ಪ್ರಧಾನ ಮಂತ್ರಿಯವರ ಕಛೇರಿ

ಅಕ್ಟೋಬರ್‌ 18ರಂದು 90ನೇ ಇಂಟರ್‌ಪೋಲ್‌ ಸಾಮಾನ್ಯ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ

Posted On: 17 OCT 2022 3:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್‌ 18ರಂದು ಮಧ್ಯಾಹ್ನ 1.45ಕ್ಕೆ ನವದೆಹಲಿಯ ಪ್ರಗತಿ ಮೈದಾನದಲ್ಲಿ 90ನೇ ಇಂಟರ್‌ಪೋಲ್‌ ಸಾಮಾನ್ಯ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಅಕ್ಟೋಬರ್‌ 18 ರಿಂದ 21 ರವರೆಗೆ ಇಂಟರ್‌ಪೋಲ್‌ನ 90 ನೇ ಸಾಮಾನ್ಯ ಸಭೆ ನಡೆಯಲಿದೆ. ಸಚಿವರು, ವಿವಿಧ ದೇಶಗಳ ಪೊಲೀಸ್‌ ಮುಖ್ಯಸ್ಥರು, ರಾಷ್ಟ್ರೀಯ ಕೇಂದ್ರೀಯ ಬ್ಯೂರೋಗಳ ಮುಖ್ಯಸ್ಥರು ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಒಳಗೊಂಡ 195 ಇಂಟರ್‌ಪೋಲ್‌ ಸದಸ್ಯ ರಾಷ್ಟ್ರಗಳ ನಿಯೋಗಗಳು ಸಭೆಯಲ್ಲಿ ಭಾಗವಹಿಸಲಿವೆ. ಸಾಮಾನ್ಯ ಸಭೆಯು ಇಂಟರ್‌ಪೋಲ್‌ನ ಸರ್ವೋಚ್ಚ ಆಡಳಿತ ಮಂಡಳಿಯಾಗಿದೆ ಮತ್ತು ಅದರ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ವರ್ಷಕ್ಕೊಮ್ಮೆ ಸಭೆ ಸೇರುತ್ತದೆ.

ಸುಮಾರು 25 ವರ್ಷಗಳ ಅಂತರದ ನಂತರ ಇಂಟರ್‌ಪೋಲ್‌ ಸಾಮಾನ್ಯ ಸಭೆಯು ಭಾರತದಲ್ಲಿ ನಡೆಯುತ್ತಿದೆ - ಇದು ಕೊನೆಯ ಬಾರಿಗೆ 1997 ರಲ್ಲಿನಡೆದಿತ್ತು. ಭಾರತದ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ2022 ರಲ್ಲಿ ನವದೆಹಲಿಯಲ್ಲಿಇಂಟರ್‌ಪೋಲ್‌ ಸಾಮಾನ್ಯ ಸಭೆಯನ್ನು ಆಯೋಜಿಸುವ ಭಾರತದ ಪ್ರಸ್ತಾಪವನ್ನು ಸಾಮಾನ್ಯ ಸಭೆಯು ಅಗಾಧ ಬಹುಮತದೊಂದಿಗೆ ಅಂಗೀಕರಿಸಿತು. ಈ ಕಾರ್ಯಕ್ರಮವು ಭಾರತದ ಕಾನೂನು ಮತ್ತು ಸುವ್ಯವಸ್ಥೆ ಯಲ್ಲಿನ ಅತ್ಯುತ್ತಮ ಕ್ರಮಗಳನ್ನು ಇಡೀ ವಿಶ್ವಕ್ಕೆ ಪ್ರದರ್ಶಿಸುವ ಅವಕಾಶವನ್ನು ಒದಗಿಸುತ್ತದೆ.

ಕೇಂದ್ರ ಗೃಹ ಸಚಿವ, ಇಂಟರ್‌ಪೋಲ್‌ ಅಧ್ಯಕ್ಷ  ಅಹ್ಮದ್‌ ನಾಸಿರ್‌ ಅಲ್‌ ರೈಸಿ ಮತ್ತು ಸಿಬಿಐ ನಿರ್ದೇಶಕ ಜನರಲ್‌ ಶ್ರೀ ಜುರ್ಗೆನ್‌ ಸ್ಟಾಕ್‌ ಅವರು ಈ ಸಂದರ್ಭದಲ್ಲಿಉಪಸ್ಥಿತರಿರುವರು.

******



(Release ID: 1868694) Visitor Counter : 113