ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ತಾಯಿಯವರ ನಿಧನಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


​​​​​​​ಗೌರವಾನ್ವಿತ ಮಾತಾಜೀ ಹೀರಾ ಬಾ ಅವರ ನಿಧನದ ಸುದ್ದಿ ಬಹಳ ದುಃಖಕರವಾಗಿದೆ

ಒಬ್ಬ ವ್ಯಕ್ತಿಯ ಜೀವನದಲ್ಲಿ ತಾಯಿಯೇ ಮೊದಲ ಸ್ನೇಹಿತ ಮತ್ತು ಶಿಕ್ಷಕ, ತಾಯಿಯನ್ನು ಕಳೆದುಕೊಳ್ಳುವ ನೋವು ನಿಸ್ಸಂದೇಹವಾಗಿ ದೊಡ್ಡ ನೋವು.

ಹೀರಾ ಬಾ ತನ್ನ ಕುಟುಂಬವನ್ನು ಪೋಷಿಸಲು ಎದುರಿಸಿದ ಹೋರಾಟಗಳು ಎಲ್ಲರಿಗೂ ಆದರ್ಶವಾಗಿದ್ದು, ಅವರ ತ್ಯಾಗದ ತಪಸ್ವಿ ಜೀವನವು ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತದೆ.

ಈ ದುಃಖದ ಸಮಯದಲ್ಲಿ ದೇಶವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅವರ ಕುಟುಂಬದೊಂದಿಗೆ ನಿಂತಿದೆ, ಕೋಟ್ಯಂತರ ಜನರ ಪ್ರಾರ್ಥನೆಗಳು ಪ್ರಧಾನಮಂತ್ರಿಯವರೊಂದಿಗೆ ಇವೆ

प्रविष्टि तिथि: 30 DEC 2022 9:35AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ತಾಯಿಯ ನಿಧನಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಶ್ರೀ ಅಮಿತ್ ಶಾ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗೌರವಾನ್ವಿತ ಮಾತಾಜೀ ಹೀರಾ ಬಾ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ತಾಯಿಯೇ ಮೊದಲ ಸ್ನೇಹಿತ ಮತ್ತು ಶಿಕ್ಷಕ, ತಾಯಿಯನ್ನು ಕಳೆದುಕೊಳ್ಳುವ ನೋವು ನಿಸ್ಸಂದೇಹವಾಗಿ ದೊಡ್ಡ ನೋವು.

ತಮ್ಮ ಕುಟುಂಬವನ್ನು ಪೋಷಿಸಲು ಹೀರಾ ಬಾ ಅವರು ಎದುರಿಸುತ್ತಿದ್ದ ಹೋರಾಟಗಳು ಎಲ್ಲರಿಗೂ ಆದರ್ಶಪ್ರಾಯವಾಗಿದೆ . ಆಕೆಯ ತ್ಯಾಗದ ತಪಸ್ಸಿನ ಬದುಕು ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತದೆ.  ಈ ದುಃಖದ ಸಮಯದಲ್ಲಿ ದೇಶವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅವರ ಕುಟುಂಬದೊಂದಿಗೆ ನಿಂತಿದೆ. ಕೋಟ್ಯಂತರ ಜನರ ಪ್ರಾರ್ಥನೆ ಪ್ರಧಾನಮಂತ್ರಿಯವರ ಬಳಿ ಇದೆ, ಓಂ ಶಾಂತಿ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ 

******


(रिलीज़ आईडी: 1887465) आगंतुक पटल : 234
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Punjabi , Gujarati , Tamil , Telugu