ಪ್ರಧಾನ ಮಂತ್ರಿಯವರ ಕಛೇರಿ
ಸೆಮಿಕಂಡಕ್ಟರ್ ಮತ್ತು ಡಿಸ್ ಪ್ಲೇ ಫ್ಯಾಬ್ ತಯಾರಿಕೆಗಾಗಿ ವೇದಾಂತ-ಫಾಕ್ಸ್ ಕಾನ್ ಗ್ರೂಪ್ ಜತೆ ಗುಜರಾತ್ ಸರ್ಕಾರವು 1.54 ಲಕ್ಷ ರೂ. ಕೋಟಿಗಳ ತಿಳಿವಳಿಕಾ ಒಡಂಬಡಿಕೆಗೆ ಸಹಿ ಹಾಕಿದ ನಂತರ ಪ್ರಧಾನಮಂತ್ರಿ ಅವರು ಆಶಾವಾದವನ್ನು ವ್ಯಕ್ತಪಡಿಸಿದರು.
1.54 ಲಕ್ಷ ಕೋಟಿ ರೂ.ಗಳ ಹೂಡಿಕೆಯು ಆರ್ಥಿಕತೆ ಮತ್ತು ಉದ್ಯೋಗಗಳನ್ನು ಹೆಚ್ಚಿಸಲು ಗಮನಾರ್ಹ ಪರಿಣಾಮ ಬೀರುತ್ತದೆ
Posted On:
13 SEP 2022 2:32PM by PIB Bengaluru
ಸೆಮಿಕಂಡಕ್ಟರ್ ಮತ್ತು ಡಿಸ್ ಪ್ಲೇ ಫ್ಯಾಬ್ ತಯಾರಿಕೆಗಾಗಿ ವೇದಾಂತ-ಫಾಕ್ಸ್ ಕಾನ್ ಗ್ರೂಪ್ ಜತೆಗೆ ಗುಜರಾತ್ ಸರ್ಕಾರವು 1.54 ಲಕ್ಷ ರೂ.ಕೋಟಿಗಳ ತಿಳಿವಳಿಕಾ ಒಡಂಬಡಿಕೆಗೆ ಸಹಿ ಹಾಕಿದ ನಂತರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಈ ಹೂಡಿಕೆಯು ಆರ್ಥಿಕತೆ ಮತ್ತು ಉದ್ಯೋಗಗಳನ್ನು ಉತ್ತೇಜಿಸಲು ಗಮನಾರ್ಹ ಪರಿಣಾಮವನ್ನು ಬಿರುತ್ತದೆ ಮತ್ತು ಪೂರಕ ಕೈಗಾರಿಕೆಗಳಿಗೆ ಬೃಹತ್ ಪರಿಸರ ವ್ಯವಸ್ಥೆಯನ್ನು ರಚಿಸಲು ಮತ್ತು ಆ ಮೂಲಕ ನಮ್ಮ ಎಂಎಸ್ಎಂಇಗಳಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಗಮನ ಸೆಳೆದರು.
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು, " ಈ ತಿಳುವಳಿಕಾ ಒಡಂಬಡಿಕೆಯು ಭಾರತದ ಸೆಮಿ ಕಂಡಕ್ಟರ್ ಉತ್ಪಾದನಾ ಮಹತ್ವಾಕಾಂಕ್ಷೆಗಳನ್ನು ವೇಗಗೊಳಿಸುವ ಪ್ರಮುಖ ಹೆಜ್ಜೆಯಾಗಿದೆ. 1.54 ಲಕ್ಷ ಕೋಟಿ ರೂ.ಗಳ ಹೂಡಿಕೆಯು ಆರ್ಥಿಕತೆ ಮತ್ತು ಉದ್ಯೋಗಗಳನ್ನು ಹೆಚ್ಚಿಸಲು ಗಮನಾರ್ಹ ಪರಿಣಾಮವನ್ನು ಸೃಷ್ಟಿಸುತ್ತದೆ. ಇದು ಪೂರಕ ಕೈಗಾರಿಕೆಗಳಿಗೆ ಬೃಹತ್ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ನಮ್ಮ ಎಂಎಸ್ಎಂಇಗಳಿಗೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.
*****
(Release ID: 1859063)
Visitor Counter : 144
Read this release in:
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam