ಪ್ರಧಾನ ಮಂತ್ರಿಯವರ ಕಛೇರಿ
ಫ್ರಾನ್ಸ್ ನ ರಾಜಧಾನಿ ಪ್ಯಾರಿಸ್ಗೆ ಪ್ರಧಾನಮಂತ್ರಿಯವರ ಆಗಮನ
Posted On:
13 JUL 2023 5:12PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 13 ಜುಲೈ 2023 ರ ಮಧ್ಯಾಹ್ನ ಪ್ಯಾರಿಸ್ ಗೆ ಆಗಮಿಸಿದರು.
ವಿಶೇಷ ಗೌರವದಿಂದ ಫ್ರಾನ್ಸ್ ನ ಪ್ರಧಾನಿ ಶ್ರೀಮತಿ ಎಲಿಸಬೆತ್ ಬೋರ್ನ್ ಅವರು ಪ್ರಧಾನಮಂತ್ರಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಪ್ರಧಾನಮಂತ್ರಿ ಮೋದಿಯವರಿಗೆ ವಿಧ್ಯುಕ್ತ ಸ್ವಾಗತ ಮತ್ತು ಗೌರವವನ್ನು ನೀಡಲಾಯಿತು.
ಫ್ರಾನ್ಸ್ ದೇಶದ ಅಧ್ಯಕ್ಷರಾದ ಶ್ರೀ ಇಮ್ಯಾನುಯೆಲ್ ಮ್ಯಾಕ್ರೋನ್ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಮೋದಿಯವರು ಗೌರವ ಅತಿಥಿಯಾಗಿ ಬಾಸ್ಟಿಲ್ ಡೇ ಪರೇಡ್ನಲ್ಲಿ ಭಾಗವಹಿಸಲಿದ್ದಾರೆ. ಈ ಭೇಟಿಯು ಭಾರತ-ಫ್ರಾನ್ಸ್ ನಡುವಿನ ತಂತ್ರಗಾರಿಕೆ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವದ ಆಚರಣೆಯನ್ನು ಸೂಚಿಸುತ್ತದೆ.
****
(Release ID: 1939243)
Visitor Counter : 140
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam