ಪ್ರಧಾನ ಮಂತ್ರಿಯವರ ಕಛೇರಿ
ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2023ಕ್ಕೆ 100 ದಿನಗಳ ಕ್ಷಣಗಣನೆಯನ್ನು ಆಚರಿಸಲು ಯೋಗ ಮಹೋತ್ಸವ 2023 ರಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿಯವರು ಎಲ್ಲರಿಗೂ ಕರೆ ನೀಡಿದರು
प्रविष्टि तिथि:
13 MAR 2023 11:00AM by PIB Bengaluru
2023ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ 100 ದಿನಗಳ ಕ್ಷಣಗಣನೆಯನ್ನು ಆಚರಿಸಲು ನಡೆಯುವ ಮೂರು ದಿನಗಳ ಯೋಗ ಮಹೋತ್ಸವ 2023ರಲ್ಲಿ ಎಲ್ಲರೂ ಭಾಗವಹಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೋರಿದ್ದಾರೆ. ಮೂರು ದಿನಗಳ ಯೋಗ ಮಹೋತ್ಸವವು ನವದೆಹಲಿಯಲ್ಲಿ ಮಾರ್ಚ್ 13 ಮತ್ತು 14 ರಂದು ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಹಾಗು ಮಾರ್ಚ್ 15 ರಂದು ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗ ದಲ್ಲಿ ನಡೆಯಲಿದೆ..
ಆಯುಷ್ ಸಚಿವಾಲಯದ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:
“ಯೋಗ ದಿನಾಚರಣೆಗೆ ನೂರು ದಿನಗಳು ಬಾಕಿಯಿದ್ದು, ಅದನ್ನು ಉತ್ಸಾಹದಿಂದ ಆಚರಿಸುವಂತೆ ನಿಮ್ಮೆಲ್ಲರನ್ನು ಕೋರುತ್ತೇನೆ. ಮತ್ತು, ನೀವು ಈಗಾಗಲೇ ಯೋಗವನ್ನು ನಿಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಲ್ಲದಿದ್ದರೆ, ಆದಷ್ಟು ಬೇಗ ಮಾಡಿ.”
***
(रिलीज़ आईडी: 1906283)
आगंतुक पटल : 210
इस विज्ञप्ति को इन भाषाओं में पढ़ें:
Telugu
,
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam