ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​ಪಂಜಾಬ್‌ನ ರೋಪರ್‌ನಲ್ಲಿ ನಾಳೆ ಯುವ ಉತ್ಸವ-ಇಂಡಿಯಾ@2047 ಪ್ಯಾನ್-ಇಂಡಿಯಾಕ್ಕೆ ಚಾಲನೆ ನೀಡಲಿರುವ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡೆ,  ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್


ಮೊದಲ ಹಂತದಲ್ಲಿ ದೇಶದ 150 ಜಿಲ್ಲೆಗಳಲ್ಲಿ ಯುವ ಉತ್ಸವ ಆಯೋಜನೆ

Posted On: 03 MAR 2023 11:55AM by PIB Bengaluru

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಪಂಜಾಬ್‌ನ ರೋಪರ್‌ನಲ್ಲಿ  2023 ಮಾರ್ಚ್ 4ರಂದು ಅಂದರೆ ನಾಳೆ ಯುವ ಉತ್ಸವ-ಭಾರತ@2047 ಅನಾವರಣಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಅನುರಾಗ್ ಠಾಕೂರ್ ಅವರು ಯುವ ಉತ್ಸವದ ಡ್ಯಾಶ್‌ಬೋರ್ಡ್ ಬಿಡುಗಡೆ ಮಾಡಲಿದ್ದಾರೆ.

2023 ಮಾರ್ಚ್ 4ರಂದು ಯುವ ಉತ್ಸವವನ್ನು ಪ್ರತಾಪಗಢ (ಯುಪಿ.), ಹರಿದ್ವಾರ (ಉತ್ತರಾಖಂಡ), ಧಾರ್ ಮತ್ತು ಹೊಸಂಗಾಬಾದ್ (ಎಂಪಿ.), ಹನುಮಾನ್‌ಗಢ (ರಾಜಸ್ಥಾನ), ಸರೈಕೆಲಾ (ಜಾರ್ಖಂಡ್), ಕಪುರ್ತಲಾ (ಪಂಜಾಬ್), ಜಲಗಾಂವ್ (ಮಹಾರಾಷ್ಟ್ರ), ವಿಜಯವಾಡ(ಆಂಧ್ರ ಪ್ರದೇಶ), ಕರೀಂನಗರ (ತೆಲಂಗಾಣ), ಪಾಲಖಾಡ್ (ಕೇರಳ), ಕೂಡಲೂರು (ತಮಿಳುನಾಡು) ಈ ಸ್ಥಳಗಳಲ್ಲೂ ಏಕಕಾಲದಲ್ಲಿ ಆಯೋಜಿಸಲಾಗಿದೆ.

ಮೊದಲ ಹಂತದಲ್ಲಿ 2023 ಮಾರ್ಚ್ 31ರೊಳಗೆ ಯುವ ಶಕ್ತಿಯ ಸಂಭ್ರಮಾಚರಣೆಗಾಗಿ  ದೇಶದ 150 ಜಿಲ್ಲೆಗಳಲ್ಲಿ ಯುವ ಉತ್ಸವ ನಡೆಸಲಾಗುವುದು.

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ತನ್ನ ಪ್ರಮುಖ ಯುವ ಸಂಸ್ಥೆ ನೆಹರು ಯುವ ಕೇಂದ್ರ ಸಂಘಟನೆ (ಎನ್ ವೈಕೆಎಸ್) ಮೂಲಕ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಯುವ ಉತ್ಸವ-ಭಾರತ@2047 ಕಾರ್ಯಕ್ರಮ ಆಯೋಜಿಸುತ್ತಿದೆ. ಯುವ ಶಕ್ತಿಯ ಈ ಪ್ಯಾನ್ ಇಂಡಿಯಾ ಆಚರಣೆಯು 3-ಹಂತಗಳಲ್ಲಿ ಜರುಗಲಿದೆ. 1 ದಿನದ ಜಿಲ್ಲಾ ಮಟ್ಟದ ಯುವ ಉತ್ಸವ 2023 ಮಾರ್ಚ್‌ನಿಂದ ಜೂನ್‌ವರೆಗೆ ಜರುಗಲಿದ್ದು, ಮೊದಲ ಹಂತದ ಕಾರ್ಯಕ್ರಮವನ್ನು 150 ಜಿಲ್ಲೆಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದು ಪ್ರಸಕ್ತ ಆರ್ಥಿಕ ವರ್ಷದ ಮಾರ್ಚ್‌ 4ರಿಂದ 31ರ ವರೆಗೆ ನಡೆಯಲಿದೆ.

ಮೊದಲ ಹಂತದ ಕಾರ್ಯಕ್ರಮಗಳನ್ನು ಜಿಲ್ಲೆಗಳ ಶಾಲೆಗಳು ಮತ್ತು ಕಾಲೇಜುಗಳು ಆಯೋಜಿಸುತ್ತಿವೆ. ಯುವ ಸ್ವಯಂಸೇವಕರು ಮತ್ತು ನೆಹರು ಯುವ ಕೇಂದ್ರಗಳೊಂದಿಗೆ ಸಂಯೋಜಿತವಾಗಿರುವ ಯೂತ್ ಕ್ಲಬ್‌ ಸದಸ್ಯರರು ಹಾಗೂ ನೆರೆಹೊರೆಯ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಜಿಲ್ಲಾ ಮಟ್ಟದ ವಿಜೇತರು ರಾಜ್ಯ ಮಟ್ಟದ ಯುವ ಉತ್ಸವದಲ್ಲಿ ಭಾಗವಹಿಸುತ್ತಾರೆ, ಇದು 2023 ಆಗಸ್ಟ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ರಾಜ್ಯ ರಾಜಧಾನಿಗಳಲ್ಲಿ ನಡೆಯಲಿರುವ 2 ದಿನಗಳ ಕಾರ್ಯಕ್ರಮವಾಗಿದೆ. ಎಲ್ಲಾ ರಾಜ್ಯ ಮಟ್ಟದ ಕಾರ್ಯಕ್ರಮಗಳ ವಿಜೇತರು 2023 ಅಕ್ಟೋಬರ್ 3 ಅಥವಾ 4ನೇ ವಾರದಲ್ಲಿ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಯುವ ಉತ್ಸವದಲ್ಲಿ ಭಾಗವಹಿಸುತ್ತಾರೆ.

3 ಹಂತಗಳಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ಯುವ ಕಲಾವಿದರು, ಬರಹಗಾರರು, ಛಾಯಾಗ್ರಾಹಕರು, ವಾಗ್ಮಿಗಳು ಸ್ಪರ್ಧಿಸಲಿದ್ದಾರೆ. ಅಲ್ಲದೆ, ಸಾಂಪ್ರದಾಯಿಕ ಕಲಾವಿದರು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತಾರೆ. ಯುವ ಉತ್ಸವದ ಘೋಷವಾಕ್ಯವು ಪಂಚ ಸಂಕಲ್ಪ(ಪ್ರಾಣ)ಗಳನ್ನು ಒಳಗೊಂಡಿದೆ. ಅವುಗಳೆಂದರೆ, 

ಅಭಿವೃದ್ಧಿ ಹೊಂದಿದ ಭಾರತದ ಗುರಿ.

ಗುಲಾಮಗಿರಿ ಅಥವಾ ವಸಾಹತುಶಾಹಿ ಮನಸ್ಥಿತಿಯ ಯಾವುದೇ ಕುರುಹುಗಳನ್ನು ತೊಡೆದುಹಾಕುವುದು.

ನಮ್ಮ ಪರಂಪರೆ ಮತ್ತು ಕೊಡುಗೆಗಳಿಗೆ ಹೆಮ್ಮೆ ಪಡೋಣ.

ಏಕತೆ ಮತ್ತು ಒಗ್ಗಟ್ಟು.

ನಾಗರಿಕರಲ್ಲಿ ಕರ್ತವ್ಯ ಪ್ರಜ್ಞೆ.

ಉತ್ಸವದ ಪಂಚ ಸಂಕಲ್ಪಗಳಲ್ಲಿ (ಪಂಚ ಪ್ರಾಣ) ಬೇರೂರಿರುವ ಅಮೃತ ಕಾಲದ ದೃಷ್ಟಿಕೋನವನ್ನು ಯುವ ಸ್ಪರ್ಧಿಗಳು ಸಾರ್ವಜನಿಕ ಭಾಷಣದಲ್ಲಿ ಪ್ರಸ್ತಾಪಿಸಲಿದ್ದಾರೆ. ಯುವ ಶಕ್ತಿ ಸೆ ಜನ್ ಭಾಗಿದರಿ"ಯು @ 2047ರ ವರೆಗೆ ಭಾರತ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಭವ್ಯ ಆಚರಣೆಗೆ ಚಾಲನಾಶಕ್ತಿಯಾಗಲಿದೆ.

15ರಿಂದ 29 ವರ್ಷ ವಯಸ್ಸಿನ ಯುವಕರು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಪ್ರತಿ ಹಂತದ ವಿಜೇತರು ಮುಂದಿನ ಹಂತಕ್ಕೆ ಸಾಗಲಿದ್ದಾರೆ.
 
ಯುವ ಉತ್ಸವದ ಪ್ರಮುಖಾಂಶಗಳು:

ಯುವ ಕಲಾವಿದರ ಪ್ರತಿಭಾನ್ವೇಷಣೆ – ವರ್ಣಚಿತ್ರ ಕಲೆ

ಯುವ ಬರಹಗಾರರ ಪ್ರತಿಭಾನ್ವೇಷಣೆ

ಛಾಯಾಗ್ರಹಣ ಪ್ರತಿಭಾನ್ವೇಷಣೆ

ವಾಕ್ಚಾತುರ್ಯ ಸ್ಪರ್ಧೆ

ಸಾಂಸ್ಕೃತಿಕ ಉತ್ಸವ- ಗುಂಪು ಕಾರ್ಯಕ್ರಮಗಳು.

ಯುವ ಉತ್ಸವದ ಅಂಗವಾಗಿ ವಿವಿಧ ಸಚಿವಾಲಯಗಳು, ರಾಜ್ಯ ಸರ್ಕಾರಗಳ ಇಲಾಖೆಗಳು, ಏಜೆನ್ಸಿಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು ತಮ್ಮ ಸಾಧನೆಗಳು ಮತ್ತು ಆವಿಷ್ಕಾರಗಳನ್ನು ದೇಶದ ಯುವ ಸಮುದಾಯಕ್ಕೆ ಪ್ರದರ್ಶಿಸಲಿವೆ.  ಆದ್ದರಿಂದ, ಯುವ ಉತ್ಸವದ ಪ್ರಮುಖ ಅಂಶಗಳ ಜತೆಗೆ, ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಸಮನ್ವಯದಲ್ಲಿ ಭಾರತ ಸರ್ಕಾರದ ವಿವಿಧ ಯೋಜನೆಗಳ ಸಾಧನೆಗಳನ್ನು ಪ್ರದರ್ಶಿಸಲು ಈ ಕೆಳಗಿನ ಸಂಬಂಧಿಸಿದ ವಸ್ತು ಪ್ರದರ್ಶನ ಮತ್ತು ಮಳಿಗೆಗಳನ್ನು ಸಹ ಯೋಜಿಸಲಾಗಿದೆ. ಯುವ ಉತ್ಸವ ಕಾರ್ಯಕ್ರಮದ ಜತೆಗೆ ಯೋಜಿಸಲಾದ ಕೆಲವು ಮಳಿಗೆಗಳು ಇಂತಿವೆ:

ಫಿಟ್ ಇಂಡಿಯಾ ಮಳಿಗೆಗಳು ಮತ್ತು ಕ್ರೀಡೆಗಳು

ವಸ್ತುಪ್ರದರ್ಶನ ಮತ್ತು ಡ್ರೋನ್ ಪ್ರದರ್ಶನ

ಗ್ರಾಮೀಣಾಭಿವೃದ್ಧಿ ಇಲಾಖೆಯ ಮಳಿಗೆಗಳು

ಎಂಎಸ್ಎಂಇ ಮತ್ತು ಹಣಕಾಸು ಸೇವಾ ಇಲಾಖೆಗಳ ಮಳಿಗೆಗಳು

5ಜಿ ತಂತ್ರಜ್ಞಾನದ ವಸ್ತುಪ್ರದರ್ಶನ

ಕೃಷಿ ಇಲಾಖೆಯ ಮಳಿಗೆಗಳು

ಆರೋಗ್ಯ ಇಲಾಖೆಯ ಮಳಿಗೆಗಳು

ಪಾರಂಪರಿಕ ಮಳಿಗೆಗಳು

ಕೌಶಲ್ಯ ಅಭಿವೃದ್ಧಿ ಮಳಿಗೆಗಳು

ಸಾಂಸ್ಕೃತಿಕ ಕಾರ್ಯಕ್ರಮಗಳು

ಬ್ಲಾಕ್ ಚೈನ್ ಪ್ರಮಾಣಪತ್ರಗಳು

ವೀರ ಗಾಥಾ- ಜಿಲ್ಲೆಗಳಲ್ಲಿ ಬೆಳಕಿಗೆ ಬಾರದ ವೀರರು

ಭಾರತವು ಯುವ ನಾಗರಿಕರು ಮತ್ತು ಪುರಾತ ಇತಿಹಾಸ ಹೊಂದಿರುವ ರಾಷ್ಟ್ರವಾಗಿದೆ. ಸುದೀರ್ಘ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ, ಶ್ರೀಮಂತ ವೈಭವ ಮತ್ತು ಪರಂಪರೆ ಹಾಗೂ ದೇಶದ ಬಲಷ್ಠ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಹೊಂದಿರುವ  ಭಾರತವು ಸಾಂಸ್ಕೃತಿಕ ರಾಜಧಾನಿಯಾಗಿದೆ. ಯುವ ನಾಗರಿಕರು ಭಾರತದ ಸ್ವಾತಂತ್ರ್ಯದ ಶತಮಾನೋತ್ಸವದ ಆಚರಣೆ ಸಂದರ್ಭದಲ್ಲಿ ಭಾರತದ @2047ರ ದೃಷ್ಟಿಕೋನ ಅರಿತುಕೊಳ್ಳಲು ಇದು ಸುಸಂದರ್ಭವಾಗಿದೆ. 

ಭಾರತವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ ಮತ್ತು ಸ್ಮರಿಸುತ್ತಿದೆ. ಸ್ವಾತಂತ್ರ್ಯದ 75ನೇ ವರ್ಷದ ಸಂದರ್ಭದಲ್ಲಿ ಭಾರತ ಮಾತೆಯ ಮಕ್ಕಳ ವೈಭವದ ಇತಿಹಾಸ, ಸಂಸ್ಕೃತಿ ಮತ್ತು ಸಾಧನೆಗಳು ಮತ್ತು ಅಮೃತ ಕಾಲ ಯುಗದ ಪಂಚ ಸಂಕಲ್ಪ ಮತ್ತು ಭಾರತದ @2047ರ ದೃಷ್ಟಿಕೋನವು ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ತರಲು ಸಿದ್ಧವಾಗಿದೆ.

****



(Release ID: 1903898) Visitor Counter : 173