ಪ್ರಧಾನ ಮಂತ್ರಿಯವರ ಕಛೇರಿ
ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತದೆ: ಪ್ರಧಾನಿ ಮೋದಿ
ತಾವು ಹಂಚಿಕೊಂಡ ವೀಡಿಯೊಗೆ ತಮ್ಮ ಭಾವನೆಗಳನ್ನು ಧ್ವನಿ ರೂಪದಲ್ಲಿ ದಾಖಲಿಸಲು ನಾಗರಿಕರಿಗೆ ಕೋರಿಕೆ
Posted On:
26 MAY 2023 6:02PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನದ ನೋಟಗಳನ್ನು ಹಂಚಿಕೊಂಡಿದ್ದಾರೆ. ತಾವು ಹಂಚಿಕೊಂಡ ವಿಡಿಯೋಗೆ ಧ್ವನಿ ರೂಪದಲ್ಲಿ ಆಲೋಚನೆಗಳನ್ನು ಹಂಚಿಕೊಳ್ಳುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರಧಾನ ಮಂತ್ರಿಗಳು ತಮ್ಮ ಟ್ವೀಟ್ ನಲ್ಲಿ: ಸಂಸತ್ತಿನ ನೂತನ ಕಟ್ಟಡವು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡುತ್ತದೆ. ಈ ವೀಡಿಯೊ ಐತಿಹಾಸಿಕ ಕಟ್ಟಡದ ನೋಟವನ್ನು ನಮಗೆ ನೀಡುತ್ತದೆ.
ಈ ಸಂದರ್ಭದಲ್ಲಿ ನಿಮ್ಮಲ್ಲಿ ನಾನು ವಿಶೇಷ ಮನವಿಯೊಂದನ್ನು ಮಾಡುತ್ತೇನೆ, ಈ ವೀಡಿಯೊವನ್ನು ನಿಮ್ಮ ಸ್ವಂತ ಧ್ವನಿಯಲ್ಲಿ ಹಂಚಿಕೊಳ್ಳಿ, ಅದು ನಿಮ್ಮ ಆಲೋಚನೆಗಳನ್ನು ತಿಳಿಸುತ್ತದೆ. ಅವುಗಳಲ್ಲಿ ಕೆಲವನ್ನು ನಾನು ಮರು-ಟ್ವೀಟ್ ಮಾಡುತ್ತೇನೆ. http://''#MyParliamentMyPride'' ಎಂಬ ಟ್ಯಾಗ್ ಲೈನ್ ಬಳಸಲು ಮರೆಯಬೇಡಿ ಎಂದು ಕೇಳಿಕೊಂಡಿದ್ದಾರೆ.
***
(Release ID: 1927593)
Visitor Counter : 116
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam