರಣ ವಿಶ್ಲೇಷಣೆ ಸಮಯದಲ್ಲಿ ಬಳಸಬೇಕು.
  • ಜೆನೆರಿಕ್ ಔಷಧಗಳ ಅಭಿವೃದ್ಧಿಗೆ ಉತ್ತಮ ವ್ಯಾಪ್ತಿ ಹೊಂದಲು ಮತ್ತು ಸುರಿನಾಮಮೆಯಲ್ಲಿ ಕೈಗೆಟುಕುವ ಔಷಧಗಳ ಲಭ್ಯತೆಗೆ ಕೊಡುಗೆ ನೀಡುವುದು.
  • ನಿಯಂತ್ರಕ ಚೌಕಟ್ಟುಗಳು, ಮಾರ್ಗಸೂಚಿಯ ಅಗತ್ಯತೆಗಳು ಮತ್ತು ಪ್ರಕ್ರಿಯೆಗಳಲ್ಲಿ ಭಾರತೀಯ ಔಷಧ ಆಯೋಗವನ್ನು ತಿಳಿವಳಿಕೆಗಳನ್ನು ಉತ್ತೇಜಿಸಬೇಕು.
  • ಬೌದ್ಧಿಕ ಆಸ್ತಿಯ ಮೊನೊಗ್ರಾಫ್‌ಗಳ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿ ಮತ್ತು ದಾಖಲಾತಿಗಳ ವಿನಿಮಯ ಸುಲಭಗೊಳಿಸುವುದು.
  • ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಸಂಬಂಧಿಸಿದಂತೆ ಸೇವೆಗಳನ್ನು ಒದಗಿಸಲು, ಜನಸಂಖ್ಯೆಯ ಅಗತ್ಯತೆಗಳನ್ನು ಪೂರೈಸಲು ನಿಯಂತ್ರಕ ಸಂಸ್ಥೆಗಳ ಅಧಿಕಾರಿಗಳ ಸಾಮರ್ಥ್ಯವನ್ನು ಹೆಚ್ಚಿಸುವುದು.
  • ಮೊನೊಗ್ರಾಫ್‌ಗಳು ಮತ್ತು ಭವಿಷ್ಯದ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಪರಸ್ಪರ ಲಾಭದ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಕಾರ ಹೊಂದಲು ಇರುವ ಅವಕಾಶಗಳನ್ನು ಅನ್ವೇಷಿಸುವುದು.

 

ತಿಳುವಳಿಕೆ ಒಪ್ಪಂದವು ವಿದೇಶಿ ವಿನಿಮಯ ಗಳಿಕೆಗೆ ಕಾರಣವಾಗುವ ವೈದ್ಯಕೀಯ ಉತ್ಪನ್ನಗಳ ರಫ್ತಿಗೆ ಅನುಕೂಲ ಕಲ್ಸಸುತ್ತದೆ. ಇದು ಆತ್ಮನಿರ್ಭರ ಭಾರತ ಕಟ್ಟುವ ಚಿಂತನೆಗೆ ಒಂದು ಹೆಜ್ಜೆ.

ಭಾರತೀಯ ಔಷಧ ಆಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ! ಈ ಮೇಲಿನ ಮಾನದಂಡಗಳು ಭಾರತೀಯ ಔಷಧ ವಲಯಕ್ಕೆ ಹಲವಾರು ಪ್ರಯೋಜನಗಳನ್ನು ಒದಗಿಸಲಿವೆ. ಇವುಗಳ ಜತೆಗೆ:

  • ಇದು ಈ 2 ದೇಶಗಳಿಗೆ ಭಾರತೀಯ ಔಷಧ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುತ್ತದೆ. ಏಕೆಂದರೆ ಇದು ನಿಯಂತ್ರಣ, ನಕಲು ಪರೀಕ್ಷೆ ಮತ್ತು ಆಮದು ನಂತರದ ತಪಾಸಣೆಗಳನ್ನು ತೆಗೆದುಹಾಕುತ್ತದೆ. ಭಾರತೀಯ ಔಷಧ ರಫ್ತುದಾರರು ಸ್ಪರ್ಧಾತ್ಮಕ ವೇದಿಕೆ ಪಡೆಯುತ್ತಾರೆ, ವ್ಯಾಪಾರವು ಸಹ ಹೆಚ್ಚು ಲಾಭದಾಯಕವಾಗುತ್ತದೆ.
  • ಇದಲ್ಲದೆ, ಆಮದು ಮಾಡಿಕೊಳ್ಳುವ ರಾಷ್ಟ್ರಗಳು ಗುಣಮಟ್ಟದ ಭಾರತೀಯ ವೈದ್ಯಕೀಯ ಉತ್ಪನ್ನಗಳಿಗೆ ಕೈಗೆಟುಕುವ ಬೆಲೆಗೆ ಪ್ರವೇಶ ಪಡೆಯುತ್ತವೆ.
  • ಆಮದು ಮಾಡಿಕೊಳ್ಳುವ ದೇಶಗಳಲ್ಲಿನ ತಯಾರಕರು ಉತ್ತಮ ಅವಕಾಶ ಹೊಂದುತ್ತಾರೆ. ಕೈಗೆಟಕುವ ಬೆಲೆಯ ಲಭ್ಯತೆಗೆ ಕೊಡುಗೆ ನೀಡುವ ಜೆನೆರಿಕ್ ಔಷಧಿಗಳ ಅಭಿವೃದ್ಧಿಯ ಜತೆಗೆ ಅವರ ನಾಗರಿಕರಿಗೆ ಔಷಧಗಳು ಲಭ್ಯವಾಗುತ್ತವೆ.
  • ವಿವಿಧ ಉಲ್ಲೇಖ ಮಾನದಂಡಗಳು ಮತ್ತು ಅಶುದ್ಧತೆಯ ಮಾನದಂಡಗಳು ಈ ತಯಾರಕರಿಗೆ ಸಮಂಜಸವಾದ ವೆಚ್ಚದಲ್ಲಿ ಲಭ್ಯವಾಗುತ್ತವೆ. ನಿಯಂತ್ರಕ ನಿಯಮಗಳ ಒಮ್ಮುಖತೆಯು ಭಾರತದಿಂದ ಔಷಧಗಳ ರಫ್ತುಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ ಔಷಧ ವಲಯದಲ್ಲಿ ವಿದ್ಯಾವಂತ ವೃತ್ತಿಪರರಿಗೆ ಉತ್ತಮ ಉದ್ಯೋಗಾವಕಾಶಗಳಿಗೆ ಸಹಾಯ ಮಾಡುತ್ತದೆ. ಭಾರತೀಯ ಔಷಧ ಆಯೋಗದ ಬೌದ್ಧಿ ಆಸ್ತಿ(ಐಪಿ) ಅಧಿಕೃತವಾಗಿ 5 ದೇಶಗಳಿಂದ ಗುರುತಿಸಲ್ಪಟ್ಟಿದೆ: ಅಫ್ಘಾನಿಸ್ತಾನ್, ಘಾನಾ, ನೇಪಾಳ, ಮಾರಿಷಸ್ ಮತ್ತು ರಿಪಬ್ಲಿಕ್ ಆಫ್ ಸುರಿನಾಮೆ. ಕೇಂದ್ರ ಆರೋಗ್ಯ ಸಚಿವಾಲಯವು ಭಾರತದ ಬೌದ್ಧಿಕ ಆಸ್ತಿ ಗುರುತಿಸುವ ರಾಷ್ಟ್ರಗಳಲ್ಲಿ ತಿಳಿವಳಿಕೆ ಒಪ್ಪಂದ ವಿಸ್ತರಿಸಲು ಪ್ರಯತ್ನಿಸುತ್ತಿದೆ.

 

*****

 


(Release ID: 1949586) Visitor Counter : 141