ಪ್ರಧಾನ ಮಂತ್ರಿಯವರ ಕಛೇರಿ

ಅಕ್ಟೋಬರ್ 18 ರಂದು ಲೋಥಾಲ್‌ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣದ ಕಾಮಗಾರಿಯ ಪ್ರಗತಿಯನ್ನು ಪ್ರಧಾನಮಂತ್ರಿಯವರು ಪರಿಶೀಲಿಸಲಿದ್ದಾರೆ


ಎನ್‌ ಎಂ ಎಚ್‌ ಸಿ ಸಂಕೀರ್ಣವು ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಕಡಲ ಪರಂಪರೆಯನ್ನು ಹೆಮ್ಮೆಯಿಂದ ಪ್ರದರ್ಶಿಸಲಿದೆ 
 
ಇದು ಈ ವಿಧದಲ್ಲಿಯೇ ವಿಶೇಷ ಯೋಜನೆಯಾಗಿದ್ದು, ಎನ್‌ ಎಂ ಎಚ್‌ ಸಿ ಸಂಕೀರ್ಣವನ್ನು ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು

ಸುಮಾರು ರೂ.3500 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ

Posted On: 17 OCT 2022 7:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 18ನೇ ಅಕ್ಟೋಬರ್ 2022 ರಂದು ಸುಮಾರು ಸಂಜೆ 5 ಗಂಟೆಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಗುಜರಾತ್‌ನ ಲೋಥಾಲ್‌ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣದ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ.  ನಂತರ ಅವರು ಭಾಷಣವನ್ನು ಮಾಡುವರು.

ಲೋಥಾಲ್ ಹರಪ್ಪನ್ ನಾಗರಿಕತೆಯ ಪ್ರಮುಖ ನಗರಗಳಲ್ಲಿ ಒಂದಾಗಿತ್ತು ಮತ್ತು ಇದು ಅತ್ಯಂತ ಹಳೆಯ ಮಾನವ ನಿರ್ಮಿತ ನೌಕಾನೆಲೆಯ ಆವಿಷ್ಕಾರಕ್ಕೆ ಹೆಸರುವಾಸಿಯಾಗಿದೆ. ಲೋಥಾಲ್‌ನಲ್ಲಿರುವ ಕಡಲ ಪರಂಪರೆಯ ಸಂಕೀರ್ಣವು ನಗರದ ಐತಿಹಾಸಿಕ ಪರಂಪರೆ ಮತ್ತು ಪರಂಪರೆಗೆ ಸೂಕ್ತವಾದ ಗೌರವವಾಗಿದೆ.

ಲೋಥಾಲ್‌ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣವನ್ನು (ಎನ್ ಎಂ ಎಚ್ ಸಿ ) ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಕಡಲ ಪರಂಪರೆಯನ್ನು ಪ್ರದರ್ಶಿಸಲು ಮತ್ತು ಲೋಥಾಲ್ ಅನ್ನು ವಿಶ್ವ ದರ್ಜೆಯ ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿ ಹೊರಹೊಮ್ಮಲು ಸಹಾಯ ಮಾಡಲು ಒಂದು ವಿಶೇಷ ಯೋಜನೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಯ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನವು ಮತ್ತಷ್ಟು ದೊರೆತು ಈ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ಸಹ ಹೆಚ್ಚಿಸುತ್ತದೆ.

2022ರ ಮಾರ್ಚ್‌ನಲ್ಲಿ ಆರಂಭವಾದ ಈ ಸಂಕೀರ್ಣವನ್ನು ಸುಮಾರು 3500 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಹರಪ್ಪನ್ ವಾಸ್ತುಶಿಲ್ಪ ಮತ್ತು ಜೀವನಶೈಲಿಯನ್ನು ಮರುಸೃಷ್ಟಿಸಲು ಲೋಥಲ್ ಮಿನಿ ಮನರಂಜನೆಯಂತಹ ಹಲವಾರು ನವೀನ ಮತ್ತು ವಿಶಿಷ್ಟ ಲಕ್ಷಣಗಳನ್ನು ಹೊಂದಿರುತ್ತದೆ; ನಾಲ್ಕು ಥೀಮ್ ಪಾರ್ಕ್‌ಗಳು - ಮೆಮೋರಿಯಲ್ ಥೀಮ್ ಪಾರ್ಕ್, ಮೆರಿಟೈಮ್ ಮತ್ತು ನೇವಿ ಥೀಮ್ ಪಾರ್ಕ್, ಹವಾಮಾನ ಥೀಮ್ ಪಾರ್ಕ್ ಮತ್ತು ಸಾಹಸ ಮತ್ತು ಅಮ್ಯೂಸ್‌ಮೆಂಟ್ ಥೀಮ್ ಪಾರ್ಕ್; ವಿಶ್ವದ ಅತಿ ಎತ್ತರದ ಲೈಟ್ ಹೌಸ್ ಮ್ಯೂಸಿಯಂ; ಹರಪ್ಪ ನಾಗರಿಕತೆಯ ಕಾಲದಿಂದ ಇಲ್ಲಿಯವರೆಗೆ ಭಾರತದ ಕಡಲ ಪರಂಪರೆಯನ್ನು ಪ್ರದರ್ಶಿಸುವ ಹದಿನಾಲ್ಕು ಗ್ಯಾಲರಿಗಳು; ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವೈವಿಧ್ಯಮಯ ಕಡಲ ಪರಂಪರೆಯನ್ನು ಪ್ರದರ್ಶಿಸುವ ಕರಾವಳಿ ರಾಜ್ಯಗಳ ಪೆವಿಲಿಯನ್  ಇತ್ಯಾದಿಗಳನ್ನು ಹೊಂದಿರುತ್ತವೆ.



(Release ID: 1869608) Visitor Counter : 111