ಪ್ರಧಾನ ಮಂತ್ರಿಯವರ ಕಛೇರಿ
ಶಿಕ್ಷಣ ಸಚಿವಾಲಯದ ಉಪಕ್ರಮವಾದ ಜಿ20 ಜನಭಾಗಿದಾರಿ ಕಾರ್ಯಕ್ರಮದಲ್ಲಿ ದಾಖಲೆಯ ಪ್ರಮಾಣದಲ್ಲಿ ಭಾಗವಹಿಸುವಿಕೆಗೆ ಪ್ರಧಾನಿ ಶ್ಲಾಘನೆ
प्रविष्टि तिथि:
10 JUN 2023 7:53PM by PIB Bengaluru
ಶಿಕ್ಷಣ ಸಚಿವಾಲಯದ ಉಪಕ್ರಮವಾದ ಜಿ20 ಜನಭಾಗಿದಾರಿ ಕಾರ್ಯಕ್ರಮದಲ್ಲಿ ದಾಖಲೆಯ ಪ್ರಮಾಣದಲ್ಲಿ ಸಂಬಂಧಪಟ್ಟವರ ಭಾಗವಹಿಸುವಿಕೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಭಾರತದ ಜಿ20 ಅಧ್ಯಕ್ಷತೆಯ ಕೇಂದ್ರ ಬಿಂದುವಾಗಿ ಶಿಕ್ಷಣ ಸಚಿವಾಲಯವು, ಮಿಶ್ರ ಕಲಿಕೆಯ ಸಂದರ್ಭವಾಗಿ "ಫೌಂಡೇಶನ್ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ಖಾತ್ರಿಪಡಿಸಿಕೊಳ್ಳುವುದು (FLN)" ಎಂಬ ವಿಷಯವನ್ನು ಉತ್ತೇಜಿಸುವ ಮತ್ತು ಅನುಮೋದಿಸುವ ಗುರಿಯನ್ನು ಹೊಂದಿರುವ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಸರಣಿಯನ್ನು ವಿಶೇಷವಾಗಿ ಆಯೋಜಿಸುತ್ತಿದೆ.
ಈ ಉಪಕ್ರಮದಡಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಮುದಾಯದ ಸದಸ್ಯರು ಸೇರಿದಂತೆ 1.5 ಕೋಟಿಗೂ ಹೆಚ್ಚು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಶಿಕ್ಷಣ ಸಚಿವಾಲಯದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿರುವ ಪ್ರಧಾನಿ; "ದಾಖಲೆಯ ಮಟ್ಟದಲ್ಲಿ ಭಾಗವಹಿಸುವಿಕೆ ಕಂಡು ಪುಳಕವಾಗುತ್ತಿದೆ. ಇದು ಅಂತರ್ಗತ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ನಮ್ಮ ಹಂಚಿಕೆಯ ದೃಷ್ಟಿಯನ್ನು ಬಲಪಡಿಸುತ್ತದೆ. ಭಾರತದ ಜಿ20 ಅಧ್ಯಕ್ಷತೆಯಲ್ಲಿ ಭಾಗವಹಿಸಿದ ಮತ್ತು ಬಲಪಡಿಸಿದ ಎಲ್ಲರಿಗೂ ಅಭಿನಂದನೆಗಳು'' ಎಂದು ಬರೆದುಕೊಂಡಿದ್ದಾರೆ.
*******
(रिलीज़ आईडी: 1931656)
आगंतुक पटल : 202
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam