ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಭಾರತದ ಅಧ್ಯಕ್ಷತೆಯಲ್ಲಿ SCO ಶೃಂಗಸಭೆ

Posted On: 30 MAY 2023 8:15PM by PIB Bengaluru

16 ಸೆಪ್ಟೆಂಬರ್ 2022 ರಂದು ನಡೆದ ಸಮರ್ಕಂಡ್ ಶೃಂಗಸಭೆಯಲ್ಲಿ ಭಾರತವು SCO (ಶಾಂಘೈ ಕೋ ಆಪರೇಷನ್ ಆರ್ಗನೈಜೇಷನ್) ದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಈ ಅಧ್ಯಕ್ಷೀಯ ಸ್ಥಾನ ಪ್ರತಿ ಬಾರಿ ಬದಲಾವಣೆಯಾಗುವ ಸಂಪ್ರದಾಯದಂತೆ ಈ ಬಾರಿ ಭಾರತಕ್ಕೆ ದಕ್ಕಿದೆ.  ಮೊಟ್ಟ ಮೊದಲ ಬಾರಿಗೆ ಭಾರತದ ಅಧ್ಯಕ್ಷತೆಯಲ್ಲಿ SCO ಒಕ್ಕೂಟದ ದೇಶಗಳ ಮುಖ್ಯಸ್ಥರ 23 ನೇ ಶೃಂಗಸಭೆಯು ವರ್ಚುವಲ್ ಸ್ವರೂಪದಲ್ಲಿ 4 ಜುಲೈ 2023 ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಎಲ್ಲಾ SCO ಸದಸ್ಯ ರಾಷ್ಟ್ರಗಳು, ಅಂದರೆ. ಚೀನಾ, ರಷ್ಯಾ, ಕಜಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ. ಇದಲ್ಲದೆ, ಇರಾನ್, ಬೆಲಾರಸ್ ಮತ್ತು ಮಂಗೋಲಿಯಾವನ್ನು ರಾಜ್ಯಗಳ ಮುಖ್ಯಸ್ಥರನ್ನೂ ಆಹ್ವಾನಿಸಲಾಗಿದೆ. SCO ಸಂಪ್ರದಾಯದ ಪ್ರಕಾರ, ತುರ್ಕಮೆನಿಸ್ತಾನವನ್ನು ಅತಿಥಿ ರಾಷ್ಟ್ರವಾಗಿ ಆಹ್ವಾನಿಸಲಾಗಿದೆ. ಎರಡು SCO ಸಂಸ್ಥೆಗಳಾದ ಸೆಕ್ರೆಟರಿಯೇಟ್ ಮತ್ತು SCO RATS ಮುಖ್ಯಸ್ಥರು ಉಪಸ್ಥಿತರಿರುತ್ತಾರೆ. ಇದಲ್ಲದೆ, ಆರು ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳಾದ UN, ASEAN, CIS, CSTO, EAEU ಮತ್ತು CICA ಮುಖ್ಯಸ್ಥರನ್ನು ಸಹ ಆಹ್ವಾನಿಸಲಾಗಿದೆ.

ಈ ಬಾರಿಯ ಶೃಂಗಸಭೆಯ ಧ್ಯೇಯ ವಾಕ್ಯ 'ಸುರಕ್ಷಿತ SCO ಕಡೆಗೆ' ಆಗಿದೆ. SECURE ಸಂಕ್ಷಿಪ್ತ ರೂಪವನ್ನು 2018 ರ SCO ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರೇ ರೂಪಿಸಿದ್ದರು. SECURE ಎಂದರೆ ಸೆಕ್ಯೂರ್, ಎಕಾನಮಿ ಅಂಡ್ ಸ್ಟಾಂಡ್ಸ್ ಫಾರ್ ಸೆಕ್ಯೂರಿಟಿ, ಎಕಾನಮಿ ಅಂಡ್ ಟ್ರೇಡ್, ಕನೆಕ್ಟಿವಿಟಿ, ಯೂನಿಟಿ, ರೆಸ್ಪೆಕ್ಟ್ ಫಾರ್ ಸಾವರ್ನಿಟಿ, ಟೆರಿಟೋರಿಯಲ್ ಇಂಟಿಗ್ರಿಟಿ ಅಂಡ್ ಎನ್ವಿರಾನ್ ಮೆಂಟ್.  ಭದ್ರತೆ; ಆರ್ಥಿಕತೆ ಮತ್ತು ವ್ಯಾಪಾರ; ಸಂಪರ್ಕ; ಏಕತೆ; ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ; ಮತ್ತು ಪರಿಸರ. SCO ಅಧ್ಯಕ್ಷತಾವಧಿಯಲ್ಲಿ ಈ ವಿಷಯಗಳ ಬಗ್ಗೆ ಹೆಚ್ಚು ನಿಗಾ ವಹಿಸಲಾಗಿದೆ.

ಭಾರತ ತನ್ನ ಅಧ್ಯಕ್ಷತೆಯಲ್ಲಿ ಸಹಕಾರದ ಹೊಸ ಆಧಾರಸ್ತಂಭಗಳನ್ನು ಸ್ಥಾಪಿಸಿದೆ – ಸ್ಟಾರ್ಟ್ಅಪ್ ಗಳು ಮತ್ತು ನಾವೀನ್ಯತೆ, ಸಾಂಪ್ರದಾಯಿಕ ಔಷಧ; ಡಿಜಿಟಲ್ ಸೇರ್ಪಡೆ, ಯುವ ಸಬಲೀಕರಣ, ಮತ್ತು ಬೌದ್ಧ ಪರಂಪರೆ. ಹೆಚ್ಚುವರಿಯಾಗಿ, ನಮ್ಮ ರಾಷ್ಟ್ರಗಳ ನಡುವಿನ ಐತಿಹಾಸಿಕ ಮತ್ತು ನಾಗರಿಕತೆಯ ಬಾಂಧವ್ಯವನ್ನು, ಜನರ ಸಂಬಂಧಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತವು ನಿರಂತರ ಪ್ರಯತ್ನ ನಡೆಸಿದೆ. 2022-23ರ ಸಾಲಿನಲ್ಲಿ ವಾರಾಣಸಿಯಲ್ಲಿ ಆಯೋಜಿಸಿದ್ದ ಮೊದಲ SCO ಸಾಂಸ್ಕೃತಿಕ ಮತ್ತು ಪ್ರವಾಸಿ ಬಂಡವಾಳ ಸಮಾವೇಶದಲ್ಲಿ ವಿವಿಧ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. 

SCO ಭಾರತದ ಅಧ್ಯಕ್ಷೀಯ ಸ್ಥಾನದಲ್ಲಿ ತೀವ್ರವಾದ ಚಟುವಟಿಕೆ ಮತ್ತು ಪರಸ್ಪರ ಪ್ರಯೋಜನಕಾರಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸದಸ್ಯ ರಾಷ್ಟ್ರಗಳ ನಡುವೆ ಹೆಚ್ಚಿನ ಸಹಕಾರ ಸಂಬಂಧ ವೃದ್ಧಿಸಲಾಗಿದೆ. ಭಾರತವು 14 ಸಚಿವ ಮಟ್ಟದ ಸಭೆಗಳು ಸೇರಿದಂತೆ ಒಟ್ಟು 134 ಸಭೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಎಸ್ ಸಿ ಒ ಶೃಂಗದಲ್ಲಿ ಸಕಾರಾತ್ಮಕ ಮತ್ತು ರಚನಾತ್ಮಕ ಪಾತ್ರವನ್ನು ವಹಿಸಲು ಭಾರತವು ಬದ್ಧವಾಗಿದೆ ಮತ್ತು ಅಧ್ಯಕ್ಷೀಯತೆಯ ಅವಧಿಯಲ್ಲಿ  SCO ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಲು ಭಾರತ ಎದುರು ನೋಡುತ್ತಿದೆ.

****



(Release ID: 1929670) Visitor Counter : 171