ಇಂಧನ ಸಚಿವಾಲಯ
ಇಂಧನ ಸಚಿವಾಲಯದಿಂದ " ಇಂಧನ ಸಂರಕ್ಷಣಾ ದಿನ 2022" ಆಚರಣೆ
ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗಳು, ರಾಷ್ಟ್ರೀಯ ಇಂಧನ ದಕ್ಷತೆಯ ನಾವೀನ್ಯಪ್ರಶಸ್ತಿಗಳು, ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯ ಬಹುಮಾನಗಳ ವಿಜೇತರನ್ನು ಭಾರತದ ರಾಷ್ಟ್ರಪತಿಗಳು ಗೌರವಿಸಲಿರುವರು
ಭಾರತದ ರಾಷ್ಟ್ರಪತಿಯವರು ಇವಿ ಯಾತ್ರಾ ಪೋರ್ಟಲ್ ಗೆ ಚಾಲನೆ ನೀಡಲಿದ್ದಾರೆ
Posted On:
13 DEC 2022 12:14PM by PIB Bengaluru
ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಪ್ರತಿ ವರ್ಷ 14ನೇ ಡಿಸೆಂಬರ್ 2022 ರಂದು ಆಚರಿಸಲಾಗುತ್ತದೆ. ಇಂಧನ ದಕ್ಷತೆ ಮತ್ತು ಸಂರಕ್ಷಣೆಯಲ್ಲಿ ರಾಷ್ಟ್ರದ ಸಾಧನೆಗಳನ್ನು ಪ್ರದರ್ಶಿಸುವುದು ಈ ಆಚರಣೆಯ ಉದ್ದೇಶವಾಗಿದೆ.
ಭಾರತದ ಗೌರವಾನ್ವಿತ ರಾಷ್ಟ್ರಪತಿಯವರಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೇಂದ್ರ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಆರ್.ಕೆ.ಸಿಂಗ್ ಅವರು ಈ ಸಂದರ್ಭದಲ್ಲಿ ಭಾಷಣ ಮಾಡಲಿದ್ದಾರೆ. ವಿದ್ಯುತ್ ಮತ್ತು ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಶ್ರೀ ಕ್ರಿಶನ್ ಪಾಲ್ ಮತ್ತು ವಿದ್ಯುತ್ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್ ಸಹ ಉಪಸ್ಥಿತರಿರುವರು. ಭಾರತದ ಗೌರವಾನ್ವಿತ ರಾಷ್ಟ್ರಪತಿಯವರು ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗಳು, ರಾಷ್ಟ್ರೀಯ ಇಂಧನ ದಕ್ಷತೆಯ ನಾವೀನ್ಯ ಪ್ರಶಸ್ತಿಗಳು, ರಾಷ್ಟ್ರೀಯ ಚಿತ್ರಕಲೆ ಸ್ಪರ್ಧೆಯ ಬಹುಮಾನಗಳ ವಿಜೇತರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತಾರೆ ಮತ್ತು ಈ ಸಂದರ್ಭದಲ್ಲಿ ಇವಿ ಯಾತ್ರಾ ಪೋರ್ಟಲ್ ಗೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು:
· ರಾಷ್ಟ್ರೀಯ ಶಕ್ತಿ ಸಂರಕ್ಷಣಾ ಪ್ರಶಸ್ತಿಗಳು (ಎನ್ ಇ ಸಿ ಎ) 2022
· ರಾಷ್ಟ್ರೀಯ ಇಂಧನ ದಕ್ಷತೆಯ ನಾವೀನ್ಯತೆ ಪ್ರಶಸ್ತಿಗಳು (ಎನ್‌ಇಇಇಎ) 2022
· ಶಾಲಾ ಮಕ್ಕಳಿಗಾಗಿ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ 2022
· 'ಇವಿ-ಯಾತ್ರಾ ಪೋರ್ಟಲ್' ಮತ್ತು ಮೊಬೈಲ್ ಆ್ಯಪ್ ಗೆ ಚಾಲನೆ
· ಇಂಧನ ದಕ್ಷತೆಯ ಕ್ಷೇತ್ರದಲ್ಲಿ ಉದಯೋನ್ಮುಖ ಹೊಸ ತಂತ್ರಜ್ಞಾನಗಳ ಕುರಿತು ಕಾರ್ಯಕ್ರಮ
ರಾಷ್ಟ್ರೀಯ ಇಂಧನ ಸಂರಕ್ಷಣೆ ಪ್ರಶಸ್ತಿ 2022
ಇಂಧನ ದಕ್ಷತೆ ಮತ್ತು ಅದರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು, ಬಿಇಇ ಸಂಸ್ಥೆಯು ವಿದ್ಯುತ್ ಸಚಿವಾಲಯದ ಮಾರ್ಗದರ್ಶನದಲ್ಲಿ, ಇಂಧನ ಬಳಕೆಯನ್ನು ಕಡಿಮೆ ಮಾಡುವಲ್ಲಿ ಕೈಗಾರಿಕಾ ಘಟಕಗಳು, ಸಂಸ್ಥೆಗಳು ಮತ್ತು ಸ್ಥಾಪನೆಗಳ ಪ್ರಯತ್ನಗಳನ್ನು ಗುರುತಿಸುತ್ತದೆ ಮತ್ತು ಉತ್ತೇಜಿಸುತ್ತದೆ ಮತ್ತು ಪ್ರತಿ ವರ್ಷ ಡಿಸೆಂಬರ್ 14 ರಂದು ಆಚರಿಸಲಾಗುವ ಸಂರಕ್ಷಣಾ ದಿನದಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ.
ಈ ವರ್ಷ, ರಾಷ್ಟ್ರೀಯ ಇಂಧನ ಸಂರಕ್ಷಣೆ ಪ್ರಶಸ್ತಿ 2022 (ಎನ್ ಇ ಸಿ ಎ 2022) ಕ್ಕಾಗಿ ಅರ್ಜಿಗಳನ್ನು 27ನೇ ಅಕ್ಟೋಬರ್ 2022 ರವರೆಗೆ ಆನ್‌ಲೈನ್‌ನಲ್ಲಿ ಆಹ್ವಾನಿಸಲಾಗಿತ್ತು ಮತ್ತು ಒಟ್ಟು 448 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಎನ್ ಇ ಸಿ ಎ 2022ರ ಒಟ್ಟು ಪ್ರಶಸ್ತಿಗಳ ಸಂಖ್ಯೆ
ಮೊದಲನೇ ಬಹುಮಾನ |
19 |
ಎರಡನೇ ಬಹುಮಾನ |
08 |
ಅರ್ಹತೆಯ ಪ್ರಮಾಣಪತ್ರ (COM) |
21 |
ರಾಷ್ಟ್ರೀಯ ಇಂಧನ ದಕ್ಷತೆಯ ನಾವೀನ್ಯ ಪ್ರಶಸ್ತಿಗಳು (ಎನ್ ಇ ಇ ಇ ಎ) 2022
ಇಂಧನ ದಕ್ಷತೆಯ ಕ್ಷೇತ್ರದಲ್ಲಿ ಭಾರತದ ಅತ್ಯುತ್ತಮ ಕೆಲಸ ಮತ್ತು ನವೀನ ಪ್ರತಿಭೆಗಳನ್ನು ಗುರುತಿಸಲು, ಎನ್ ಇ ಇ ಇ ಎ ಪ್ರಶಸ್ತಿಗಳನ್ನು 2021 ರಲ್ಲಿ ಪ್ರಾರಂಭಿಸಲಾಯಿತು. ಎನ್ ಇ ಇ ಇ ಎ 2022 ಕ್ಕಾಗಿ ವಿವಿಧ ವರ್ಗಗಳಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಅಂದರೆ. ವರ್ಗ ಎ: ಕೈಗಾರಿಕೆಗಳು, ಕಟ್ಟಡ ಮತ್ತು ಸಾರಿಗೆ ವಲಯದ ವೃತ್ತಿಪರರು ಮತ್ತು ವರ್ಗ ಬಿ: ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ವಾಂಸರು.
ಪ್ರಶಸ್ತಿಗಳನ್ನು ಪುನರಾವರ್ತನೆ, ಅಗ್ಗ, ವಿಶ್ವಾಸಾರ್ಹತೆ, ಇಂಧನ ಉಳಿತಾಯದ ಮೇಲಿನ ಪರಿಣಾಮ ಮತ್ತು ಪರಿಸರ ಮತ್ತು ಸುಸ್ಥಿರತೆಯ ಮೇಲೆ ಮಾಡುವ ಪ್ರಭಾವದ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.
ಎನ್ ಇ ಇ ಇ ಎ 2022 ರ ಅರ್ಜಿಗಳನ್ನು 27ನೇ ಅಕ್ಟೋಬರ್ 2022 ರವರೆಗೆ ಆನ್‌ಲೈನ್‌ನಲ್ಲಿ ಆಹ್ವಾನಿಸಲಾಗಿತ್ತು ಮತ್ತು ಒಟ್ಟು 177 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಎನ್ ಇ ಇ ಇ ಎ 2022 ರ ಒಟ್ಟು ಪ್ರಶಸ್ತಿಗಳ ಸಂಖ್ಯೆ
ಮೊದಲನೇ ಬಹುಮಾನ |
2 |
ಎರಡನೇ ಬಹುಮಾನ |
2 |
ಅರ್ಹತೆಯ ಪ್ರಮಾಣಪತ್ರ (COM) |
2 |
ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ 2022
ಸಂರಕ್ಷಣೆ ಮತ್ತು ಶಕ್ತಿಯ ಸಮರ್ಥ ಬಳಕೆಯ ಕಡೆಗೆ ಸಮಾಜದಲ್ಲಿ ನಿರಂತರವಾಗಿ ಬದಲಾವಣೆಯನ್ನು ತರಲು, ವಿದ್ಯುತ್ ಸಚಿವಾಲಯವು 2005 ರಿಂದ ಇಂಧನ ಸಂರಕ್ಷಣೆ ಕುರಿತು ರಾಷ್ಟ್ರಮಟ್ಟದ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಸ್ಪರ್ಧೆಯು ಶಾಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಮೂರು ಹಂತಗಳಲ್ಲಿ ನಡೆಯುತ್ತದೆ. 2021 ರಲ್ಲಿ, 80,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 5, 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಎ’ ಗುಂಪಿನಲ್ಲಿ ಮತ್ತು 8, 9 ಮತ್ತು 10ನೇ ತರಗತಿಯ ‘ಬಿ’ ಗುಂಪಿನ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ʼಇವಿ-ಯಾತ್ರಾ ಪೋರ್ಟಲ್ʼ ಮತ್ತು ಮೊಬೈಲ್ ಆ್ಯಪ್ ಗೆ ಚಾಲನೆ
ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿಯು (ಬಿಇಇ)ಹತ್ತಿರದ ಸಾರ್ವಜನಿಕ ಇವಿ ಚಾರ್ಜರ್ ಕೇಂದ್ರವನ್ನು ವಾಹನದಲ್ಲಿದ್ದುಕೊಂಡೆ ಹುಡುಕಲು ಅನುಕೂಲವಾಗುವಂತೆ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಇದಲ್ಲದೆ ದೇಶದಲ್ಲಿ ಇ-ಮೊಬಿಲಿಟಿಯನ್ನು ಉತ್ತೇಜಿಸಲು ವಿವಿಧ ಕೇಂದ್ರ ಮತ್ತು ರಾಜ್ಯ-ಮಟ್ಟದ ಉಪಕ್ರಮಗಳ ಮಾಹಿತಿಯನ್ನು ಪ್ರಸಾರ ಮಾಡಲು ಮತ್ತು ವೆಬ್-ಪೋರ್ಟಲ್ ನಲ್ಲಿ ಚಾರ್ಜಿಂಗ್ ಪಾಯಿಂಟ್ ಆಪರೇಟರ್ ಗಳು (ಸಿಪಿಒ) ತಮ್ಮ ಚಾರ್ಜಿಂಗ್ ವಿವರಗಳನ್ನು ಸುರಕ್ಷಿತವಾಗಿ ರಾಷ್ಟ್ರೀಯ ಆನ್‌ಲೈನ್ ದತ್ತಾಂಶಕ್ಕೆ ನೋಂದಾಯಿಸಲು ಅನುಕೂಲ ಮಾಡಿಕೊಡುತ್ತದೆ
"ಇವಿ ಯಾತ್ರಾ" ಶೀರ್ಷಿಕೆಯ ಮೊಬೈಲ್ ಆ್ಯಪ್ ಅನ್ನು ಹತ್ತಿರದ ಸಾರ್ವಜನಿಕ ಇವಿ ಚಾರ್ಜರ್ ಕೇಂದ್ರವನ್ನು ವಾಹನದಲ್ಲಿದ್ದುಕೊಂಡೆ ಹುಡುಕಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಈ ಮೊಬೈಲ್ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ನಿಂದ ಐಫೋನ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಸುಲಭವಾಗಿ ಡೌನ್‌ಲೋಡ್ ಮಾಡಬಹುದು ಮತ್ತು ಅನುಕೂಲಕರವಾಗಿ ಸ್ಥಾಪಿಸಬಹುದು.
*****
(Release ID: 1883136)
Visitor Counter : 290