ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತೀಯ ಶೈಕ್ಷಣಿಕ ವಲಯ, ವೈಜ್ಞಾನಿಕ ಸಮುದಾಯ ಮತ್ತು ಕೈಗಾರಿಕಾ ಕ್ಷೇತ್ರವನ್ನು ಸ್ವಾವಲಂಬನೆ ಮತ್ತು ಪಾಲುದಾರಿಕೆಗಾಗಿ  ಆಹ್ವಾನಿಸಿದ ಭಾರತೀಯ ವಾಯುಪಡೆ ಭಾರತದ ತೀಕ್ಷ್ಣ ಮನಸ್ಸುಗಳು ಮತ್ತು ಕ್ರಿಯಾಶೀಲ ಉದ್ಯಮಿಗಳಿಗೆ ಇದು ಉತ್ತಮ ಅವಕಾಶ : ಪ್ರಧಾನಮಂತ್ರಿ

प्रविष्टि तिथि: 13 FEB 2023 9:15AM by PIB Bengaluru

ಭಾರತೀಯ ಶೈಕ್ಷಣಿಕ ಕ್ಷೇತ್ರ, ವೈದ್ಯಕೀಯ ಸಮುದಾಯ ಮತ್ತು ಕೈಗಾರಿಕಾ ವಲಯವನ್ನು ಸ್ವಾವಲಂಬನೆ ಮತ್ತು ಪಾಲುದಾರಿಕೆಗಾಗಿ  ಭಾರತೀಯ ವಾಯುಪಡೆ ಆಹ್ವಾನಿಸಿದೆ. ಏರೋ ಇಂಡಿಯಾ 2023 ರ ಮುನ್ನಾ ದಿನದಂದು ಈ ನಿಟ್ಟಿನಲ್ಲಿ 31 ಮಂದಿ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಭಾರತದ ತೀಕ್ಷ್ಣ ಮನಸ್ಸುಗಳು ಮತ್ತು ಕ್ರಿಯಾಶೀಲ ಉದ್ಯಮಿಗಳಿಗೆ ಸ್ವಾವಲಂಬನೆಯ ಧ್ಯೇಯದಲ್ಲಿ ಪ್ರಮುಖ ಪಾಲುದಾರರಾಗಲು ಇದೊಂದು ಉತ್ತಮ ಅವಕಾಶ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.  ಭಾರತೀಯ ವಾಯುಪಡೆಯ ಟ್ವೀಟ್ ಗೆ ಹೀಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ಅವರು;

“ಭಾರತೀಯ ತೀಕ್ಷ್ಣ ಮನಸ್ಸುಗಳನ್ನು ಮತ್ತು ಕ್ರಿಯಾಶೀಲ ಉದ್ಯಮಿಗಳಿಗೆ ಸ್ವಾವಲಂಬನೆಯ ಧ್ಯೇಯದಲ್ಲಿ ಪ್ರಮುಖ ಪಾಲುದಾರರಾಗಲು ಇದು ಉತ್ತಮ ಅವಕಾಶವಾಗಿದೆ ಮತ್ತು ಅದೂ ರಕ್ಷಣಾ ವಲಯದಲ್ಲಿ ನಮ್ಮ ರಾಷ್ಟ್ರವನ್ನು ಯಾವಾಗಲೂ ಹೆಮ್ಮಪಡುವಂತೆ ಮಾಡುತ್ತದೆ” ಎಂದಿದ್ದಾರೆ.

*****


(रिलीज़ आईडी: 1898858) आगंतुक पटल : 161
इस विज्ञप्ति को इन भाषाओं में पढ़ें: Bengali , English , Urdu , हिन्दी , Marathi , Assamese , Manipuri , Punjabi , Gujarati , Odia , Tamil , Telugu , Malayalam