ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರಪತಿಗಳ ಲೇಖನವನ್ನು ಹಂಚಿಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ
Posted On:
08 MAR 2023 7:02PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. "ಅವಳ ಕಥೆ, ನನ್ನ ಕಥೆ - ನಾನು ಲಿಂಗ ನ್ಯಾಯದ ಬಗ್ಗೆ ಏಕೆ ಭರವಸೆ ಹೊಂದಿದ್ದೇನೆ''-"Her Story, My Story — Why I am hopeful about gender justice'' ಎಂಬುದು ಲೇಖನದ ಶೀರ್ಷಿಕೆಯಾಗಿದ್ದು, ಭಾರತೀಯ ಮಹಿಳೆಯರ ಅದಮ್ಯ ಉತ್ಸಾಹ ಮತ್ತು ಅವರ ಸ್ವಂತ ಜೀವನ ಪ್ರಯಾಣ ಬಗ್ಗೆ ಲೇಖನ ಬೆಳಕು ಚೆಲ್ಲುತ್ತದೆ.
ಲೇಖನದ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ,
"ತ್ರಿಪುರಾದಿಂದ ಹಿಂತಿರುಗುವಾಗ ನಾನು ಈ ಲೇಖನವನ್ನು ಓದಿದೆ, ಲೇಖನ ತುಂಬಾ ಪ್ರೇರಣದಾಯಕವಾಗಿದೆ ಎಂದು ನನಗೆ ಅನಿಸಿತು. ಬೇರೆಯವರೂ ಇದನ್ನು ಓದಿ ಎಂದು ನಾನು ಹೇಳುತ್ತೇನೆ. ಈ ಮಹಿಳಾ ದಿನದಂದು, ಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು ಭಾರತದ ರಾಷ್ಟ್ರಪತಿ ಹುದ್ದೆಗೆ ಏರಿದ ಅತ್ಯಂತ ಸ್ಪೂರ್ತಿದಾಯಕ ಮಹಿಳೆಯ ಜೀವನ ಪಯಣವನ್ನು ಇದು ವಿವರಿಸುತ್ತದೆ.'' ಎಂದು ಬರೆದುಕೊಂಡಿದ್ದಾರೆ.
***
(Release ID: 1905365)
Visitor Counter : 138
Read this release in:
Bengali
,
Hindi
,
English
,
Urdu
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam