ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಸ್.ಸಿ.ಒ 2022 ರ ಶೃಂಗ ಸಭೆಯಲ್ಲಿ ಮೊದಲ ಬಾರಿಗೆ ವಾರಾಣಸಿಯನ್ನು ಎಸ್.ಸಿ.ಒ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿ ನಾಮನಿರ್ದೇಶನ

Posted On: 16 SEP 2022 11:07PM by PIB Bengaluru

1.     ಉಜ್ಬೇಕಿಸ್ತಾನದ ಸಮರ್ಕಂಡ್ ನಲ್ಲಿ 2022 ರ ಸೆಪ್ಟೆಂಬರ್ 16 ರಂದು ನಡೆದ 22 ನೇ ಶಾಂಘೈ ಸಹಕಾರ ಸಂಘಟನೆ [ಎಸ್.ಸಿ.ಒ] ಮಂಡಳಿಯ ಮುಖ್ಯಸ್ಥರ ಸಭೆಯಲ್ಲಿ 2022 – 2023 ರ ಅವಧಿಯಲ್ಲಿ ವಾರಾಣಸಿ ನಗರವನ್ನು ಮೊದಲ ಎಸ್.ಸಿ.ಒ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿ ಎಂದು ನಾಮನಿರ್ದೇಶನ ಮಾಡಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶೃಂಗಸಭೆಯಲ್ಲಿ ಭಾಗವಹಿಸಿದ್ದರು.  

2.    ಭಾರತ ಮತ್ತು ಎಸ್.ಸಿ.ಒ ಸದಸ್ಯ ರಾಷ್ಟ್ರಗಳ ನಡುವೆ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಮಾನವೀಯ ಬಾಂಧವ್ಯಗಳ ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಮೊಟ್ಟಮೊದಲ ಎಸ್.ಸಿ.ಒ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿಯನ್ನಾಗಿ ನಾಮಕರಣ ಮಾಡಲಾಗಿದೆ. ಎಸ್.ಸಿ.ಒ ಸದಸ್ಯ ರಾಷ್ಟ್ರಗಳೊಂದಿಗೆ ವಿಶೇಷವಾಗಿ ಏಷ್ಯಾದ ಗಣರಾಜ್ಯ ಜೊತೆ  ಭಾರತದ ಪ್ರಾಚೀನ ನಾಗರಿಕತೆಯ ಸಂಬಂಧಗಳನ್ನು ಒತ್ತಿ ಹೇಳುವ ಉದ್ದೇಶವನ್ನು ಇದು ಒಳಗೊಂಡಿದೆ.

3.    ಈ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮದ ಚೌಕಟ್ಟಿನಡಿ 2022-23 ರಲ್ಲಿ ವಾರಾಣಸಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಎಸ್.ಸಿ.ಒ ಸದಸ್ಯ ರಾಷ್ಟ್ರಗಳಿಗೆ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮಗಳಿಗೆ ಭಾರತಶಾಸ್ತ್ರಜ್ಞರು, ವಿದ್ವಾಂಸರು, ಲೇಖಕರು, ಸಂಗೀತಗಾರರು, ಕಲಾವಿದರು, ಮಾಧ್ಯಮ ಛಾಯಾಗ್ರಾಹಕರು, ಪ್ರವಾಸಿ ಬ್ಲಾಗ್ಗರ್ಸ್ ಗಳು ಮತ್ತಿತರ ಅಥಿತಿಗಳನ್ನು ಆಹ್ವಾನಿಸುವ ನಿರೀಕ್ಷೆಯಿದೆ.

4.   ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಎಸ್.ಸಿ.ಒ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಉತ್ತೇಜಿಸುವ ಉದ್ದೇಶದಿಂದ 2021 ರಲ್ಲಿ ದುಶಾನ್ಬೆ ಎಸ್.ಸಿ.ಒ ಶೃಂಗಸಭೆಯಲ್ಲಿ ಎಸ್.ಸಿ.ಒ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿಯ ನಾಮನಿರ್ದೇಶನದ ನಿಯಮಗಳನ್ನು ರೂಪಿಸಲಾಗಿತ್ತು.  

ಸಮರ್ಕಂಡ್

ಸೆಪ್ಟೆಂಬರ್ 16, 2022
 

*****


(Release ID: 1860443) Visitor Counter : 175