ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಹುತಾತ್ಮರಾದ ಭಾರತದ ಯೋಧರಿಗೆ ಹೊಸ ಸ್ಮಾರಕ ಗೋಡೆಯನ್ನು ಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿತು.

प्रविष्टि तिथि: 15 JUN 2023 9:24AM by PIB Bengaluru

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಹುತಾತ್ಮರಾದ ಭಾರತದ ಯೋಧರಿಗೆ ಹೊಸ ಸ್ಮಾರಕ ಗೋಡೆಯನ್ನು ಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿಯವರ ಟ್ವೀಟ್ ಹೀಗಿದೆ:

"ಶಾಂತಿ ರಕ್ಷಣೆಗಾಗಿ ಹುತಾತ್ಮರಾದ ಯೋಧರ ಗೌರವಾರ್ಥವಾಗಿ ಹೊಸ ಸ್ಮಾರಕ ಗೋಡೆಯನ್ನು ನಿರ್ಮಿಸಲು ಭಾರತವು ಪ್ರಸ್ತಾಪಿಸಿದ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅನುಮೋದಿಸಿರುವುದು ಸಂತೋಷ ತಂದಿದೆ. ಈ ನಿರ್ಣಯದ ಪರವಾಗಿ ದಾಖಲೆಯ 190 ಸಹ ಪ್ರಾಯೋಜಕತ್ವಗಳು ಸಿಕ್ಕವು.  ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು."

*******

 

 


(रिलीज़ आईडी: 1932514) आगंतुक पटल : 166
इस विज्ञप्ति को इन भाषाओं में पढ़ें: English , Manipuri , Urdu , Marathi , हिन्दी , Bengali , Assamese , Punjabi , Gujarati , Odia , Tamil , Telugu , Malayalam