ಪ್ರಧಾನ ಮಂತ್ರಿಯವರ ಕಛೇರಿ
ಮಾ ಕಾಮಾಕ್ಯ ಕಾರಿಡಾರ್ ಒಂದು ಹೆಗ್ಗುರುತು ಉಪಕ್ರಮವಾಗಲಿದೆ: ಪ್ರಧಾನಮಂತ್ರಿ
प्रविष्टि तिथि:
19 APR 2023 3:15PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಾಶಿ ವಿಶ್ವನಾಥ ಧಾಮ ಮತ್ತು ಶ್ರೀ ಮಹಾಕಾಲ್ ಮಹಾಲೋಕ್ ಕಾರಿಡಾರ್ ನಂತೆ, ಮಾ ಕಾಮಾಕ್ಯ ಕಾರಿಡಾರ್ ಕೂಡ ಒಂದು ಹೆಗ್ಗುರುತು ಉಪಕ್ರಮವಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಟ್ವೀಟ್ ನಲ್ಲಿ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರು ನವೀಕರಿಸಿದ ಮಾ ಕಾಮಾಕ್ಯ ಕಾರಿಡಾರ್ ಮುಂದಿನ ದಿನಗಳಲ್ಲಿ ಹೇಗೆ ಕಾಣುತ್ತದೆ ಎಂಬುದರ ಒಂದು ಇಣುಕುನೋಟವನ್ನು ಹಂಚಿಕೊಂಡಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ;
“ಮಾ ಕಾಮಾಕ್ಯ ಕಾರಿಡಾರ್ ಒಂದು ಹೆಗ್ಗುರುತು ಉಪಕ್ರಮವಾಗಲಿದೆ ಎಂದು ನನಗೆ ಖಾತ್ರಿಯಿದೆ. ಆಧ್ಯಾತ್ಮಿಕ ಅನುಭವಕ್ಕೆ ಸಂಬಂಧಿಸಿದಂತೆ ಕಾಶಿ ವಿಶ್ವನಾಥ ಧಾಮ ಮತ್ತು ಶ್ರೀ ಮಹಾಕಾಲ್ ಮಹಾಲೋಕ್ ಪರಿವರ್ತಕವಾಗಿವೆ. ಪ್ರವಾಸೋದ್ಯಮವನ್ನು ಹೆಚ್ಚಿಸಲಾಗುವ ಜತೆಗೆ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ಸಿಗುತ್ತದೆ ಎಂಬ ಅಂಶವೂ ಅಷ್ಟೇ ಮುಖ್ಯವಾಗಿದೆ,’’ ಎಂದಿದ್ದಾರೆ.
***
(रिलीज़ आईडी: 1921885)
आगंतुक पटल : 191
इस विज्ञप्ति को इन भाषाओं में पढ़ें:
Assamese
,
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam