ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಮಂತ್ರಿ ಅವರ ಜೊತೆ ಮಾತುಕತೆ ನಡೆಸಿದರು
ಉಭಯ ನಾಯಕರು ಭಾರತ-ನೇಪಾಳ ದ್ವಿಪಕ್ಷೀಯ ಸಹಕಾರದ ವಿವಿಧ ಅಂಶಗಳನ್ನು ಪರಿಶೀಲಿಸಿದರು
ಇತ್ತೀಚಿಗೆ ಪ್ರಧಾನಮಂತ್ರಿ ಶ್ರೀ ಪ್ರಚಂಡ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ನಡೆದ ಚರ್ಚೆಗಳನ್ನು ಅನುಸರಿಸಿ ಮಾತುಕತೆ ಮುಂದುವರಿಸಿದರು
ಭಾರತದ 'ನೆರೆದೇಶ ಮೊದಲು(ನೈಬರ್‌ಹುಡ್ ಫಸ್ಟ್)' ನೀತಿಯಲ್ಲಿ ನೇಪಾಳವು ಪ್ರಧಾನ ಪಾಲುದಾರ ದೇಶವಾಗಿದೆ
Posted On:
05 AUG 2023 6:16PM by PIB Bengaluru
ಇಂದು ನೇಪಾಳದ ಪ್ರಧಾನಮಂತ್ರಿಯಾಗಿ ಪ್ರತಿಜ್ಞೆ ಸ್ವೀಕರಿಸಿದ ಗೌರವಾನ್ವಿತ ಶ್ರೀ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೂರವಾಣಿ ಸಂಭಾಷಣೆ ನಡೆಸಿದರು.
ಉಭಯ ನಾಯಕರು ಭಾರತ-ನೇಪಾಳ ದ್ವಿಪಕ್ಷೀಯ ಸಹಕಾರದ ವಿವಿಧ ಅಂಶಗಳನ್ನು ಪರಿಶೀಲಿಸಿದರು. ದ್ವಿಪಕ್ಷೀಯ ಪಾಲುದಾರಿಕೆಯನ್ನು ಮುಂದುವರಿಸಲು ಮತ್ತು ಆಳವಾದ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಹಾಗೂ ಪ್ರಧಾನಮಂತ್ರಿ ಶ್ರೀ ಪ್ರಚಂದ್ ಅವರ ಇತ್ತೀಚೆಗೆ 31 ಮೇ ರಿಂದ ೦3 ಜೂನ್ 2023 ರವರೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎರಡು ದೇಶಗಳ ನಡುವಿನ ಸ್ನೇಹಕ್ಕಾಗಿ ನಡೆದ ಚರ್ಚೆಗಳನ್ನು ಪರಿಶೀಲಿಸಿದರು.
ನೇಪಾಳವು ನಿಕಟ ಮತ್ತು ಸ್ನೇಹಪರ ನೆರೆಹೊರೆ ದೇಶವಾಗಿದೆ, ಹಾಗೂ ಭಾರತದ 'ನೆರೆಹೊರೆ ಮೊದಲು' ನೀತಿಯಲ್ಲಿ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ.
ಈ ದೂರವಾಣಿ ಸಂಭಾಷಣೆಯು ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯದ ಮುಂದುವರಿದ ಭಾಗವಾಗಿದೆ.
*******
(Release ID: 1946272)
Visitor Counter : 99
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam