ಪ್ರಧಾನ ಮಂತ್ರಿಯವರ ಕಛೇರಿ

ಗೋವಾದಲ್ಲಿ ನಡೆದ ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಗೆ ಭಾಜನರಾದ ತೆಲುಗು ನಟ, ಮೆಗಾಸ್ಟಾರ್ ಚಿರಂಜೀವಿ ಅವರನ್ನು  ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ.

Posted On: 21 NOV 2022 2:00PM by PIB Bengaluru

ಗೋವಾದಲ್ಲಿ ನಡೆದ ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಗೆ ಭಾಜನರಾದ ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ವಾರ್ತಾ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡೆಗಳ ಕೇಂದ್ರ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ ಪ್ರಧಾನಿ ಮೋದಿ ಅವರು  ಟ್ವೀಟ್ ಮಾಡಿದ್ದಾರೆ;

 "ಚಿರಂಜೀವಿ ಅವರ  ನಟನಾ ಸಾಮರ್ಥ್ಯ  ಗಮನಾರ್ಹವಾಗಿದೆ. ಅಭಿನಯವಷ್ಟೇ ಅಲ್ಲದೇ ಚಿತ್ರರಂಗದಲ್ಲಿನ ಇತರೆ ಸೇವೆ,ಚಿತ್ರಗಳ ವಿವಿಧ ವಿಭಾಗದಲ್ಲಿನ ಕೆಲಸ , ವೈವಿಧ್ಯಮಯ ಪಾತ್ರಗಳೊಂದಿಗೆ ಚಿರಂಜೀವಿ ಆವರ ಅದ್ಭುತ ಸ್ವಭಾವವು ಆಕರ್ಷಕವಾಗಿದೆ. ಚಿರಂಜೀವಿ ಅವರನ್ನು ಅವರ ನಟನೆಯನ್ನು ಪೀಳಿಗೆಯಿಂದ ಪೀಳಿಗೆಯ ಚಲನಚಿತ್ರ ಪ್ರೇಮಿಗಳಿಗೆ ಇಷ್ಟವಾಗುತ್ತಿದೆ. @IFFIGoa ನಲ್ಲಿ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಯನ್ನು ಚಿರಂಜೀವಿ ಅವರು ತಮ್ಮದಾಗಿಸಿಕೊಂಡಿದ್ದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ,‌ಮೆಗಾಸ್ಟಾರ್ ಚಿರಂಜೀವಿ ಅವರನ್ನು ಮೋದಿ ಅವರು ಶ್ಲಾಘಿಸಿದ್ದಾರೆ.

 @KChiruTweets"

*****



(Release ID: 1877723) Visitor Counter : 132