ಪ್ರಧಾನ ಮಂತ್ರಿಯವರ ಕಛೇರಿ

ಭಾರತ ಭೂತಾನ್ ಉಪಗ್ರಹವು ಭೂತಾನ್ ಜನರೊಂದಿಗೆ ನಮ್ಮ ವಿಶೇಷ ಸಂಬಂಧಕ್ಕೆ ಸಾಕ್ಷಿಯಾಗಿದೆ: ಪ್ರಧಾನಮಂತ್ರಿ


ಜಂಟಿಯಾಗಿ ಅಭಿವೃದ್ಧಿಪಡಿಸಿದ ಭಾರತ ಭೂತಾನ್ ಉಪಗ್ರಹದ ಯಶಸ್ವಿ ಉಡಾವಣೆಗಾಗಿ ಡಿಐಟಿಟಿ ಭೂತಾನ್ ಮತ್ತು ಇಸ್ರೋವನ್ನು ಶ್ಲಾಘಿಸಿದ್ದಾರೆ

Posted On: 26 NOV 2022 6:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾರತ ಭೂತಾನ್ ಉಪಗ್ರಹವು ಭೂತಾನ್ ಜನರೊಂದಿಗಿನ ನಮ್ಮ ವಿಶೇಷ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಜಂಟಿಯಾಗಿ ಅಭಿವೃದ್ಧಿಪಡಿಸಿದ ಈ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಬಗ್ಗೆ ಭೂತಾನಿನ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಇಲಾಖೆ (ಡಿಐಟಿಟಿ) ಮತ್ತು ಭಾರತದ ಇಸ್ರೋವನ್ನು ಶ್ರೀ ಮೋದಿಯವರು ಶ್ಲಾಘಿಸಿದ್ದಾರೆ.

ಭಾರತ-ಭೂತಾನ್ ಎಸ್‍ ಎ ಟಿ ಯಶಸ್ವಿ ಉಡಾವಣೆ ಕುರಿತು ಭೂತಾನಿನ ರಾಜರ ಸಂದೇಶವನ್ನು ಭೂತಾನ್‌ನ ಪ್ರಧಾನಿ ಪ್ರಸ್ತುತ ಪಡಿಸಿ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿಯವರು ಹೀಗೆ ಹೇಳಿದರು;

"ಭಾರತ ಭೂತಾನ್ ಉಪಗ್ರಹವು ಭೂತಾನ್ ಜನರೊಂದಿಗಿನ ನಮ್ಮ ವಿಶೇಷ ಸಂಬಂಧಕ್ಕೆ ಸಾಕ್ಷಿಯಾಗಿದೆ. ಜಂಟಿಯಾಗಿ ಅಭಿವೃದ್ಧಿಪಡಿಸಿದ ಈ ಉಪಗ್ರಹದ ಯಶಸ್ವಿ ಉಡಾವಣೆಗಾಗಿ ನಾನು @dittbhutan ಮತ್ತು @isro ವನ್ನು ಶ್ಲಾಘಿಸುತ್ತೇನೆ."

***



(Release ID: 1879230) Visitor Counter : 97