ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫ್ರೆಂಚ್ ಗಗನಯಾತ್ರಿ, ಪೈಲಟ್ ಮತ್ತು ನಟ ಥಾಮಸ್ ಪೆಸ್ಕ್ವೆಟ್ ಅವರನ್ನು ಭೇಟಿ ಮಾಡಿದ ಪ್ರಧಾನ ಮಂತ್ರಿಯವರು

Posted On: 14 JUL 2023 10:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2023ರ ಜುಲೈ 14ರಂದು ಪ್ಯಾರಿಸ್ ನಲ್ಲಿ ಫ್ರೆಂಚ್ ಏರೋಸ್ಪೇಸ್ ಎಂಜಿನಿಯರ್, ಪೈಲಟ್, ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಗಗನಯಾತ್ರಿ ಮತ್ತು ನಟ ಶ್ರೀ ಥಾಮಸ್ ಪೆಸ್ಕ್ವೆಟ್ ಅವರನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿಯವರು ಶ್ರೀ ಪೆಸ್ಕ್ವೆಟ್ ಅವರೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ, ವಿಶೇಷವಾಗಿ ನವೋದ್ಯಮಗಳನ್ನು ಉತ್ತೇಜಿಸುವ ಉದ್ದೇಶದಿಂದ, ಹೆಚ್ಚಿನ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವಲ್ಲಿ ಭಾರತದ ಏಳಿಗೆಯನ್ನು ಹಂಚಿಕೊಂಡರು. ಯುವಕರನ್ನು ಪ್ರೇರೇಪಿಸಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಹಯೋಗವನ್ನು ಉತ್ತೇಜಿಸಲು ಶ್ರೀ ಥಾಮಸ್ ಪೆಸ್ಕ್ವೆಟ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿಯವರು ಆಹ್ವಾನಿಸಿದರು.

ಶ್ರೀ ಪೆಸ್ಕ್ವೆಟ್ ಅವರು ಗಗನಯಾತ್ರಿಯಾಗಿ ತಮ್ಮ ಅನುಭವಗಳನ್ನು ಪ್ರಧಾನಮಂತ್ರಿಯವರೊಂದಿಗೆ ಹಂಚಿಕೊಂಡರು. ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳು ಮತ್ತು ತಂತ್ರಜ್ಞಾನಗಳ ಸಂಭಾವ್ಯ ರೂಪರೇಖೆಗಳ ಬಗ್ಗೆ ಕೂಡಾ ಅವರಿಬ್ಬರು ಚರ್ಚಿಸಿದರು.

****


(Release ID: 1939966) Visitor Counter : 114