ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಧನ್ ತೆರಸ್ ಹಬ್ಬದಂದು ನಾಗರಿಕರಿಗೆ ಶುಭ ಕೋರಿದ ಪ್ರಧಾನ ಮಂತ್ರಿ


ಸಾಂಪ್ರದಾಯಿಕ ಔಷಧ ಮತ್ತು ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುವವರ ಪ್ರಯತ್ನಗಳಿಗೆ  ಶ್ಲಾಘನೆ

ಜಾಗತಿಕ ಆಯುಷ್ ಶೃಂಗಸಭೆಯಲ್ಲಿ ಮಾಡಿದ ಇತ್ತೀಚಿನ ಭಾಷಣವನ್ನು ಹಂಚಿಕೊಂಡ ಪ್ರಧಾನ ಮಂತ್ರಿ 

Posted On: 22 OCT 2022 7:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ ತೆರಸ್ ನ ಶುಭ ಸಂದರ್ಭದಲ್ಲಿ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ. ಆರೋಗ್ಯ ಮತ್ತು ಸ್ವಾಸ್ಥ್ಯದೊಂದಿಗೆ ಧನ್ ತೆರಸ್ ನ ನಿಕಟ ಸಂಬಂಧವನ್ನು ಒತ್ತಿ ಹೇಳಿರುವ ಪ್ರಧಾನಮಂತ್ರಿಯವರು, ಭಾರತದ ಸಾಂಪ್ರದಾಯಿಕ ಪರಂಪರಾಗತ ಔಷಧಗಳು ಮತ್ತು ಯೋಗದ ಕಡೆಗೆ ಜಾಗತಿಕ ಗಮನವನ್ನು ಸೆಳೆಯುತ್ತಿರುವುದನ್ನು ಗುರುತಿಸಿರುವುದಲ್ಲದೆ ಈ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಅವರು ಜಾಗತಿಕ ಆಯುಷ್ ಶೃಂಗಸಭೆಯಲ್ಲಿ ತಾವು ಮಾಡಿರುವ  ಇತ್ತೀಚಿನ ಭಾಷಣವನ್ನು ಸಹ ಹಂಚಿಕೊಂಡಿದ್ದಾರೆ. 
ಈ ಬಗ್ಗೆ  ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ: .

"ಧನ್ ತೆರಸ್ ಶುಭ ಸಂದರ್ಭದಲ್ಲಿ ಶುಭಾಶಯಗಳು. ನಮ್ಮ ರಾಷ್ಟ್ರದ ಜನರು ಉತ್ತಮ ಆರೋಗ್ಯ ಮತ್ತು ಸಮೃದ್ಧಿಯ ಆಶೀರ್ವಾದವನ್ನು ಪಡೆಯುವಂತಾಗಲಿ. ಸಂಪತ್ತಿನ ಸೃಷ್ಟಿಯ ಮನೋಭಾವವು ನಮ್ಮ ಸಮಾಜದಲ್ಲಿ ಅರಳುತ್ತಿರಲಿ” 

"ಧನ್ ತೆರಸ್ ಆರೋಗ್ಯ ಮತ್ತು ಯೋಗಕ್ಷೇಮದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತದ ಸಾಂಪ್ರದಾಯಿಕ ಔಷಧಿಗಳು ಮತ್ತು ಯೋಗವು ಜಾಗತಿಕ ಗಮನವನ್ನು ಸೆಳೆದಿದೆ. ಈ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರನ್ನು ನಾನು ಶ್ಲಾಘಿಸುತ್ತೇನೆ. ಇತ್ತೀಚಿನ ಜಾಗತಿಕ ಆಯುಷ್ ಶೃಂಗಸಭೆಯಲ್ಲಿ ಮಾಡಿದ ನನ್ನ ಭಾಷಣವನ್ನು ಹಂಚಿಕೊಳ್ಳುತ್ತಿದ್ದೇನೆ”. ಎಂದವರು ಟ್ವೀಟ್ ನಲ್ಲಿ ಹೇಳಿದ್ದಾರೆ.

*****



(Release ID: 1870353) Visitor Counter : 157