ಪ್ರಧಾನ ಮಂತ್ರಿಯವರ ಕಛೇರಿ
ಮಹಾನ್ ರಾಜ್ಯವಾದ ಅರುಣಾಚಲ ಪ್ರದೇಶಕ್ಕಾಗಿ ಕೆಲಸ ಮಾಡುವುದು ಮತ್ತು ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುವುದು ಗೌರವವಾಗಿದೆ: ಪ್ರಧಾನಿ
ಅರುಣಾಚಲ ಪ್ರದೇಶದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ಪ್ರತಿಕ್ರಿಯೆಗೆ ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.
Posted On:
20 NOV 2022 9:59AM by PIB Bengaluru
ಮಹಾನ್ ರಾಜ್ಯವಾದ ಅರುಣಾಚಲ ಪ್ರದೇಶಕ್ಕಾಗಿ ಕೆಲಸ ಮಾಡುವುದು ಮತ್ತು ಅದರ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುವುದು ಗೌರವದ ಕೆಲಸವಾಗಿದೆ ಎಂದು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರುಣಾಚಲ ಪ್ರದೇಶದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ಪ್ರತಿಕ್ರಿಯೆಗೆ ಪ್ರಧಾನಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ಪ್ರಾರಂಭಿಸಿದ ಅಭಿವೃದ್ಧಿ ಉಪಕ್ರಮಗಳ ಮೆಚ್ಚುಗೆಗಾಗಿ ಟ್ವಿಟರ್‌ನಲ್ಲಿ ಜನರಿಗೆ ಪ್ರತಿಕ್ರಿಯಿಸಿದ್ದಾರೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ಇಟಾನಗರದ ಡೊನ್ಯಿ ಪೋಲೋ ವಿಮಾನ ನಿಲ್ದಾಣವನ್ನು ಉದ್ಘಾಟಿಸಿ, 600 MW ಕಮೆಂಗ್ ಜಲವಿದ್ಯುತ್ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು.
ಈಶಾನ್ಯ ಭಾಗದ ವಾಯು ಸಂಪರ್ಕದಲ್ಲಿ ಭಾರೀ ಅಭಿವೃದ್ಧಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, " ಈಶಾನ್ಯ ಭಾಗದತ್ತ ಸಂಪರ್ಕಕ್ಕೆ ಹೋದಂತೆ ಭಾರೀ ಬದಲಾವಣೆಯಾಗಿರುವ ಅನುಭವವಾಗುತ್ತದೆ.ಈ ಅರುಣಾಚಲ ಪ್ರದೇಶವು ಹೆಚ್ಚೆಚ್ಚು ಪ್ರವಾಸಿಗರನ್ನು ಭೇಟಿ ಮಾಡಲು ಅನುಕೂಲ ಕಲ್ಪಿಸುವುದಲ್ಲದೇ ಈಶಾನ್ಯ ಭಾಗದ ಜನರು ಸುಲಭವಾಗಿ ಇತರ ಭಾಗಗಳಿಗೆ ಪ್ರಯಾಣಿಸಲು ಸಹ ಅನುವು ಮಾಡಿಕೊಡುತ್ತದೆ" ಎಂದು ಟ್ಚಿಟ್ಟರ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಧಾನಿಯವರ ಬದ್ಧತೆಯ ಕುರಿತು ಅಲ್ಲಿನ ನಾಗರಿಕರೊಬ್ಬರು ಕೇಳಿದಾಗ, ಶ್ರೀ ಮೋದಿ ಅವರು ಪ್ರತಿಕ್ರಿಯಿಸಿ, “ಅರುಣಾಚಲ ಪ್ರದೇಶದ ಜನರು ಅಸಾಧಾರಣ ವ್ಯಕ್ತಿತ್ವವುಳ್ಳವರಾಗಿದ್ದಾರೆ. ಇಲ್ಲಿನ ಜನರು ತಮ್ಮ ದೇಶಭಕ್ತಿಯ ಉತ್ಸಾಹದಲ್ಲಿ ಅಚಲರಾಗಿದ್ದಾರೆ. ಇಂತಹ ಮಹಾನ್ ರಾಜ್ಯಕ್ಕಾಗಿ ಕೆಲಸ ಮಾಡುವುದು ಮತ್ತು ಅದರ ನಿಜವಾದ ಸಾಮರ್ಥ್ಯವನ್ನು ಅರಿತು ಅದಕ್ಕಾಗಿ ಸಹಾಯ ಮಾಡುವುದು ಗೌರವದ ಕೆಲಸವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
*****
(Release ID: 1877559)
Visitor Counter : 166
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam