ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮೈಸೂರು ದಸರಾ ಆಚರಣೆಯ ಇಣುಕು ನೋಟಗಳನ್ನು ಹಂಚಿಕೊಂಡ ಪ್ರಧಾನಿ

प्रविष्टि तिथि: 06 OCT 2022 3:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೈಸೂರು ದಸರಾ ಆಚರಣೆಯ ಇಣುಕು ನೋಟಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ, ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಸುಂದರ ರೀತಿಯಲ್ಲಿ ಸಂರಕ್ಷಿಸುವಲ್ಲಿ ಮೈಸೂರಿನ ಜನರ ಬದ್ಧತೆಯನ್ನು ಅವರು ಶ್ಲಾಘಿಸಿದ್ದಾರೆ. 2022ರ ಯೋಗ ದಿನದ ಸಂದರ್ಭದಲ್ಲಿ ತಾವು ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದನ್ನು ಪ್ರಧಾನಮಂತ್ರಿಯವರು ಸ್ಮರಿಸಿದ್ದಾರೆ.

ನಾಗರಿಕರೊಬ್ಬರ ಟ್ವೀಟ್ ಅನ್ನು ಉಲ್ಲೇಖಿಸಿ, ಪ್ರಧಾನಮಂತ್ರಿಯವರು ಟ್ವೀಟ್ ಹೀಗೆ ಮಾಡಿದ್ದಾರೆ:

“ಮೈಸೂರು ದಸರಾ ನಯನ ಮನೋಹರವಾದುದು. ಮೈಸೂರಿನ ಜನರು ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಇಷ್ಟು ಸುಂದರವಾಗಿ ಕಾಪಾಡಿಕೊಂಡಿರುವುದಕ್ಕೆ ನಾನು ಅವರನ್ನು ಶ್ಲಾಘಿಸುತ್ತೇನೆ. 2022ರ ಯೋಗ ದಿನದಂದು ನನ್ನ ಮೈಸೂರು ಭೇಟಿಯ ಪ್ರೀತಿಯ ನೆನಪುಗಳು ನನ್ನಲ್ಲಿವೆ.

*****


 


(रिलीज़ आईडी: 1865627) आगंतुक पटल : 189
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Manipuri , Assamese , Punjabi , Gujarati , Odia , Tamil , Telugu , Malayalam