ಪ್ರಧಾನ ಮಂತ್ರಿಯವರ ಕಛೇರಿ
ಹಿರಿಯ ತೆಲುಗು ನಟ ಶ್ರೀ ಯು.ವಿ ಕೃಷ್ಣಂ ರಾಜು ಗಾರು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ
प्रविष्टि तिथि:
11 SEP 2022 10:53AM by PIB Bengaluru
ತೆಲುಗು ಚಿತ್ರರಂಗದ ಹಿರಿಯ ವ್ಯಕ್ತಿ ಶ್ರೀ ಯು.ವಿ. ಕೃಷ್ಣಂ ರಾಜು ಗಾರು ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು,
“ಶ್ರೀ ಯು.ವಿ. ಕೃಷ್ಣಂ ರಾಜು ಗಾರು ಅವರ ನಿಧನ ದುಃಖ ತಂದಿದೆ. ಮುಂದಿನ ಪೀಳಿಗೆ ಅವರ ಸಿನೆಮಾ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಸ್ಮರಿಸಿಕೊಳ್ಳುತ್ತದೆ. ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿದ್ದ ಅವರು ರಾಜಕೀಯ ನಾಯಕರಾಗಿಯೂ ತಮ್ಮ ಛಾಪು ಮೂಡಿಸಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ.” ಎಂದು ಹೇಳಿದ್ದಾರೆ
*****
(रिलीज़ आईडी: 1858513)
आगंतुक पटल : 195
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam