ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಎನ್.ಟಿ.ಪಿ.ಸಿ ಹಸಿರು ಇಂಧನ ನಿಯಮಿತದಲ್ಲಿ ನಿಗದಿತ ಮಿತಿಯನ್ನು ಮೀರಿ ಹೂಡಿಕೆ ಮಾಡಲು ಮಹಾರತ್ನ ಸಿಪಿಎಸ್ಇಗಳಿಗೆ ಅಧಿಕಾರ ಹಂಚಿಕೆಯ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳಿಂದ ಎನ್.ಟಿಪಿಸಿ ನಿಯಮಿತಕ್ಕೆ ವಿನಾಯಿತಿ ನೀಡಲು ಸಂಪುಟದ ಅನುಮೋದನೆ


ಎನ್.ಟಿ.ಪಿ.ಸಿ ನಿಯಮಿತದಿಂದ 60 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸಲು ಎನ್.ಆರ್.ಇ.ಎಲ್ ಮತ್ತು ಅದರ ಇತರ ಜೆವಿಗಳು / ಅಂಗಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಎನ್.ಜಿಇಎಲ್.ಗೆ ಅನುಮೋದನೆ 

Posted On: 17 MAR 2023 7:22PM by PIB Bengaluru

ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಎನ್.ಟಿಪಿಸಿ ನಿಯಮಿತದ ಎನ್ ಟಿಪಿಸಿ ಲಿಮಿಟೆಡ್ ನ ಅಂಗಸಂಸ್ಥೆಯಾದ ಎನ್.ಟಿಪಿಸಿ ಹಸಿರು ಇಂಧನ ನಿಯಮಿತ (ಎನ್.ಜಿಇಎಲ್) ನಲ್ಲಿ ಹೂಡಿಕೆ ಮಾಡಲು ಮಹಾರತ್ನ ಸಿಪಿಎಸ್ಇಗಳಿಗೆ ಅಧಿಕಾರ ಹಸ್ತಾಂತರದ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳಿಂದ ವಿನಾಯಿತಿ ನೀಡಲು ತನ್ನ ಅನುಮೋದನೆ ನೀಡಿದೆ. ಸಿಸಿಇಎ, ಎನ್.ಟಿ.ಪಿಸಿ ನವೀಕರಿಸಬಹುದಾದ ಇಂಧನ ನಿಯಮಿತ (ಎನ್ಆರ್.ಇ.ಎಲ್) ಮತ್ತು ಅದರ ಇತರ ಜೆವಿಗಳು / ಅಂಗಸಂಸ್ಥೆಗಳಲ್ಲಿ ಎನ್.ಜಿ.ಇಎಲ್.ನ ಹೂಡಿಕೆಗೆ ಎನ್.ಟಿ.ಪಿಸಿ ಲಿಮಿಟೆಡ್ ನ 60 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ (ಆರ್.ಇ.) ಸಾಮರ್ಥ್ಯದ ಗುರಿಯನ್ನು ಸಾಧಿಸಲು 5000 ಕೋಟಿ ರೂ.ಗಳಿಂದ 7500 ಕೋಟಿ ರೂ.ಗಳವರೆಗೆ ಹಣಕಾಸಿನ ಮಿತಿಯ ಹೊರಗೆ ಅದರ ನಿವ್ವಳ ಮೌಲ್ಯದ ಶೇ.15 ಮಿತಿಗೆ ಒಳಪಟ್ಟು ವಿನಾಯಿತಿ ನೀಡಿದೆ.

ಕಾಪ್ 26 ರಲ್ಲಿನ ಬದ್ಧತೆಗೆ ಅನುಗುಣವಾಗಿ, ಭಾರತವು ತನ್ನ ಅಭಿವೃದ್ಧಿ ಗುರಿಗಳನ್ನು ಪೂರೈಸುವಾಗ ಕಡಿಮೆ ಇಂಗಾಲದ ಹೊರಸೂಸುವಿಕೆಯ ಹಾದಿಯತ್ತ ಕಾರ್ಯನಿರ್ವಹಿಸುತ್ತಿದೆ.  ದೇಶವು 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ತಲುಪುವ ಗುರಿಯನ್ನು ಹೊಂದಿದೆ.  ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿ ಮತ್ತು ದೇಶದ ಪ್ರಮುಖ ವಿದ್ಯುತ್ ಸೌಲಭ್ಯವಾಗಿ, ಎನ್.ಟಿ.ಪಿ.ಸಿ, ಆರ್.ಇ. ವಲಯದಲ್ಲಿನ ಈ ಹೂಡಿಕೆಯ ಮೂಲಕ  2032 ರ ವೇಳೆಗೆ 60 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರಿಸುವ ಗುರಿಯನ್ನು ಹೊಂದಿದೆ, ಇದು ಮೇಲೆ ಹೇಳಿದ ಗುರಿಯನ್ನು ಸಾಧಿಸಲು ದೇಶಕ್ಕೆ ಸಹಾಯ ಮಾಡುತ್ತದೆ ಮತ್ತು 2070ರ ವೇಳೆಗೆ 'ನಿವ್ವಳ ಶೂನ್ಯ' ಹೊರಸೂಸುವಿಕೆಯನ್ನು ಸಾಧಿಸುವ ದೊಡ್ಡ ಗುರಿಯತ್ತ ಸಾಗುತ್ತದೆ.  'ನಿವ್ವಳ ಶೂನ್ಯ'ದ ಕಡೆಗೆ ಹವಾಮಾನ ಕ್ರಮಕ್ಕೆ ಭಾರತದ ಕೊಡುಗೆಯಾಗಿ ಇತ್ತೀಚೆಗೆ ಕಾಪ್ 26 ಶೃಂಗಸಭೆಯಲ್ಲಿ ಘೋಷಿಸಿದ ಸರ್ಕಾರದ "ಪಂಚಾಮೃತ" ಕ್ಕೆ ಅನುಗುಣವಾಗಿ ವರ್ಧಿತ ಗುರಿ ಇದಾಗಿದೆ.

ಎನ್.ಟಿಪಿಸಿಯ ನವೀಕರಿಸಬಹುದಾದ ಇಂಧನ ಪ್ರಯಾಣದಲ್ಲಿ ಧ್ವಜಧಾರಿಯಾಗುವ ಗುರಿಯನ್ನು ಎನ್.ಜಿಇಎಲ್ ಹೊಂದಿದೆ ಮತ್ತು ಪ್ರಸ್ತುತ 2,861 ಮೆಗಾವ್ಯಾಟ್ ನ 15 ಆರ್ ಇ ಸ್ವತ್ತುಗಳನ್ನು ಹೊಂದಿದ್ದು, ಅವು ಕಾರ್ಯನಿರ್ವಹಿಸುತ್ತಿವೆ / ವಾಣಿಜ್ಯ ಕಾರ್ಯಾಚರಣೆ ದಿನಾಂಕ (ಸಿಒಡಿ) ಮತ್ತು ಅದರ ಅಂಗಸಂಸ್ಥೆ ಎನ್.ಆರ್.ಇಎಲ್ (ಎನ್.ಟಿಪಿಸಿ ನವೀಕರಿಸಬಹುದಾದ ಇಂಧನ ಲಿಮಿಟೆಡ್) ಮೂಲಕ ಸ್ಪರ್ಧಾತ್ಮಕ ಬಿಡ್ಡಿಂಗ್ ಮತ್ತು ಹಸಿರು ಇಂಧನ ವ್ಯವಹಾರದಲ್ಲಿ ಅನೇಕ ಉದಯೋನ್ಮುಖ ಅವಕಾಶಗಳಲ್ಲಿ ಭಾಗವಹಿಸುವ ಮೂಲಕ ತನ್ನ ಆರ್.ಇ ಖಾತೆಯನ್ನು ವಿಸ್ತರಿಸಲು ಸಜ್ಜಾಗಿದೆ.  ಎನ್ ಟಿಪಿಸಿಗೆ ನೀಡಲಾದ ವಿನಾಯಿತಿಯು ಹಸಿರು ಆರ್ಥಿಕತೆಯಾಗಿ ಭಾರತದ ಜಾಗತಿಕ ಚಿತ್ರಣವನ್ನು ಉತ್ತಮಪಡಿಸಲು ಸಹಾಯ ಮಾಡುತ್ತದೆ.  ಇದು ಭಾರತದ ಇಂಧನ ಉತ್ಪಾದನೆಯನ್ನು ವೈವಿಧ್ಯಗೊಳಿಸುವ ಮೂಲಕ ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಭಾರತದ ಅವಲಂಬನೆಯನ್ನು ತಗ್ಗಿಸುತ್ತದೆ ಮತ್ತು ದೇಶದ ಕಲ್ಲಿದ್ದಲು ಆಮದು ಬಿಲ್ ಗಳನ್ನು ಸಹ ಕಡಿಮೆ ಮಾಡುತ್ತದೆ.  ಇದಲ್ಲದೆ, ಇದು ದೇಶದ ಪ್ರತಿಯೊಂದು ಮೂಲೆಗೂ 24 *7 ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. 

ನವೀಕರಿಸಬಹುದಾದ ಇಂಧನ ಯೋಜನೆಯು ನಿರ್ಮಾಣ ಹಂತದಲ್ಲಿ ಮತ್ತು ಒ ಮತ್ತು ಎಂ ಹಂತದಲ್ಲಿ ಸ್ಥಳೀಯ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

*****


(Release ID: 1908191) Visitor Counter : 142