ವಾರ್ತಾ ಮತ್ತು ಪ್ರಸಾರ ಸಚಿವಾಲಯ

“ಭಾರತದಲ್ಲಿ ಉಪಗ್ರಹ ಟಿವಿ ಚಾನೆಲ್ಗಳ ಅಪ್ಲಿಂಕ್ ಮತ್ತು ಡೌನ್ಲಿಂಕ್ ಕುರಿತ ಮಾರ್ಗಸೂಚಿಗಳು, 2022” ಕ್ಕೆ ಸಂಪುಟದ ಅನುಮೋದನೆ

Posted On: 09 NOV 2022 3:36PM by PIB Bengaluru

ಕೇಂದ್ರ ಸಚಿವ ಸಂಪುಟವು "ಭಾರತದಲ್ಲಿ ಟಿವಿ ಚಾನೆಲ್ಗಳ ಅಪ್ಲಿಂಕ್ ಮತ್ತು ಡೌನ್ಲಿಂಕ್ ಕುರಿತ ಮಾರ್ಗಸೂಚಿಗಳು, 2022" ಕ್ಕೆ ಅನುಮೋದನೆ ನೀಡಿದೆ.  ಟಿವಿ ಚಾನೆಲ್ಗಳ ಅಪ್ಲಿಂಕ್ ಮತ್ತು ಡೌನ್ಲಿಂಕ್, ಟೆಲಿಪೋರ್ಟ್ಗಳು/ಟೆಲಿಪೋರ್ಟ್ ಹಬ್ಗಳ ಸ್ಥಾಪನೆ, ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ (ಡಿ ಎಸ್ ಎನ್ ಜಿ)/ ಸ್ಯಾಟಲೈಟ್ ಸುದ್ದಿ ಸಂಗ್ರಹ (ಎಸ್ ಎನ್ ಜಿ)/ ಎಲೆಕ್ಟ್ರಾನಿಕ್ ಸುದ್ದಿ ಸಂಗ್ರಹ (ಇ ಎನ್ ಜಿ) ವ್ಯವಸ್ಥೆಗಳು, ಭಾರತೀಯ ಸುದ್ದಿ ಸಂಸ್ಥೆಗಳಿಂದ ಅಪ್ಲಿಂಕ್ ಮತ್ತು ನೇರ ಪ್ರಸಾರದ ತಾತ್ಕಾಲಿಕ ಅಪ್ಲಿಂಕ್ ಬಳಕೆಗಾಗಿ ಭಾರತದಲ್ಲಿ ನೋಂದಾಯಿಸಲಾದ ಕಂಪನಿಗಳು/ಎಲ್ಎಲ್ಪಿಗಳಿಗೆ ಅನುಮತಿ ನೀಡುವುದನ್ನು ಈ ಮಾರ್ಗಸೂಚಿಗಳು ಸುಲಭಗೊಳಿಸುತ್ತವೆ.

•    ಹೊಸ ಮಾರ್ಗಸೂಚಿಗಳು ಟಿವಿ ಚಾನೆಲ್ಗಳ ಅನುಸರಣೆಯನ್ನು ಸುಲಭಗೊಳಿಸುತ್ತವೆ
•    ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಯಾವುದೇ ಪೂರ್ವಾನುಮತಿ ಅನುಮತಿ ಅಗತ್ಯವಿಲ್ಲ
•    ಭಾರತೀಯ ಟೆಲಿಪೋರ್ಟ್ಗಳು ವಿದೇಶಿ ಚಾನೆಲ್ಗಳನ್ನು ಅಪ್ಲಿಂಕ್ ಮಾಡಬಹುದು
•    ರಾಷ್ಟ್ರೀಯ/ಸಾರ್ವಜನಿಕ ಹಿತಾಸಕ್ತಿ ವಿಷಯ ಪ್ರಸಾರದಲ್ಲಿ ಹೊಣೆಗಾರಿಕೆ

ಪರಿಷ್ಕೃತ ಮಾರ್ಗಸೂಚಿಗಳ ಪ್ರಮುಖ ಪ್ರಯೋಜನಗಳು ಈ ಕೆಳಗಿನಂತಿವೆ: 
i. ಅನುಮತಿ ಹೊಂದಿರುವವರಿಗೆ ಸುಲಭ ಅನುಸರಣೆ
ಎ. ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಅನುಮತಿ ಪಡೆಯುವ ಅಗತ್ಯವನ್ನು ತೆಗೆದುಹಾಕಲಾಗಿದೆ; ನೇರ ಪ್ರಸಾರ ಮಾಡಲು ಕಾರ್ಯಕ್ರಮಗಳ ಪೂರ್ವ ನೋಂದಣಿ ಮಾತ್ರ ಅಗತ್ಯವಾಗಿರುತ್ತದೆ. 
ಬಿ. ಭಾಷೆಯ ಬದಲಾವಣೆ ಅಥವಾ ಸ್ಟ್ಯಾಂಡರ್ಡ್ ಡೆಫಿನಿಷನ್ (ಎಸ್ ಡಿ) ನಿಂದ ಹೈ ಡೆಫಿನಿಷನ್ (ಹೆಚ್ ಡಿ) ಗೆ ಅಥವಾ ಇದರ ವಿರುದ್ದವಾದ ಪ್ರಸರಣ ಪರಿವರ್ತನೆಗೆ ಪೂರ್ವಾ ಅನುಮತಿಯ ಅಗತ್ಯವಿಲ್ಲ; ಕೇವಲ ಪೂರ್ವ ಸೂಚನೆಯ ಅಗತ್ಯವಿದೆ.
ಸಿ. ತುರ್ತು ಸಂದರ್ಭದಲ್ಲಿ, ಕೇವಲ ಇಬ್ಬರು ನಿರ್ದೇಶಕರು/ಪಾಲುದಾರರನ್ನು ಹೊಂದಿರುವ ಕಂಪನಿ/ಎಲ್ಎಲ್ಪಿಗಳು ವ್ಯವಹಾರ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸಕ್ರಿಯಗೊಳಿಸಲು ಅಂತಹ ನೇಮಕಾತಿಯ ನಂತರ ಭದ್ರತಾ ಅನುಮತಿಗೆ ಒಳಪಟ್ಟು ನಿರ್ದೇಶಕರು/ಪಾಲುದಾರರನ್ನು ಬದಲಾಯಿಸಬಹುದು;
ಡಿ.   ಕಂಪನಿ/ ಎಲ್ಎಲ್ಪಿಗಳು ಡಿ ಎಸ್ ಎನ್ ಜಿ ಹೊರತುಪಡಿಸಿ ಪ್ರತ್ಯೇಕ ಅನುಮತಿಯ ಅಗತ್ಯವಿಲ್ಲದ ಆಪ್ಟಿಕ್ ಫೈಬರ್, ಬ್ಯಾಗ್ ಬ್ಯಾಕ್, ಮೊಬೈಲ್ ಇತ್ಯಾದಿಗಳಂತಹ ಬೇರೆ ಸುದ್ದಿ ಸಂಗ್ರಹಣೆ ಉಪಕರಣಗಳನ್ನು ಬಳಸಬಹುದು.

ii ವ್ಯವಹಾರವನ್ನು ಸುಲಭಗೊಳಿಸುವುದು

ಎ. ಅನುಮತಿ ನೀಡಲು ನಿರ್ದಿಷ್ಟ ಕಾಲಮಿತಿಗಳನ್ನು ಪ್ರಸ್ತಾಪಿಸಲಾಗಿದೆ.
ಬಿ. ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ಎಲ್ಎಲ್ಪಿ) ಸಂಸ್ಥೆಗಳು ಸಹ ಅನುಮತಿಯನ್ನು ಪಡೆಯಬಹುದು
ಸಿ. ಭಾರತೀಯ ಟೆಲಿಪೋರ್ಟ್ಗಳಿಂದ ವಿದೇಶಿ ಚಾನೆಲ್ಗಳನ್ನು ಅಪ್ಲಿಂಕ್ ಮಾಡಲು ಎಲ್ಎಲ್ಪಿಗಳು/ಕಂಪನಿಗಳಿಗೆ ಅವಕಾಶ ನೀಡಲಾಗುವುದು, ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಭಾರತವನ್ನು ಇತರ ದೇಶಗಳಿಗೆ ಟೆಲಿಪೋರ್ಟ್-ಹಬ್ ಆಗಿ ಮಾಡುತ್ತದೆ.
ಡಿ. ಸುದ್ದಿ ಸಂಸ್ಥೆಯು ಪ್ರಸ್ತುತ ಇರುವ ಒಂದು ವರ್ಷದ ಬದಲಾಗಿ 5 ವರ್ಷಗಳ ಅವಧಿಗೆ ಅನುಮತಿಯನ್ನು ಪಡೆಯಬಹುದು;
ಇ. ಪ್ರಸ್ತುತ ಇರುವ ಒಂದು ಟೆಲಿಪೋರ್ಟ್/ಉಪಗ್ರಹ ಬಳಕೆಯ ಬದಲಿಗೆ ಒಂದಕ್ಕಿಂತ ಹೆಚ್ಚು ಟೆಲಿಪೋರ್ಟ್/ಉಪಗ್ರಹಗಳ ಸೌಲಭ್ಯಗಳನ್ನು ಬಳಸಿಕೊಂಡು ಚಾನಲ್ ಅನ್ನು ಅಪ್ಲಿಂಕ್ ಮಾಡಬಹುದು;
ಎಫ್. ಕಂಪನಿಗಳ ಕಾಯಿದೆ/ಸೀಮಿತ ಹೊಣೆಗಾರಿಕೆ ಕಾಯಿದೆಯಡಿ ಇರುವ ಅವಕಾಶದಂತೆ ಟಿವಿ ಚಾನೆಲ್/ಟೆಲಿಪೋರ್ಟ್ ಅನ್ನು ಕಂಪನಿ/ಎಲ್ಎಲ್ಪಿಗೆ ವರ್ಗಾಯಿಸಲು ಅನುಮತಿ ನೀಡುವ ಸಾಧ್ಯತೆಯನ್ನು ಇದು ವಿಸ್ತರಿಸಿದೆ.

iii ಸರಳೀಕರಣ ಮತ್ತು ತರ್ಕಬದ್ಧಗೊಳಿಸುವಿಕೆ
ಎ. ಎರಡು ಪ್ರತ್ಯೇಕ ಮಾರ್ಗಸೂಚಿಗಳ ಬದಲಿಗೆ ಮಾರ್ಗಸೂಚಿಗಳ ಒಂದು ಸಂಯೋಜಿತ ವ್ಯವಸ್ಥೆ
ಬಿ. ನಕಲು ಮತ್ತು ಸಾಮಾನ್ಯ ಮಾನದಂಡಗಳನ್ನು ತಪ್ಪಿಸಲು ಮಾರ್ಗಸೂಚಿಗಳ ರಚನೆಯನ್ನು ವ್ಯವಸ್ಥಿತಗೊಳಿಸಲಾಗಿದೆ.
ಸಿ. ದಂಡ ಷರತ್ತುಗಳನ್ನು ತರ್ಕಬದ್ಧಗೊಳಿಸಲಾಗಿದೆ ಮತ್ತು ಪ್ರಸ್ತುತ ಇರುವ ಏಕರೂಪ ದಂಡದ ಬದಲಾಗಿ ವಿಭಿನ್ನ ರೀತಿಯ ಉಲ್ಲಂಘನೆಗಳಿಗೆ ಪ್ರತ್ಯೇಕ ದಂಡಗಳನ್ನು ಪ್ರಸ್ತಾಪಿಸಲಾಗಿದೆ.

iv. ಇತರೆ ಮುಖ್ಯಾಂಶಗಳು
ಎ. ಚಾನೆಲ್ ಅನ್ನು ಅಪ್ಲಿಂಕ್ ಮಾಡಲು ಮತ್ತು ಡೌನ್ಲಿಂಕ್ ಮಾಡಲು ಅನುಮತಿ ಹೊಂದಿರುವ ಕಂಪನಿಗಳು/ಎಲ್ಎಲ್ಪಿಗಳು ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ಸಾಮಾಜಿಕ ಪ್ರಸ್ತುತತೆಯ ವಿಷಯಗಳ ಮೇಲೆ ಕಾರ್ಯಸಾಧ್ಯವಲ್ಲದ್ದನ್ನು ಹೊರತುಪಡಿಸಿ) ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ಸಾರ್ವಜನಿಕ ಸೇವೆಯ ಪ್ರಸಾರವನ್ನು ಮಾಡಬಹುದು.
ಬಿ. ಸಿ ಬ್ಯಾಂಡ್ ಹೊರತುಪಡಿಸಿ ಫ್ರೀಕ್ವೆನ್ಸಿ ಬ್ಯಾಂಡ್ನಲ್ಲಿ ಅಪ್ಲಿಂಕ್ ಮಾಡುವ ಟಿವಿ ಚಾನೆಲ್ಗಳು ತಮ್ಮ ಸಂಕೇತಗಳನ್ನು ಎನ್ಕ್ರಿಪ್ಟ್ ಮಾಡುವುದು ಕಡ್ಡಾಯವಾಗಿರುತ್ತದೆ. 
ಸಿ. ಮಾರ್ಗಸೂಚಿಗಳ ಪ್ರಕಾರ, ಅನುಮತಿಗಳನ್ನು ಹೊಂದಿರುವ ಕಂಪನಿಗಳು/ಎಲ್ಎಲ್ಪಿಗಳಿಗೆ ನವೀಕರಣಗಳ ಸಮಯದಲ್ಲಿ ನಿವ್ವಳ ಮೌಲ್ಯದ ಅವಶ್ಯಕತೆ ಇರುತ್ತದೆ.
ಡಿ. ಬಾಕಿ ಪಾವತಿಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಠೇವಣಿಗಳನ್ನು ಒದಗಿಸಬೇಕು.

Click here for Detailed Guidelines

*****



(Release ID: 1874746) Visitor Counter : 199