ಪ್ರಧಾನ ಮಂತ್ರಿಯವರ ಕಛೇರಿ
ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಭಾರತದ ಜನರು ಅಪ್ರತಿಮ ಚಾಂಪಿಯನ್ಗಳು: ಪ್ರಧಾನಮಂತ್ರಿ
Posted On:
10 JUN 2023 4:07PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯರ ನವೀನ ಉತ್ಸಾಹ ಮತ್ತು ಉತ್ತಮ ಹೊಂದಾಣಿಕೆಯನ್ನು ಶ್ಲಾಘಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಈ ಸ್ಫೂರ್ತಿಯನ್ನು ಮುಂದುವರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ದೇಶ ಮಾಡಿರುವ ಪ್ರಗತಿಯ ಕುರಿತು ನಾಗರಿಕರೊಬ್ಬರು ಮಾಡಿದ ಟ್ವೀಟ್ಗೆ ಪ್ರತಿಕ್ರಯಿಸಿದ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:
"ಭಾರತೀಯರು ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅಪ್ರತಿಮ ಚಾಂಪಿಯನ್ಗಳು! ಅವರು ನಾವೀನ್ಯತೆಯನ್ನು ಸ್ವೀಕರಿಸಲು ಉತ್ಸುಕರಾಗಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಬದಲಾವಣೆಯು ಭಾರತದಾದ್ಯಂತ ಗೋಚರಿಸುತ್ತದೆ. ಮುಂಬರುವ ವರ್ಷಗಳಲ್ಲಿ ನಾವು ಈ ವೇಗವನ್ನು ಮುಂದುವರಿಸುತ್ತೇವೆ."
***
(Release ID: 1931478)
Visitor Counter : 133
Read this release in:
Malayalam
,
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu