ಪ್ರಧಾನ ಮಂತ್ರಿಯವರ ಕಛೇರಿ
ಜಿಇಎಂ ಇಂಡಿಯಾದ ಉನ್ನತ ಪ್ರದರ್ಶನಕಾರರ ಗಮನಾರ್ಹ ಕೊಡುಗೆಗಳಿಗಾಗಿ ಪ್ರಧಾನಿ ಅಭಿನಂದನೆ
प्रविष्टि तिथि:
28 JUN 2023 9:40AM by PIB Bengaluru
ಜಿಇಎಂ ಇಂಡಿಯಾದ ಉನ್ನತ ಪ್ರದರ್ಶನಕಾರರ ಗಮನಾರ್ಹ ಕೊಡುಗೆಗಳಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಶ್ರೀ ಪಿಯೂಷ್ ಗೋಯಲ್ ಟ್ವೀಟ್ ಅನ್ನು ಶೇರ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
@GeM_India ನ ಉನ್ನತ ಪ್ರದರ್ಶನಕಾರರ ಗಮನಾರ್ಹ ಕೊಡುಗೆಗಳಿಗಾಗಿ ಅಭಿನಂದನೆಗಳು. ಇಂತಹ ಪ್ರಯತ್ನಗಳು ಸಮೃದ್ಧಿ ಮತ್ತು ಸ್ವಾವಲಂಬನೆಯತ್ತ ಭಾರತದ ಪ್ರಯಾಣವನ್ನು ಬಲಪಡಿಸುತ್ತವೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸರ್ಕಾರಿ ಇ-ಮಾರುಕಟ್ಟೆಯಿಂದ ಆಯೋಜಿಸಲಾದ ಕ್ರೇಟಾ-ವಿಕ್ರೇತಾ ಗೌರವ್ ಸಮ್ಮಾನ್ ಸಮಾರೋಹ್ 2023 ರಲ್ಲಿ ಜಿಇಎಂ ಇಂಡಿಯಾದ ಅತ್ಯುತ್ತಮ ಪ್ರದರ್ಶನಕಾರರನ್ನು ಗುರುತಿಸಿ ಬಹುಮಾನ ನೀಡಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
***
(रिलीज़ आईडी: 1936485)
आगंतुक पटल : 140
इस विज्ञप्ति को इन भाषाओं में पढ़ें:
Assamese
,
English
,
Urdu
,
Marathi
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam