ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೂರತ್ ಡೈಮಂಡ್ ಬೋರ್ಸ್ ಸೂರತ್‌ನ ವಜ್ರದ ಉದ್ಯಮದ ಕ್ರಿಯಾಶೀಲತೆ ಮತ್ತು ಬೆಳವಣಿಗೆಯನ್ನು ತೋರಿಸುತ್ತದೆ: ಪ್ರಧಾನಿ ಮೋದಿ

ಪ್ರಕಟಣಾ ದಿನಾಂಕ: 19 JUL 2023 12:46PM by PIB Bengaluru

 ಗುಜರಾತ್‌ನ ಸೂರತ್‌ನಲ್ಲಿ ಸೂರತ್ ಡೈಮಂಡ್ ಬೋರ್ಸ್‌ ವಿಶ್ವದ ಅತಿದೊಡ್ಡ ಕಚೇರಿ ಕಟ್ಟಡವಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಸುದ್ದಿಯ ವಿಡಿಯೊ ತುಣುಕನ್ನ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು:

“ಸೂರತ್ ಡೈಮಂಡ್ ಬೋರ್ಸ್ ಕಚೇರಿ ವಜ್ರೋದ್ಯಮದ ಕ್ರಿಯಾಶೀಲತೆ ಮತ್ತು ಬೆಳವಣಿಗೆಯನ್ನು ತೋರಿಸುತ್ತದೆ. ಇದು ಭಾರತದ ಉದ್ಯಮಶೀಲ ಮನೋಭಾವಕ್ಕೂ ಸಾಕ್ಷಿಯಾಗಿದೆ. ಭಾರತದಲ್ಲಿ ವ್ಯಾಪಾರ, ನಾವೀನ್ಯತೆ ಮತ್ತು ಸಹಯೋಗದ ಕೇಂದ್ರವಾಗಿ ಕಾರ್ಯನಿರ್ವಹಿಸುವುದು ಮಾತ್ರವಲ್ಲದೆ ದೇಶದ ಆರ್ಥಿಕತೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ.ಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ'' ಎಂದು ಬರೆದುಕೊಂಡಿದ್ದಾರೆ.

***


(ಪ್ರಕಟಣೆ ಐ.ಡಿ.: 1940700) ವಿಸಿಟರ್ ಕೌಂಟರ್ : 172