ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

5 ವರ್ಷದೊಳಗಿನ ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಯೋಜನೆಯ ಪರಿಣಾಮವನ್ನು ಶ್ಲಾಘಿಸಿದ ಪ್ರಧಾನಮಂತ್ರಿ


ನಮ್ಮ ಮಕ್ಕಳ ಆರೋಗ್ಯವನ್ನು ರಕ್ಷಿಸಲು ನಾವು ಸದಾ ಬದ್ಧರಾಗಿದ್ದೇವೆ: ಪ್ರಧಾನಿ

Posted On: 03 MAR 2023 6:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 5 ವರ್ಷದವರೆಗಿನ ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುವ ಕಾಕ್ಲಿಯರ್‌ ಇಂಪ್ಲಾಂಟ್‌ ಯೋಜನೆಯ ಪರಿಣಾಮವನ್ನು ಶ್ಲಾಘಿಸಿದ್ದಾರೆ. ಕಾರ್ಯಾಚರಣೆಯ ವೆಚ್ಚ 6 ಲಕ್ಷ  ರೂಪಾಯಿಗಳು.

ಕೇಂದ್ರ ವಿದ್ಯುತ್‌ ಮತ್ತು ಭಾರಿ ಕೈಗಾರಿಕೆಗಳ ರಾಜ್ಯ ಸಚಿವ ಶ್ರೀ ಕೃಷ್ಣ ಪಾಲ್‌ ಗುರ್ಜಾರ್‌ ಅವರ ಟ್ವೀಟ್‌ಅನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು, ಈ ಕುರಿತು ಟ್ವೀಟ್‌ ಮಾಡಿದ್ದಾರೆ.

‘‘ಬಹಳ ಒಳ್ಳೆಯ ಮಾಹಿತಿ. ನಾವು ಸದಾ ಮಕ್ಕಳ ಆರೋಗ್ಯ ರಕ್ಷ ಣೆಗೆ ಸಮರ್ಪಿತರಾಗಿದ್ದೇವೆ,’’ ಎಂದು ಹೇಳಿದ್ದಾರೆ.


***


(Release ID: 1904216) Visitor Counter : 158