ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವ ಆನೆ ದಿನದಂದು ಆನೆಗಳನ್ನು ರಕ್ಷಿಸುವ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ

Posted On: 12 AUG 2023 9:44PM by PIB Bengaluru

ವಿಶ್ವ ಆನೆ ದಿನದಂದು ಆನೆಗಳನ್ನು ರಕ್ಷಿಸುವ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುನರುಚ್ಚರಿಸಿದ್ದಾರೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರ ಟ್ವೀಟ್ ಸಂದೇಶಕ್ಕೆ ಸ್ಪಂದಿಸಿ ಪ್ರಧಾನಮಂತ್ರಿ ಅವರು ತಮ್ಮ ಮರು ಟ್ವೀಟ್  ನಲ್ಲಿ ಈ ರೀತಿ ಹೇಳಿದ್ದಾರೆ;

"ವಿಶ್ವ ಆನೆಗಳ ದಿನದಂದು, ಭಾರತದ ಶ್ರೀಮಂತ ನೈಸರ್ಗಿಕ ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಆನೆಯನ್ನು ರಕ್ಷಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಕೆಲಸ ಮಾಡುವ ಎಲ್ಲರನ್ನು ನಾನು ಸಹ ಪ್ರಶಂಸಿಸುತ್ತೇನೆ. ಮುದುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ನನ್ನ ಇತ್ತೀಚಿನ ಭೇಟಿಯ ಕೆಲವು ನೋಟಗಳನ್ನು ಹಂಚಿಕೊಳ್ಳುತ್ತಿದ್ದೇನೆ. 

On World Elephant Day, we reiterate our commitment to protect the elephant, which is very closely associated with India’s rich natural heritage. I also appreciate all those working in this direction. Sharing some glimpses from my recent visit to the Mudumalai Tiger Reserve. 🐘 https://t.co/xcPrZ5uZy5 pic.twitter.com/kb8lKFl3W7

— Narendra Modi (@narendramodi) August 12, 2023

 

***



(Release ID: 1948296) Visitor Counter : 108