ಗೃಹ ವ್ಯವಹಾರಗಳ ಸಚಿವಾಲಯ

“ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣೆ ವಿರೋಧಿ ದಿನ”ದಂದು ಸಂದೇಶ ನೀಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು


​​​​​​​ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ಮಾದಕದ್ರವ್ಯ ವಿರುದ್ಧ ಅಳವಡಿಸಿಕೊಂಡ ಶೂನ್ಯ ಸಹಿಷ್ಣುತಾ ನೀತಿಯಿಂದ ಇಂದು ಯಶಸ್ವಿ ಫಲಿತಾಂಶ ದೊರೆತಿದೆ

 “ಒಟ್ಟಾರೆ ಸರ್ಕಾರದ ಸಮಗ್ರ ಧೋರಣೆ”ಯನ್ವಯ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನೀತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಿರುವುದು ಮೋದಿ ಸರ್ಕಾರದ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದಾಗಿದೆ

“ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣೆ ವಿರೋಧಿ ದಿನ”ದ ಸಂದರ್ಭದಲ್ಲಿ ಮಾದಕದ್ರವ್ಯ ವಿರುದ್ಧ ಹೋರಾಟ ಮಾಡುತ್ತಿರುವ ಎಲ್ಲಾ ಸಂಘಟನೆಗಳು ಮತ್ತು ಜನರನ್ನು ಅಭಿನಂದಿಸುತ್ತೇನೆ

ಭಾರತದಲ್ಲಿ ನಾವು ಮಾದಕದ್ರವ್ಯಗಳ ವ್ಯಾಪಾರಕ್ಕೆ ಅನುಮತಿಸುವುದಿಲ್ಲ ಅಥವಾ ಭಾರತದ ಮೂಲಕ ಜಗತ್ತಿಗೆ ಮಾದಕದ್ರವ್ಯವವನ್ನು ರವಾನಿಸಲು ನಾವು ಅವಕಾಶ ಕೊಡುವುದಿಲ್ಲ, ಇದು ನಮ್ಮ ಸಂಕಲ್ಪ 

2006-13 ರ ಅವಧಿಯಲ್ಲಿ 768 ಕೋಟಿ ರೂಪಾಯಿ ಮೌಲ್ಯದ ಮಾದಕದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. ಇದು ಹಿಂದಿನ ಅವಧಿಗೆ ಹೋಲಿಸಿದರೆ 2014-22 ರ ಅವಧಿಯಲ್ಲಿ 30 ಪಟ್ಟು ಅಂದರೆ 181%  ರಷ್ಟು ಏರಿಕೆಯಾಗಿದ್ದು, ಮಾದಕದ್ರವ್ಯ ಸಾಗಾಣೆದಾರರಿಂದ 22,000 ಕೋಟಿ ರೂಪಾಯಿ ಮೊತ್ತದ ಮಾದಕದ್ರವ್ಯ ವಶಪಡಿಸಿಕೊಳ್ಳಲಾಗಿದೆ

ಇದು ಮಾದಕ ದ್ರವ್ಯ ಮುಕ್ತ ಭಾರತ ಕುರಿತಾಗಿ ಮೋದಿ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ

ವಶಪಡಿಸಿಕೊಂಡ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟಲು 2022 ರಲ್ಲಿ ನಾಶಪಡಿಸುವ ಅಭಿಯಾನ ಆರಂಭಿಸಲಾಯಿತು. ಈ ಅಭಿಯಾನದಡಿ ಇದುವರೆಗೆ ದೇಶಾದ್ಯಂತ ವಶಪಡಿಸಿಕೊಂಡ 6 ಲಕ್ಷ ಕೆ.ಜಿ. ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ

ಈ ಹೋರಾಟ ಜನರ ಸಹಭಾಗಿತ್ವವಿಲ್ಲದೇ ಯಶಸ್ಸುಗಳಿಸಲು ಸಾಧ್ಯವಿಲ್ಲ, ದೇಶದ ಎಲ್ಲಾ ಜನತೆ ಮತ್ತು ಅವರ ಕುಟುಂಬಗಳಿಗೆ ಮಾದಕ ವಸ್ತುಗಳಿಂದ ದೂರ ಇರುವಂತೆ ಮನವಿ ಮಾಡುತ್ತೇನೆ

Posted On: 26 JUN 2023 11:55AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ಮಾದಕದ್ರವ್ಯ ವಿರುದ್ಧ ಅಳವಡಿಸಿಕೊಂಡ ಶೂನ್ಯ ಸಹಿಷ್ಣುತಾ ನೀತಿಯಿಂದ ಇಂದು ಯಶಸ್ವಿ ಫಲಿತಾಂಶ ದೊರೆತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್‌ ಶಾ ಹೇಳಿದ್ದಾರೆ. “ಒಟ್ಟಾರೆ ಸರ್ಕಾರದ ಸಮಗ್ರ ಧೋರಣೆ”ಯನ್ವಯ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಈ ನೀತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಿರುವುದು ಮೋದಿ ಸರ್ಕಾರದ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

“ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣೆ ವಿರೋಧಿ ದಿನ”ದ ಅಂಗವಾಗಿ ಸಂದೇಶ ನೀಡಿರುವ ಕೇಂದ್ರ ಗೃಹ ಸಚಿವರು, ಇಂದು “ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣೆ ವಿರೋಧಿ ದಿನ”. ಇಂದು ಜೂನ್‌ 26, ಎಲ್ಲಾ ಮಾದಕ ವಸ್ತುಗಳ ವಿರುದ್ಧ ಹೋರಾಟ ಮಾಡುತ್ತಿರುವ ಸಂಘಟನೆಗಳು ಮತ್ತು ಜನರನ್ನು ಅಭಿನಂದಿಸುತ್ತೇನೆ. ಈ ಬಾರಿಯೂ ಮಾದಕ ದ್ರವ್ಯ ನಿಯಂತ್ರಣ ದಳ [ಎನ್.ಸಿ.ಬಿ] ಅಖಿಲ ಭಾರತ ಮಟ್ಟದಲ್ಲಿ “ನಶೆ ಮುಕ್ತ ಪಾಕ್ಷಿಕ” ಆಚರಿಸುತ್ತಿರುವುದು ಸಂತಸದ ವಿಷಯ ಎಂದರು.

ಭಾರತದಲ್ಲಿ ನಾವು ಮಾದಕದ್ರವ್ಯಗಳ ವ್ಯಾಪಾರಕ್ಕೆ ಅನುಮತಿಸುವುದಿಲ್ಲ ಅಥವಾ ಭಾರತದ ಮೂಲಕ ಜಗತ್ತಿಗೆ ಮಾದಕದ್ರವ್ಯವವನ್ನು ರವಾನಿಸಲು ನಾವು ಅವಕಾಶ ಕೊಡುವುದಿಲ್ಲ, ಇದು ನಮ್ಮ ಸಂಕಲ್ಪ. ಈ ಮಾದಕ ದ್ರವ್ಯ ವಿರೋಧಿ ಅಭಿಯಾನದಡಿ ಎಲ್ಲಾ ಪ್ರಮುಖ ಸಂಸ್ಥೆಗಳು, ವಿಶೇಷವಾಗಿ “ಮಾದಕ ದ್ರವ್ಯ ನಿಯಂತ್ರಣ ದಳ” ಈ ವಲಯದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದೆ. ಈ ಅಭಿಯಾನವನ್ನು ಬಲಪಡಿಸಲು ಕೇಂದ್ರ ಗೃಹ ಸಚಿವಾಲಯ 2019 ರಲ್ಲಿ ನಾರ್ಕೋಡ್‌ ಅನ್ನು ಸ್ಥಾಪಿಸಿದೆ ಮತ್ತು ಪ್ರತಿಯೊಂದು ರಾಜ್ಯದಲ್ಲಿ ಮಾದಕದ್ರವ್ಯ ಕಾರ್ಯಪಡೆ [ಎ.ಎನ್.ಟಿ.ಎಫ್]‌ ಅನ್ನು ಸ್ಥಾಪಿಸಿದ್ದು,  2023 ರಲ್ಲಿ ಮೊದಲ ಅಂತರರಾಷ್ಟ್ರೀಯ ಎ.ಎನ್.ಟಿ.ಎಫ್‌ ಸಮ್ಮೇಳನವನ್ನು ದೆಹಲಿಯಲ್ಲಿ ಆಯೋಜಿಸಲಾಗಿತ್ತು.  ಮಾದಕ ವಸ್ತುಗಳ ದುರಪಯೋಗ ಮತ್ತು ದುಷ್ಪರಿಣಾಮಗಳ ವಿರುದ್ಧ ರಾಷ್ಟ್ರಮಟ್ಟದಲ್ಲಿ ಸೂಕ್ತ ವೇದಿಕೆಗಳ ಮೂಲಕ ಯುದ್ಧೋಪಾದಿಯಲ್ಲಿ ಅಭಿಯಾನ ನಡೆಸಲಾಗುತ್ತಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. 2006-13 ರ ಅವಧಿಯಲ್ಲಿ 768 ಕೋಟಿ ರೂಪಾಯಿ ಮೌಲ್ಯದ ಮಾದಕದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. ಇದು ಹಿಂದಿನ ಅವಧಿಗೆ ಹೋಲಿಸಿದರೆ 2014-22 ರ ಅವಧಿಯಲ್ಲಿ 30 ಪಟ್ಟು ಅಂದರೆ 181% ರಷ್ಟು ಏರಿಕೆಯಾಗಿದ್ದು, ಮಾದಕ ವಸ್ತು ಸಾಗಾಣೆದಾರರಿಂದ 22,000 ಕೋಟಿ ರೂಪಾಯಿ ಮೊತ್ತದ ಮಾದಕದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇದು ಮಾದಕ ದ್ರವ್ಯ ಮುಕ್ತ ಭಾರತ ಕುರಿತಾಗಿ ಮೋದಿ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟಲು 2022  ರಲ್ಲಿ ನಾಶಪಡಿಸುವ ಅಭಿಯಾನ ಆರಂಭಿಸಲಾಯಿತು. ಈ ಅಭಿಯಾನದಡಿ ಇದುವರೆಗೆ ದೇಶಾದ್ಯಂತ ವಶಪಡಿಸಿಕೊಂಡ 6 ಲಕ್ಷ ಕೆ.ಜಿ. ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ ಎಂದರು.

ಮಾದಕ ವಸ್ತುಗಳನ್ನು ನಾಶಪಡಿಸುವ ಅಥವಾ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಸಂಸ್ಥೆಯೊಂದಿಗೆ ಸಮನ್ವಯತೆಯಿಂದ ಸರ್ವಪ್ರಯತ್ನದಿಂದ ಕಾರ್ಯನಿರ್ವಹಿಸುತ್ತಿದೆ. ಈ ಹೋರಾಟ ಜನರ ಸಹಭಾಗಿತ್ವವಿಲ್ಲದೇ ಯಶಸ್ಸುಗಳಿಸಲು ಸಾಧ್ಯವಿಲ್ಲ, ದೇಶದ ಎಲ್ಲಾ ಜನತೆ ಮತ್ತು ಅವರ ಕುಟುಂಬಗಳಿಗೆ ಮಾದಕ ವಸ್ತುಗಳಿಂದ ದೂರ ಇರುವಂತೆ ಮನವಿ ಮಾಡುತ್ತೇನೆ. ಮಾದಕ ವಸ್ತು ಯುವ ಪೀಳಿಕೆಯನ್ನು ಹಾಗೂ ಸಮಾಜವನ್ನು ಟೊಳ್ಳು ಮಾಡುವುದಲ್ಲದೇ, ಕಳ್ಳ ಸಾಗಾಣೆಯಿಂದ ಗಳಿಸಿದ ಹಣವನ್ನು ದೇಶದ ಭದ್ರತೆಯ ವಿರುದ್ಧ ಬಳಕೆ ಮಾಡಲಾಗುತ್ತದೆ. ಮಾದಕ ವಸ್ತುವಿನ ದುರುಪಯೋಗದ ವಿರುದ್ಧದ ಯುದ್ಧದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ತಮ್ಮ ಸುತ್ತಮುತ್ತ ನಡೆಯುತ್ತಿರುವ ಮಾದಕದ್ರವ್ಯ ಜಾಲದ ಬಗ್ಗೆ ಭದ್ರತಾ ಸಂಸ್ಥೆಗಳಿಗೆ ತಿಳಿಸುವಂತೆ ಜನರಿಗೆ ಮನವಿ ಮಾಡುತ್ತೇನೆ.  

ಸಾಮೂಹಿಕ ಪ್ರಯತ್ನದಿಂದ ನಾವೆಲ್ಲರೂ ಮಾದಕದ್ರವ್ಯ ಸಮಸ್ಯೆಯನ್ನು ತೊಡೆದುಹಾಕಲು ಮತ್ತು “ಮಾದಕದ್ರವ್ಯ ಮಕ್ತ ಭಾರತ” ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಮೋದಿ ಸರ್ಕಾರದ ಸಂಕಲ್ಪ ಸಾಧನೆಗೆ ಕೊಡುಗೆ ನೀಡುತ್ತಿರುವ ಎನ್.ಸಿ.ಬಿ ಮತ್ತಿತರ ಸಂಘಟನೆಗಳನ್ನು ನಾನು ಅಭಿನಂದಿಸುತ್ತೇನೆ ಮತ್ತು ಮಾದಕದ್ರವ್ಯ ವಿರುದ್ಧದ ಹೋರಾಟದಲ್ಲಿ ನಾವು ಗೆಲುವು ಸಾಧಿಸುವವರೆಗೆ ವಿಶ್ರಮಿಸಬಾರದು ಎಂದು ಹೇಳಿದರು.  

****



(Release ID: 1935359) Visitor Counter : 280