ಪ್ರಧಾನ ಮಂತ್ರಿಯವರ ಕಛೇರಿ

​​​​​​​ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ನಿಖತ್ ಜರೀನ್ ಗೆ ಪ್ರಧಾನಿ ಅಭಿನಂದನೆ

Posted On: 26 MAR 2023 9:21PM by PIB Bengaluru

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಅದ್ಭುತ ಗೆಲುವು ಸಾಧಿಸಿದ್ದಕ್ಕಾಗಿ ಮತ್ತು 50 ಕೆಜಿ ಲೈಟ್ ಫ್ಲೈವೇಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುದಕ್ಕಾಗಿ ನಿಖತ್ ಜರೀನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದ್ದಾರೆ.

ಈ ಬಗ್ಗೆ  ಪ್ರಧಾನ ಮಂತ್ರಿ ಅವರು  ಟ್ವೀಟ್ ಮಾಡಿದ್ದು, ಅದರಲ್ಲಿ;

"ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ  ಅದ್ಭುತ ಗೆಲುವು ಸಾಧಿಸಿ ಚಿನ್ನ ಗೆದ್ದ ನಿಖತ್ ಜರೀನ್ ಅವರಿಗೆ ಅಭಿನಂದನೆಗಳು. ಅವರು ಅತ್ಯುತ್ತಮ ಚಾಂಪಿಯನ್ ಆಗಿದ್ದು, ಅವರ ಯಶಸ್ಸು ಅನೇಕ ಸಂದರ್ಭಗಳಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆ.” ಎಂದು ಹೇಳಿದ್ದಾರೆ.

 

***



(Release ID: 1911440) Visitor Counter : 123