ಪ್ರಧಾನ ಮಂತ್ರಿಯವರ ಕಛೇರಿ
ವಿರುದುನಗರದಲ್ಲಿ ಪಿಎಂ ಮಿತ್ರಾ ಬೃಹತ್ ಜವಳಿ ಪಾರ್ಕ್ ಗಾಗಿ ತಮಿಳುನಾಡಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ
ಪ್ರಕಟಣಾ ದಿನಾಂಕ:
22 MAR 2023 5:49PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಶೋತ್ತರ ಜಿಲ್ಲೆ ವಿರುದುನಗರದಲ್ಲಿ ಪಿಎಂ ಮಿತ್ರಾ ಬೃಹತ್ ಜವಳಿ ಪಾರ್ಕ್ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು, ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಬೃಹತ್ ಜವಳಿ ಪಾರ್ಕ್ ಆರಂಭಿಸುವ ಪ್ರಕಟಣೆಯನ್ನು ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಮಂತ್ರಿ ಹೀಗೆ ಟ್ವೀಟ್ ಮಾಡಿದ್ದಾರೆ.
“ಇಂದು ತಮಿಳುನಾಡಿನ ನನ್ನ ಸಹೋದರಿಯರು ಮತ್ತು ಸಹೋದರರಿಗೆ ವಿಶೇಷ ದಿನ..! ಆಶೋತ್ತರ ಜಿಲ್ಲೆ ವಿರುದುನಗರ ಪಿಎಂ ಮಿತ್ರಾ ಜವಳಿ ಪಾರ್ಕ್ ನ ನೆಲೆಯಾಗಲಿದೆ. ಇದು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುವುದಲ್ಲದೆ ರಾಜ್ಯದ ಯುವಜನತೆಗೆ ಪ್ರಯೋಜನ ಕಲ್ಪಿಸಲಿದೆ’’
#PragatiKaPMMitra"
***
(ಪ್ರಕಟಣೆ ಐ.ಡಿ.: 1909660)
ವಿಸಿಟರ್ ಕೌಂಟರ್ : 174
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam