ಪ್ರಧಾನ ಮಂತ್ರಿಯವರ ಕಛೇರಿ
ರಾಜಸ್ಥಾನದಲ್ಲಿ ಪ್ರಧಾನಮಂತ್ರಿಯವರ ಕಾರ್ಯಕ್ರಮದಲ್ಲಿ ರಾಜಸ್ಥಾನದ ಮುಖ್ಯಮಂತ್ರಿಯವರ ಉಪಸ್ಥಿತಿಯ ಕುರಿತು ಪ್ರಧಾನಮಂತ್ರಿಯವರ ಕಾರ್ಯಾಲಯದ ಟ್ವೀಟ್
Posted On:
27 JUL 2023 10:42AM by PIB Bengaluru
ರಾಜ್ಯದಲ್ಲಿ ಪ್ರಧಾನಮಂತ್ರಿಯವರ ಕಾರ್ಯಕ್ರಮದಲ್ಲಿ ಹಾಜರಿರುವ ಕುರಿತು ರಾಜಸ್ಥಾನದ ಮುಖ್ಯಮಂತ್ರಿಯವರು ಮಾಡಿದ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರ ಕಾರ್ಯಾಲಯವು ಈ ಕೆಳಗಿನ ಟ್ವೀಟ್ ಅನ್ನು ಬಿಡುಗಡೆ ಮಾಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಸಿಕರ್ ಗೆ ಭೇಟಿ ನೀಡುತ್ತಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯದ ಟ್ವೀಟ್ ಹೀಗಿದೆ:
"ಶ್ರೀ @ashokgehlot51 ಜೀ,
ಶಿಷ್ಟಾಚಾರಕ್ಕೆ ಅನುಗುಣವಾಗಿ, ನಿಮ್ಮನ್ನು ಔಪಚಾರಿಕವಾಗಿ ಆಹ್ವಾನಿಸಲಾಗಿದೆ ನಿಮ್ಮ ಭಾಷಣಕ್ಕೆ ಸಮಯವನ್ನು ಸಹ ನಿಗದಿಪಡಿಸಲಾಗಿತ್ತು. ಆದರೆ, ನೀವು ಹಾಜರಾಗಲು ಸಾಧ್ಯವಿಲ್ಲ ಎಂದು ನಿಮ್ಮ ಕಚೇರಿ ತಿಳಿಸಿದೆ.
ಪ್ರಧಾನಮಂತ್ರಿ @narendramodi ಅವರ ಹಿಂದಿನ ಭೇಟಿಗಳ ಸಮಯದಲ್ಲಿ ನಿಮ್ಮನ್ನು ಯಾವಾಗಲೂ ಆಹ್ವಾನಿಸಲಾಗಿದೆ ಮತ್ತು ನಿಮ್ಮ ಉಪಸ್ಥಿತಿಯಿಂದ ಆ ಕಾರ್ಯಕ್ರಮಗಳನ್ನು ನೀವು ಅಲಂಕರಿಸಿದ್ದೀರಿ.
ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿಮಗೆ ಆತ್ಮೀಯ ಸ್ವಾಗತ. ಅಭಿವೃದ್ಧಿ ಕಾಮಗಾರಿಗಳ ಫಲಕದಲ್ಲೂ ನಿಮ್ಮ ಹೆಸರಿದೆ.
ನಿಮ್ಮ ಇತ್ತೀಚಿನ ಗಾಯದಿಂದಾಗಿ ನಿಮಗೆ ಯಾವುದೇ ದೈಹಿಕ ಅಸ್ವಸ್ಥತೆ ಇರದಿದ್ದರೆ, ನಿಮ್ಮ ಉಪಸ್ಥಿತಿಯು ನಮಗೆ ಬಹಳ ಮಹತ್ವದ್ದಾಗಿರುತ್ತದೆ.
"श्री @ashokgehlot51 जी, प्रोटोकॉल के अनुसार आपको विधिवत आमंत्रित किया गया था और आपका भाषण भी रखा गया था। लेकिन आपके ऑफिस ने बताया कि आप शामिल नहीं हो पाएंगे। प्रधानमंत्री @narendramodi की पिछली यात्राओं के दौरान भी आपको हमेशा आमंत्रित किया गया है और आपकी गरिमामयी उपस्थिति भी रही है। आज के कार्यक्रम में भी आपका बहुत-बहुत स्वागत है। विकास कार्यों से जुड़ी पट्टिका पर आपका नाम भी प्रमुखता से अंकित है। हाल में आपको लगी चोट की वजह से अगर कोई शारीरिक परेशानी ना हो, तो कार्यक्रम में आप जरूर शामिल हों और इसकी शोभा बढ़ाएं।"
***
(Release ID: 1943245)
Visitor Counter : 114
Read this release in:
Punjabi
,
Bengali
,
English
,
Urdu
,
Hindi
,
Marathi
,
Manipuri
,
Assamese
,
Gujarati
,
Odia
,
Tamil
,
Telugu
,
Malayalam