ಪ್ರಧಾನ ಮಂತ್ರಿಯವರ ಕಛೇರಿ

ಲತಾ ಮಂಗೇಶ್ಕರ್ ಅವರ ಜಯಂತಿಯಂದು ಅವರನ್ನು ಸ್ಮರಿಸಿದ ಪ್ರಧಾನಮಂತ್ರಿ

Posted On: 28 SEP 2022 8:54AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲತಾ ಮಂಗೇಶ್ಕರ್ ಅವರ ಜಯಂತಿಯಂದು ಅವರನ್ನು ಸ್ಮರಿಸಿದ್ದಾರೆ.

ಅಯೋಧ್ಯೆಯ ವೃತ್ತವೊಂದಕ್ಕೆ ಲತಾ ದೀದಿ ಅವರ ಹೆಸರನ್ನು ಇಡಲಾಗುವುದು ಎಂದು ತಿಳಿಸಿದ ಶ್ರೀ ನರೇಂದ್ರ ಮೋದಿ ಅವರು, ಇದು ಶ್ರೇಷ್ಠ ಭಾರತೀಯ ಐಕಾನ್ ಗಳಲ್ಲಿ ಒಬ್ಬರಾದ ಲತಾ ದೀದಿ ಅವರಿಗೆ ಸೂಕ್ತವಾದ ಗೌರವವಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.

"ಲತಾ ದೀದಿ ಅವರ ಜನ್ಮದಿನದಂದು ಅವರನ್ನು ಸ್ಮರಿಸುತ್ತೇನೆ. ನಾನು ನೆನಪಿಸಿಕೊಳ್ಳುವುದು ಬಹಳಷ್ಟಿದೆ... ನೂರಾರು ಬಾರಿ ಅವರೊಂದಿಗಿನ ಸಂವಹನಗಳಲ್ಲಿ ಅವರು ತುಂಬಾ ವಾತ್ಸಲ್ಯವನ್ನು ಉಣಬಡಿಸಿದ್ದಾರೆ. ಇಂದು, ಅಯೋಧ್ಯೆಯ ವೃತ್ತವೊಂದಕ್ಕೆ ಅವರ ಹೆಸರಿಡಲು ನನಗೆ ಸಂತೋಷವಾಗಿದೆ. ಇದು ಶ್ರೇಷ್ಠ ಭಾರತೀಯ ಐಕಾನ್ ಗ ಳಲ್ಲಿ ಒಬ್ಬರಿಗೆ ಸೂಕ್ತವಾದ ಗೌರವವಾಗಿದೆ," ಎಂದು ಹೇಳಿದ್ದಾರೆ.

 

******(Release ID: 1862889) Visitor Counter : 153