ಪ್ರಧಾನ ಮಂತ್ರಿಯವರ ಕಛೇರಿ

ಖಜಕಸ್ತಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಧ್ಯಕ್ಷ ಖಾಸಿಮ್ ಜೋಮರ್ಟ್ ತೊಕಾಯೆವ್ ಅವರನ್ನು ಅಭಿನಂದಿಸಿದ ಪ್ರಧಾನ ಮಂತ್ರಿಗಳು

Posted On: 21 NOV 2022 10:14PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಖಜಕಸ್ತಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಅಧ್ಯಕ್ಷ ಖಾಸಿಮ್ ಜೋಮರ್ಟ್ ತೊಕಾಯೆವ್ ಅವರನ್ನು ಅಭಿನಂದಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು, "ಖಜಕಸ್ತಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅಧ್ಯಕ್ಷ ಖಾಸಿಮ್ ಜೋಮರ್ಟ್ ತೊಕಾಯೆವ್ ಅವರಿಗೆ ನನ್ನ ಆತ್ಮೀಯ ಅಭಿನಂದನೆಗಳು.

 ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಪಾಲುದಾರಿಕೆಯನ್ನು ಇನ್ನಷ್ಟು ಬಲಗೊಳಿಸಲು ಒಟ್ಟಿಗೆ ಕಾರ್ಯ ನಿರ್ವಹಿಸುವ ಆಶಯದೊಂದಿಗೆ  ಮುಂದುವರಿಯಲಾಗುವುದು" ಎಂದು ಹೇಳಿದ್ದಾರೆ. 

***



(Release ID: 1877901) Visitor Counter : 125