ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಫೆಬ್ರವರಿ 6 ರಿಂದ 8 ರವರೆಗೆ ಗುವಾಹಟಿಯಲ್ಲಿ ಯುವ 20 ಗುಂಪಿನ ಮೊದಲ ಸಭೆ ನಡೆಯಲಿದೆ


ಅಸ್ಸಾಂನ 34 ಜಿಲ್ಲೆಗಳಾದ್ಯಂತ ಇರುವ 50 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸುಮಾರು 12,000 ವಿದ್ಯಾರ್ಥಿಗಳು ಮುಂದಿನ ಕೆಲವು ದಿನಗಳ ಕಾಲ ಶೃಂಗಸಭೆಯ ಐದು ವಿಷಯಗಳ ಕುರಿತು ಚರ್ಚಿಸಲಿದ್ದಾರೆ

ಯುವ20 ಸಭೆಯಲ್ಲಿ ಪ್ರತಿನಿಧಿಗಳೊಂದಿಗೆ ಚರ್ಚೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲಾಗುತ್ತದೆ

​​​​​​​ಅಸ್ಸಾಂನಿಂದ ಆಯ್ದ 400 ವಿದ್ಯಾರ್ಥಿಗಳು ಫೆಬ್ರವರಿ 7 ರಂದು ಐಐಟಿ-ಗುವಾಹಟಿಯಲ್ಲಿ ಜರಗುವ ಕೇಂದ್ರೀಯ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Posted On: 22 JAN 2023 2:06PM by PIB Bengaluru

ಜಿ20 ಶೃಂಗಸಭೆಯ ಜೊತೆಯಲ್ಲಿ ಭಾರತವು ಮೊದಲ ಬಾರಿಗೆ ಯುವ 20 (ವೈ20) ಶೃಂಗಸಭೆಯನ್ನು ಆಯೋಜಿಸುತ್ತಿದೆ.  ಯುವ 20 (ವೈ20) ಗುಂಪಿನ ಮೊದಲ ಸಭೆಯು ಗುವಾಹಟಿಯಲ್ಲಿ ಫೆಬ್ರವರಿ 6 ರಿಂದ  8, 2023 ರವರೆಗೆ ನಡೆಯಲಿದೆ. ಆಗಸ್ಟ್ 2023 ರಲ್ಲಿ ನಡೆಯುವ ಅಂತಿಮ ಯುವ20 ಶೃಂಗಸಭೆಯ ಪೂರ್ವಭಾವಿಯಾಗಿ ಐದು ವೈ20 ಥೀಮ್‌ ಗಳಲ್ಲಿ ಭಾರತದಾದ್ಯಂತ ನಡೆಯಲಿರುವ ವಿವಿಧ ಸಭೆಗಳಲ್ಲಿ ಇದು ಮೊದಲನೆಯದಾಗಿದೆ. ಅಸ್ಸಾಂನ ಈ 3-ದಿನದ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ 250 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕೆಲಸದ ಭವಿಷ್ಯ; ಹವಾಮಾನ ಬದಲಾವಣೆ ಮತ್ತು ವಿಪತ್ತು ಅಪಾಯ ಕಡಿತ; ಶಾಂತಿ ನಿರ್ಮಾಣ ಮತ್ತು ಸಮನ್ವಯ; ಪ್ರಜಾಪ್ರಭುತ್ವ ಮತ್ತು ಆರೋಗ್ಯ, ಯೋಗಕ್ಷೇಮ ಮತ್ತು ಕ್ರೀಡೆಗಳಲ್ಲಿ ಯುವಕರು – ಎಂಬ ಐದು ವಿಷಯಗಳ ಮೇಲೆ ಕಾರ್ಯಕ್ರಮವು ಕೇಂದ್ರೀಕರಿಸಿರುತ್ತದೆ.  

ಜಿ20 ಶೃಂಗಸಭೆಯಡಿಯಲ್ಲಿನ ಎಂಟು ಅಧಿಕೃತ ಕಾರ್ಯಚಟುವಟಿಕೆಗಳ ಗುಂಪುಗಳಲ್ಲಿ ಯುವ20 ತಂಡ ಕೂಡಾ ಒಂದಾಗಿದೆ. ಜಿ20 ಪರ್ಯಾಯ ಅಧ್ಯಕ್ಷೀಯತೆಯು ಯುವ ಶೃಂಗಸಭೆಯನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದೆ.   ಸಾಮಾನ್ಯವಾಗಿ ಯುವಜನರು ಏನು ಯೋಚಿಸುತ್ತಿದ್ದಾರೆಂದು ತಿಳಿಯಲು ಮತ್ತು ಅವರ ಸ್ವಂತ ನೀತಿ ಪ್ರಸ್ತಾಪಗಳಲ್ಲಿ ಅವರ ಸಲಹೆಗಳನ್ನು ಅಳವಡಿಸಲು ಸಾಂಪ್ರದಾಯಿಕ ವೇದಿಕೆಗೆ ಪೂರ್ವಭಾವಿಯಾಗಿ ಕೆಲವು ವಾರಗಳ ಮೊದಲು ಯುವ ಶೃಂಗಸಭೆ ನಡೆಯುತ್ತದೆ. ಇದು ಜಿ20 ದೇಶಗಳ ಸರ್ಕಾರಗಳು ಮತ್ತು ಅವರ ಯುವಕರ ನಡುವೆ ಸಂಪರ್ಕ ಬಿಂದುವನ್ನು ಸೃಷ್ಟಿಸುವ ಪ್ರಯತ್ನವಾಗಿದೆ. ಯುವ20 ಭಾರತ ಶೃಂಗಸಭೆ 2023 ರಲ್ಲಿ ಭಾರತದ ಯುವ-ಕೇಂದ್ರಿತ ಪ್ರಯತ್ನಗಳನ್ನು ಪರಿಚಯಿಸಲಾಗುತ್ತದೆ ಮತ್ತು ಪ್ರಪಂಚದಾದ್ಯಂತದ ಯುವಕರಿಗೆ ಅದರ ಮೌಲ್ಯಗಳು ಮತ್ತು ನೀತಿ ಕ್ರಮಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸುತ್ತದೆ.

ಯುವ ಶೃಂಗಸಭೆ(ವೈ20)ಯ ಪೂರ್ವದಲ್ಲಿ ಭಾಗವಹಿಸುವ ಮತ್ತು ಅಂತರ್ಗತ ಚರ್ಚೆಯ ಪ್ರಕ್ರಿಯೆಯನ್ನು ರೂಪಿಸಿ ರಚಿಸಲು, ಜನವರಿ 19 ರಿಂದ ಮುಂದಿನ ಆರಂಭಿಕ ಸಭೆಯ ತನಕ ಅಸ್ಸಾಂನ 34 ಜಿಲ್ಲೆಗಳಾದ್ಯಂತ  50 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ತಮ್ಮ ಕ್ಯಾಂಪಸ್‌ ಗಳಲ್ಲಿ ವಿಚಾರಗೋಷ್ಠಿ, ಕಾರ್ಯಾಗಾರ, ಚರ್ಚೆ ಮತ್ತು ಪ್ಯಾನಲ್ ಸಂವಾದಗಳನ್ನು ಆಯೋಜಿಸುತ್ತವೆ. ಕಾಲೇಜು/ವಿಶ್ವವಿದ್ಯಾಲಯಗಳ ಸುಮಾರು 12,000 ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿ ಉನ್ನತ ಶಿಕ್ಷಣ ಸಂಸ್ಥೆಯು ಜಿ20 ಗುಂಪುಗಳು ಮತ್ತು ಅವುಗಳ ಕಾರ್ಯಚಟುವಟಿಕೆಗಳ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಹತ್ತಿರದ ಕನಿಷ್ಠ 10 ಶಾಲೆಗಳಲ್ಲಿ ಜಾಗೃತಿ ಅಭಿಯಾನವನ್ನು ಆಯೋಜಿಸುತ್ತದೆ.

ವಿವಿಧ ವಿಶ್ವವಿದ್ಯಾನಿಲಯ/ಕಾಲೇಜುಗಳು ಭಾಗವಹಿಸುವ ಈ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರು ಸೇರಿದಂತೆ ಒಟ್ಟು 400 ಮಂದಿ ಭಾಗವಹಿಸುವವರು, ಫೆಬ್ರವರಿ 7, 2023 ರಂದು ಐಐಟಿ-ಗುವಾಹಟಿಯಲ್ಲಿ ನಡೆಯುವ ಕೇಂದ್ರೀಯ ಸಮಾರಂಭದಲ್ಲಿ ಭಾಗವಹಿಸುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ನಾವೀನ್ಯತೆಗಳು ಮತ್ತು ಉದ್ಯಮ-ಶೈಕ್ಷಣಿಕ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಮಾರ್ಗದರ್ಶನಗಳನ್ನು ಅವರಿಗೆ ನೀಡಲಾಗುವುದು. ಉಜ್ವಲ ಭವಿಷ್ಯಕ್ಕಾಗಿ ಅಂತರಾಷ್ಟ್ರೀಯ ಯುವ ಪ್ರತಿನಿಧಿಗಳೊಂದಿಗೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಸಂವಹನ ನಡೆಸಲು ಯುವ ಜನತೆಗೆ ಈ ವೇದಿಕೆಯಲ್ಲಿ ಅವಕಾಶ ಸಿಗುತ್ತದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:

https://pib.gov.in/PressReleaseIframePage.aspx?PRID=1889239

https://pib.gov.in/PressReleasePage.aspx?PRID=1888943

*****
 


(Release ID: 1892879) Visitor Counter : 204