ಸಂಪುಟ
ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿ ಭಾರತ ಮತ್ತು ಸುರಿನಾಮ್ ನಡುವೆ ಒಪ್ಪಂದಗಳ ತಿಳುವಳಿಕೆ ಪತ್ರಕ್ಕೆ(ಎಂ.ಒ.ಯು) ಸಹಿ ಹಾಕಲು ಕ್ಯಾಬಿನೆಟ್ ಅನುಮೋದನೆ
Posted On:
16 AUG 2023 4:26PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತ ಗಣರಾಜ್ಯ ಸರ್ಕಾರದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿಯ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿ.ಡಿ.ಎಸ್.ಸಿ.ಒ.), ಸುರಿನಾಮೆ ಗಣರಾಜ್ಯದ ಸರ್ಕಾರದ ಆರೋಗ್ಯ ಸಚಿವಾಲಯದೊಂದಿಗೆ ವೈದ್ಯಕೀಯ ಉತ್ಪನ್ನ ನಿಯಂತ್ರಣ ಕ್ಷೇತ್ರದಲ್ಲಿ ಸಹಕಾರದ ಕುರಿತು 2023 ರ ಜೂನ್ 4 ರಂದು ಸಹಿ ಹಾಕಲಾದ ತಿಳಿವಳಿಕೆ ಒಪ್ಪಂದದ(ಎಂ.ಒ.ಯು) ಕುರಿತು ಮಾಹಿತಿ ತಿಳಿಸಲಾಯಿತು. ಸುರಿನಾಮೆಯ ಅಧ್ಯಕ್ಷರ ಭಾರತ ಭೇಟಿಯ ಸಂದರ್ಭದಲ್ಲಿ ಇದಕ್ಕೆ ಸಹಿ ಹಾಕಲಾಯಿತು.
ವೈದ್ಯಕೀಯ ಉತ್ಪನ್ನಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಬಂಧನೆಗಳು ಹಾಗೂ ಇತರ ಸಂಬಂಧಿತ ವಿಷಯಗಳ ಕುರಿತು ರಚನಾತ್ಮಕ ಸಂವಾದವನ್ನು ಸುಲಭಗೊಳಿಸುವುದು ಈ ತಿಳುವಳಿಕೆ ಒಪ್ಪಂದದ ಉದ್ದೇಶವಾಗಿದೆ.
ಎರಡೂ ದೇಶಗಳ ನಡುವೆ ಫಲಪ್ರದ ಸಹಕಾರ ಮತ್ತು ಮಾಹಿತಿ ವಿನಿಮಯಕ್ಕಾಗಿ ಚೌಕಟ್ಟನ್ನು ಸ್ಥಾಪಿಸಲು ಈ ತಿಳಿವಳಿಕೆ ಒಪ್ಪಂದ(ಎಂ.ಒ.ಯು.) ಸಹಕಾರಿಯಾಗಿದೆ.! ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ - ಸಿ.ಡಿ.ಎಸ್.ಸಿ.ಒ.) ಮತ್ತು ಸುರಿನಾಮ್ ಗಣರಾಜ್ಯದ ಸರ್ಕಾರದ ಆರೋಗ್ಯ ಸಚಿವಾಲಯವು, ತಮ್ಮ ಅಂತರರಾಷ್ಟ್ರೀಯ ಜವಾಬ್ದಾರಿಗಳಿಗೆ ಅನುಗುಣವಾಗಿ ವೈದ್ಯಕೀಯ ಉತ್ಪನ್ನಗಳ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಒಪ್ಪಂದ ಮಾಡಿಕೊಂಡಿವೆ. ಎರಡೂ ದೇಶಗಳ ನಿಯಂತ್ರಣ ಪ್ರಾಧಿಕಾರಗಳ ನಡುವಿನ ಸಹಕಾರದ ಮುಖ್ಯ ಕ್ಷೇತ್ರಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:
ಎ) ಪರಸ್ಪರರ ನಿಯಂತ್ರಕ ಚೌಕಟ್ಟಿನಲ್ಲಿ ಎರಡೂ ದೇಶಗಳ ನಡುವೆ ತಿಳುವಳಿಕೆಯನ್ನು ಉತ್ತೇಜಿಸುವುದು, ಅವಶ್ಯಕತೆಗಳು ಮತ್ತು ಪ್ರಕ್ರಿಯೆಗಳು ಹಾಗೂ ಎರಡೂ ದೇಶಗಳಿಗೆ ಭವಿಷ್ಯದ ನಿಯಂತ್ರಕ ಬಲಪಡಿಸುವ ಉಪಕ್ರಮಗಳನ್ನು ಸುಗಮಗೊಳಿಸುವುದು.
ಬಿ) ಉತ್ತಮ ಪ್ರಯೋಗಾಲಯ ಅಭ್ಯಾಸಗಳು (ಜಿ.ಎಲ್.ಪಿ), ಉತ್ತಮ ಕ್ಲಿನಿಕಲ್ ಅಭ್ಯಾಸಗಳು (ಜಿ.ಸಿ.ಪಿ), ಉತ್ತಮ ಉತ್ಪಾದನಾ ಅಭ್ಯಾಸಗಳು (ಜಿ.ಎಂ.ಪಿ) ಮತ್ತು ಉತ್ತಮ ಫಾರ್ಮಾಕೋವಿಜಿಲೆನ್ಸ್ ಅಭ್ಯಾಸಗಳು (ಜಿ.ಪಿ.ವಿ.ಪಿ) ಕುರಿತು ಮಾಹಿತಿ ಮತ್ತು ಸಹಕಾರಗಳ ಪರಸ್ಪರ ವಿನಿಮಯ ಮಾಡಿಕೊಳ್ಳುವುದು.
ಸಿ) ಭಾರತೀಯ ಫಾರ್ಮಾಕೋಪೋಯಿಯಗೆ ಮಾನ್ಯತೆ ನೀಡುವುದು
ಡಿ) ಸುರಕ್ಷತಾ ಮಾಹಿತಿಯ ವಿನಿಮಯ, ಫಾರ್ಮಾಕೋವಿಜಿಲೆನ್ಸ್ ಮತ್ತು ಇತರರಿಗೆ ಸಂಬಂಧಿಸಿದ ನಿರ್ದಿಷ್ಟ ಸುರಕ್ಷತಾ ಕಾಳಜಿ ಇರುವ ಪ್ರತಿಕೂಲ ಘಟನೆಗಳನ್ನು ವಿನಿಮಯ ಮಾಡಿಕೊಳ್ಳುವುದು. ಇದು ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳಿಗೆ ಸಂಬಂಧಿಸಿದ ಸುರಕ್ಷತಾ ಕಾಳಜಿಗಳನ್ನು ಒಳಗೊಂಡಿರುತ್ತದೆ.
ಇ) ದೇಶಗಳು ಆಯೋಜಿಸುವ ವೈಜ್ಞಾನಿಕ ಮತ್ತು ಪ್ರಾಯೋಗಿಕ ಸಮ್ಮೇಳನಗಳು, ವಿಚಾರ ಸಂಕಿರಣಗಳು, ವಿಚಾರಗೋಷ್ಠಿಗಳು ಮತ್ತು ವೇದಿಕೆಗಳಲ್ಲಿ ಭಾಗವಹಿಸುವಿಕೆ.
ಎಫ್) ಪರಸ್ಪರ ಒಪ್ಪಿದ ಪ್ರದೇಶಗಳಲ್ಲಿ ಸಾಮರ್ಥ್ಯ ನಿರ್ಮಾಣ.
ಜಿ) ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಸಮನ್ವಯ.
ಹೆಚ್) ಸಾಮಾನ್ಯ ಆಸಕ್ತಿಯ ಯಾವುದೇ ಇತರ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ.
ವಿದೇಶಿ ವಿನಿಮಯ ಗಳಿಕೆಗೆ ಕಾರಣವಾಗುವ ವೈದ್ಯಕೀಯ ಉತ್ಪನ್ನಗಳ ರಫ್ತಿಗೆ ತಿಳಿವಳಿಕೆ ಒಪ್ಪಂದವು (ಎಂ.ಒ.ಯು.) ಬಹಳಷ್ಟು ಅನುಕೂಲ ಕಲ್ಪಿಸುತ್ತದೆ. ಇದು ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿ ಒಂದು ಹೆಜ್ಜೆಯಾಗಿದೆ.
ನಿಯಂತ್ರಕ ಪದ್ಧತಿಗಳಲ್ಲಿ ಒಮ್ಮುಖವಾಗುವುದು ಭಾರತದಿಂದ ಔಷಧಿಗಳ ರಫ್ತು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಪರಿಣಾಮವಾಗಿ ಔಷಧೀಯ(ಫಾರ್ಮಾ) ವಲಯದಲ್ಲಿ ವಿದ್ಯಾವಂತ ವೃತ್ತಿಪರರಿಗೆ ಉತ್ತಮ ಉದ್ಯೋಗಾವಕಾಶ ಮುಂತಾದ ವಿಷಯಗಳಲ್ಲಿ ಈ ತಿಳಿವಳಿಕೆ ಒಪ್ಪಂದವು (ಎಂ.ಒ.ಯು.) ಸಹಾಯ ಮಾಡಬಹುದು.
ಉಭಯ ದೇಶಗಳ ನಿಯಂತ್ರಕ ಅಧಿಕಾರಿಗಳ ನಡುವೆ ಸಹಿ ಮಾಡಲಾದ ತಿಳಿವಳಿಕೆ ಒಪ್ಪಂದವು (ಎಂ.ಒ.ಯು.) ಔಷಧೀಯ ಬಳಕೆಗೆ ಕಚ್ಚಾ ವಸ್ತುಗಳು, ಜೈವಿಕ ಉತ್ಪನ್ನಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕ ಉತ್ಪನ್ನಗಳು ಸೇರಿದಂತೆ ಔಷಧೀಯ ಉತ್ಪನ್ನಗಳ ನಿಯಂತ್ರಣದ ಉತ್ತಮ ತಿಳುವಳಿಕೆಯನ್ನು ಹಾಗೂ ಸಹಕಾರ ವ್ಯವಸ್ಥೆಗಳನ್ನು ಇನ್ನೂ ಸುಗಮಗೊಳಿಸುತ್ತದೆ.
ಈ ತಿಳಿವಳಿಕೆ ಒಪ್ಪಂದವು (ಎಂ.ಒ.ಯು.) ವೈದ್ಯಕೀಯ ಉತ್ಪನ್ನಗಳು ಮತ್ತು ಸಂಬಂಧಿತ ಆಡಳಿತಾತ್ಮಕ ಮತ್ತು ನಿಯಂತ್ರಕ ವಿಷಯಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಮಾಹಿತಿ ಮತ್ತು ಸಹಕಾರವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಉಭಯ ದೇಶಗಳ ವ್ಯಾಪ್ತಿಯೊಳಗೆ ಉತ್ತೇಜಿಸುತ್ತದೆ.
*****
(Release ID: 1949494)
Visitor Counter : 126
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam