ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತರನ್ನು ಪ್ರಧಾನಿ ಶ್ಲಾಘಿಸಿದರು

Posted On: 24 JAN 2023 8:33PM by PIB Bengaluru

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿ.ಎಂ.ಆರ್.ಬಿ.ಪಿ) ವಿಜೇತರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು. ನಾವೀನ್ಯ, ಸಮಾಜ ಸೇವೆ, ಪಾಂಡಿತ್ಯ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಹಾಗೂ ಶೌರ್ಯ ಎಂಬ ಆರು ವಿಭಾಗಗಳಲ್ಲಿ ಅಸಾಧಾರಣ ಸಾಧನೆಗಾಗಿ ಭಾರತ ಸರ್ಕಾರವು ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡುತ್ತಿದೆ. ಪಿ.ಎಂ.ಆರ್.ಬಿ.ಪಿ -2023ಕ್ಕೆ ಬಾಲ ಶಕ್ತಿ ಪುರಸ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ದೇಶಾದ್ಯಂತ 11 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ  ಸೇರಿದ 6 ಹುಡುಗರು ಮತ್ತು 5 ಹುಡುಗಿಯರಿದ್ದಾರೆ.

ತಮ್ಮ ಸರಣಿ ಟ್ವೀಟ್‌ ಸಂದೇಶಗಳಲ್ಲಿ ಪ್ರಧಾನಮಂತ್ರಿ ಅವರು ಈ ರೀತಿ  ಹೇಳಿದ್ದಾರೆ.:

"ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪಡೆದವರೊಂದಿಗೆ ಅತ್ಯುತ್ತಮವಾದ ಸಂವಾದಗಳನ್ನು ನಡೆಸಿದ್ದೇನೆ."

"ಅದ್ಭುತ ದೃಢತೆಯನ್ನು ತೋರಿದ ಆದಿತ್ಯ ಸುರೇಶ್ ಬಗ್ಗೆ ಹೆಮ್ಮೆ ಇದೆ. ಅವರು ಮೂಳೆ ಅಸ್ವಸ್ಥತೆಯಿಂದ ಬಳಲುತ್ತಿದ್ದರು,  ಆದಾಗ್ಯೂ ಅವರ ನೈತಿಕತೆಗೇನೂ ಕೊರತೆಯಾಗಲಿಲ್ಲ. ಅವರು ಹಾಡುವುದನ್ನು ಇಷ್ಟಪಟ್ಟು ಅನುಸರಿಸಿದರು ಮತ್ತು ಈಗ ಪ್ರತಿಭಾವಂತ ಗಾಯಕರಾಗಿದ್ದಾರೆ. ಅವರು 500 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಗಾಯನ ಪ್ರದರ್ಶನ ನೀಡಿದ್ದಾರೆ.

“ಎಂ. ಗೌರವಿ ರೆಡ್ಡಿ ಪ್ರಬುದ್ಧ ನೃತ್ಯಗಾರ್ತಿ. ಅವರು ವಿವಿಧ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ತುಂಬಾ ಒಲವು ಹೊಂದಿದ್ದಾರೆ. ಆಕೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಿರುವುದು ಸಂತಸ ತಂದಿದೆ.

“ನನ್ನ ಯುವ ಸ್ನೇಹಿತ ಸಂಭಾಬ್ ಮಿಶ್ರಾ ಅತ್ಯಂತ ಸೃಜನಶೀಲ ಯುವಕ. ಅವರು ಹಲವಾರು ಲೇಖನಗಳನ್ನು ಬರೆದಿದ್ದಾರೆ ಮತ್ತು ಪ್ರತಿಷ್ಠಿತ ಫೆಲೋಶಿಪ್‌ ಗಳನ್ನು ಸಹ ಪಡೆದಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪಡೆದಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.

“ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತರಾದ ಶ್ರೇಯಾ ಭಟ್ಟಾಚಾರ್ಯ ಅವರು ತಬಲಾ ಕಲಾವಿದೆಯಾಗಿದ್ದು, ಅವರು ತಬಲಾವನ್ನು ಹೆಚ್ಚು ಕಾಲ ನುಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಕಲ್ಚರಲ್ ಒಲಿಂಪಿಯಾಡ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ ನಂತಹ ವೇದಿಕೆಗಳಲ್ಲಿ ಆಕೆಯನ್ನು ಗೌರವಿಸಲಾಗಿದೆ. ಅವಳೊಂದಿಗೆ ಉತ್ತಮ ಸಂವಹನ ನಡೆಸಿದೆ.”…

“ನದಿಗೆ ಹಾರಿ ನೀರಿನಲ್ಲಿ ಮುಳುಗಿದ ಮಹಿಳೆಯನ್ನು ರಕ್ಷಿಸಿದ ರೋಹನ್ ರಾಮಚಂದ್ರ ಬಹಿರ್ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಅವರು ಮಹಾನ್ ಶೌರ್ಯ ಮತ್ತು ನಿರ್ಭಯತೆಯನ್ನು ಪ್ರದರ್ಶಿಸಿದರು. ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗಾಗಿ ಅವರಿಗೆ ನನ್ನ ಶುಭಾಶಯಗಳು. ”…

“ಅದ್ಭುತ ಪ್ರತಿಭಾವಂತ ಆದಿತ್ಯ ಪ್ರತಾಪ್ ಸಿಂಗ್ ಚೌಹಾಣ್ ಅವರು ನಾವೀನ್ಯದ ಕುಶಲತೆಗಳಿಗಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪಡೆದಿದ್ದಾರೆ. ಅವರು ಶುದ್ಧ ನೀರನ್ನು ಖಾತ್ರಿಪಡಿಸಿಕೊಳ್ಳಲು ಕಡಿಮೆ ವೆಚ್ಚದ ಪರಿಣಾಮಕಾರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡುತ್ತಿದ್ದಾರೆ.

“ಯುವಜನರಲ್ಲಿ ಹೊಸತನವನ್ನು ಕಾಣಬಹುದು! ರಿಷಿ ಶಿವ ಪ್ರಸನ್ನ ಅವರು ಆಪ್‌ ಗಳನ್ನು ಅಭಿವೃದ್ಧಿಪಡಿಸುವಲ್ಲಿ ಉತ್ಸುಕರಾಗಿದ್ದಾರೆ. ಯುವಜನತೆಯಲ್ಲಿ ಅದನ್ನು ಜನಪ್ರಿಯಗೊಳಿಸುವುದರ ಜೊತೆಗೆ ವಿಜ್ಞಾನದಲ್ಲೂ ಅಷ್ಟೇ ಆಸಕ್ತಿ ಹೊಂದಿದ್ದಾರೆ. ಇಂದು ಈ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ವಿಜೇತ ಪ್ರತಿಭೆಯನ್ನು ಭೇಟಿಯಾಗಿ ಬಹಳ ಸಂತೋಷವಾಗಿದೆ.

“ಅನೌಷ್ಕಾ ಜಾಲಿಯಂತಹ ಬಾಲಕರು ಗಮನಾರ್ಹವಾದ ಸಹಾನುಭೂತಿ ಮತ್ತು ಹೊಸತನವನ್ನು ತೋರಿಸಿದ್ದಾರೆ. ಭಯದ ವಾತಾವರಣ ವಿರುದ್ಧ ಜಾಗೃತಿ ಮೂಡಿಸಲು ಅವರು ಮೊಬೈಲ್‌ ಅಪ್ಲಿಕೇಶನ್ ಮತ್ತು ಇತರ ಆನ್ಲೈನ್ ಕಾರ್ಯಚಟುವಟಿಕೆಗಳಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಆಕೆ ಈಗ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತಳಾಗಿರುವುದು ಸಂತಸ ತಂದಿದೆ.

“ವಿಭಿನ್ನ ಕ್ರೀಡೆಗಳನ್ನು ಜನಪ್ರಿಯಗೊಳಿಸಲು ಮತ್ತು ಫಿಟ್ನೆಸ್‌ ಗೆ ಒತ್ತು ನೀಡಲು ನಾವು ಬದ್ಧರಾಗಿದ್ದೇವೆ. ಹನಯಾ ನಿಸಾರ್ ಅವರು ಈ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತರಾಗಿದ್ದು, ಅವರು ವಿವಿಧ ಸಮರ ಕಲೆಗಳ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವಳು ವಿವಿಧ ಪ್ರಶಸ್ತಿಗಳನ್ನು ಗೆದ್ದಿದ್ದಾಳೆ. ಅವಳ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತೇನೆ. ”…

“2022 ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಶೌರ್ಯಜಿತ್ ರಂಜಿತ್‌ ಕುಮಾರ್ ಖೈರೆ ಅವರು ತಮ್ಮ ಯಶಸ್ಸಿಗಾಗಿ ಅಪಾರ ಮೆಚ್ಚುಗೆಯನ್ನು ಗಳಿಸಿದರು. ಮಲ್ಲಕಂಬವೇ ಅವರ ಪ್ರತಿಭೆಯ ಶಕ್ತಿಕೇಂದ್ರ. ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಗಳಿಸಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ಅವರ ಮುಂಬರುವ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ.

“ಪ್ರತಿಷ್ಠಿತ ಚೆಸ್ ಆಟಗಾರ್ತಿ ಕುಮಾರಿ ಕೊಳಗಟ್ಲಾ ಅಲನಾ ಮೀನಾಕ್ಷಿ ಈಗ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತರು.  ಅವರನ್ನು ಭೇಟಿ ಮಾಡಿದೆ. ಚದುರಂಗ ಆಟದಲ್ಲಿ ಆಕೆಯ ಯಶಸ್ಸು ಜಾಗತಿಕವಾಗಿ ವಿವಿಧ ಸ್ಪರ್ಧೆಗಳಲ್ಲಿ ಅವರನ್ನು ಮಿಂಚುವಂತೆ ಮಾಡಿದೆ. ಅವರ ಸಾಧನೆಗಳು ಮುಂಬರುವ ಚದುರಂಗ ಆಟಗಾರರಿಗೆ ಖಂಡಿತವಾಗಿಯೂ ಸ್ಫೂರ್ತಿ ನೀಡುತ್ತದೆ.

https://pib.gov.in/PressReleasePage.aspx?PRID=1893359

***

 



(Release ID: 1893653) Visitor Counter : 176