ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಓಪನ್ಎಐ ನ(OpenAI)  ಸಿಇಒ, ಸ್ಯಾಮ್ ಅಲ್ಟ್ಮನ್ ಅವರಿಂದ ಪ್ರಧಾನಮಂತ್ರಿ ಅವರ ಭೇಟಿ.

Posted On: 09 JUN 2023 10:44AM by PIB Bengaluru

ಓಪನ್ಎಐನ, ಸಿಇಒ, ಶ್ರೀ ಸ್ಯಾಮ್ ಆಲ್ಟ್ಮನ್ ಅವರು ನಿನ್ನೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.

ಸ್ಯಾಮ್ ಆಲ್ಟ್ಮನ್ ಅವರ ಟ್ವೀಟ್ಗೆ ಉತ್ತರಿಸಿದ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:

“ಒಳನೋಟವುಳ್ಳ ಸಂಭಾಷಣೆಗಾಗಿ ಧನ್ಯವಾದಗಳು ಸ್ಯಾಮ್ ಆಲ್ಟ್ಮನ್ಅವರೆ. ಭಾರತದ ತಾಂತ್ರಿಕ ಪರಿಸರ ವ್ಯವಸ್ಥೆಯನ್ನು ಬೆಳೆಸುವಲ್ಲಿ ಕೃತಕಬುದ್ಧಿಮತ್ತೆಯ ಸಾಮರ್ಥ್ಯವು ನಿಜವಾಗಿಯೂ ವಿಸ್ತಾರವಾಗಿದೆ ಮತ್ತು ಅದು ವಿಶೇಷವಾಗಿ ಯುವಜನರಲ್ಲಿಯೂ ಇದೆ. ನಮ್ಮ ನಾಗರಿಕರನ್ನು ಸಬಲೀಕರಣಗೊಳಿಸಲು ನಮ್ಮ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸುವ ಎಲ್ಲಾ ಸಹಯೋಗಗಳನ್ನು ನಾವು ಸ್ವಾಗತಿಸುತ್ತೇವೆ.”

 

*****


(Release ID: 1930945) Visitor Counter : 122