ಪ್ರಧಾನ ಮಂತ್ರಿಯವರ ಕಛೇರಿ

ಈದ್-ಉಲ್-ಅಧಾ ಹಬ್ಬದ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳನ್ನು ಕೋರಿದ ಪ್ರಧಾನಮಂತ್ರಿ

Posted On: 29 JUN 2023 10:24AM by PIB Bengaluru

ಈದ್-ಉಲ್-ಅಧಾ ಹಬ್ಬದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭಾಶಯಗಳನ್ನು ಕೋರಿದ್ದಾರೆ.

ತಮ್ಮ ಟ್ವೀಟ್‌ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ಈ ರೀತಿ ಹೇಳಿದ್ದಾರೆ;

“ಈದ್-ಉಲ್-ಅಧಾ ಹಬ್ಬದ ಶುಭಾಶಯಗಳು.  ಈ ದಿನ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ.  ಇದು ನಮ್ಮ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯದ ಮನೋಭಾವವನ್ನು ಎತ್ತಿ ಹಿಡಿಯಲಿ. ಈದ್ ಮುಬಾರಕ್!"

*****



(Release ID: 1936275) Visitor Counter : 121